ಕೋಲ್ಕೊತ್ತಾ: ಕರ್ತವ್ಯದಲ್ಲಿದ್ದ ವೈದ್ಯಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ತೀವ್ರತೆ ಪಡೆಯುತ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಭೀಕರ ಅಂಶಗಳು ಬಯಲಾಗಿದ್ದುದೆ.
ಕೋಲ್ಕೊತ್ತಾದ ಆರ್ ಜಿಕರ್ ಹಾಸ್ಪಿಟಲ್ ನಲ್ಲಿ 31 ವರ್ಷದ ಡ್ಯೂಟಿ ಡಾಕ್ಟರ್ ಮೇಲೆ ಅತ್ಯಾಚಾರ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ವೈದ್ಯೆಯ ಕಣ್ಣು, ಬಾಯಿ ಮತ್ತು ಖಾಸಗಿ ಅಂಗಾಂಗದಲ್ಲಿ ರಕ್ತ ಸೋರಿಕೆಯಾಗುತ್ತಿತ್ತು. ಅವಳ ತುಟಿ, ಹೊಟ್ಟೆ ಮತ್ತು ತೊಡೆಯಲ್ಲಿ ಗಾಯದ ಗುರುತುಗಳಿವೆ. ಈ ಎಲ್ಲಾಅಂಶಗಳನ್ನೂ ಈಗ ಪೊಲೀಸರು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಭಟನೆ ಜೋರಾಗಿದ್ದು, ಪ್ರಿನ್ಸಿಪಾಲ್ ರಾಜೀನಾಮೆ ನೀಡಿದ್ದಾರೆ.
ಬೆಳಗಿನ ಜಾವ 3 ರಿಂದ 6 ಗಂಟೆಯೊಳಗಾಗಿ ಕೃತ್ಯ ನಡೆದಿದೆ. ಕರ್ತವ್ಯದಲ್ಲಿದ್ದ ವೈದ್ಯೆ ಊಟ ಮಾಡಿದ ಬಳಿಕ ಕೆಲವು ಹೊತ್ತು ವಿಶ್ರಾಂತಿ ಪಡೆಯಲು ಸೆಮಿನಾರ್ ಹಾಲ್ ಗೆ ಹೋಗಿದ್ದಾಗ ಆರೋಪಿ ಕೃತ್ಯವೆಸಗಿದ್ದಾನೆ. ಬಳಿಕ ತನ್ನ ಮನೆಗೆ ಹೋಗಿದ್ದ ಆರೋಪಿ ಕೆಲವು ಕಾಲ ಮಲಗಿ ನಿದ್ರೆ ಮಾಡಿದ್ದಾನೆ. ಬಳಿಕ ತನ್ನ ಬಟ್ಟೆಗಳನ್ನೆಲ್ಲಾ ತೊಳೆದು ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದ. ಆದರೆ ಆತನ ಶೂನಲ್ಲಿದ್ದ ರಕ್ತದ ಕಲೆ ಪೊಲೀಸರಿಗೆ ಸಾಕ್ಷ್ಯ ಒದಗಿಸಿದೆ.
ಆರೋಪಿ ಈ ಆಸ್ಪತ್ರೆಯ ಸಿಬ್ಬಂದಿ ಅಲ್ಲ ಎಂದು ತಿಳಿದು ಬಂದಿದೆ. ಆದರೆ ಈ ಪ್ರದೇಶದಲ್ಲಿ ಈತ ಓಡಾಡುತ್ತಿದ್ದ ಎಂದು ತಿಳಿದು ಬಂದಿದೆ. ಇನ್ನೊಂದು ಆಘಾತಕಾರಿ ಅಂಶ ಏನಂದ್ರೆ, ವೈದ್ಯೆಯನ್ನು ಹತ್ಯೆ ಮಾಡಿದ ಬಳಿಕ ಅತ್ಯಾಚಾರ ಎಸಗಿರುವ ಶಂಕೆ ವ್ಯಕ್ತವಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296