nammatumakuru

    Subscribe to Updates

    Get the latest creative news from FooBar about art, design and business.

    What's Hot

    ಉದ್ಯೋಗಿಗಳಿಗೆ ಮಹತ್ವದ ಮಾಹಿತಿ: ಕಾರ್ಮಿಕರ ಭವಿಷ್ಯ ನಿಧಿ: ದಾಖಲಾತಿ ವಿವರಗಳು ಇಲ್ಲಿದೆ

    December 12, 2025

    ಬೀದರ್: ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ

    December 12, 2025

    ಪೊಲೀಸ್ ಠಾಣೆ ಆವರಣದಲ್ಲಿ ಕಾರಿನೊಳಗೆ ಅವಿತುಕೊಂಡ ಚಿರತೆ

    December 12, 2025
    Facebook Twitter Instagram
    ಟ್ರೆಂಡಿಂಗ್
    • ಉದ್ಯೋಗಿಗಳಿಗೆ ಮಹತ್ವದ ಮಾಹಿತಿ: ಕಾರ್ಮಿಕರ ಭವಿಷ್ಯ ನಿಧಿ: ದಾಖಲಾತಿ ವಿವರಗಳು ಇಲ್ಲಿದೆ
    • ಬೀದರ್: ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ
    • ಪೊಲೀಸ್ ಠಾಣೆ ಆವರಣದಲ್ಲಿ ಕಾರಿನೊಳಗೆ ಅವಿತುಕೊಂಡ ಚಿರತೆ
    • ತುಮಕೂರಿನಲ್ಲಿ ಉದ್ಘಾಟನೆಗೆ ಸಿದ್ಧಗೊಂಡ ಜಿಲ್ಲಾ ಬಂಜಾರ ಭವನ
    • ಲಂಚ  ಪಡೆಯುತ್ತಿದ್ದ ವೇಳೆ ಡಿಐಸಿ ಜಂಟಿ ನಿರ್ದೇಶಕ ಲೋಕಾಯಕ್ತರ ಬಲೆಗೆ!
    • ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅಡ್ಡಿ: ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ
    • ಚಿಕ್ಕನಾಯಕನಹಳ್ಳಿಯಲ್ಲಿ 2,800 ಕೋ.ರೂ. ಯೋಜನೆ ಕಾಮಗಾರಿ ಪ್ರಗತಿ: ಡಿ.ಕೆ.ಶಿವಕುಮಾರ್
    • ತಿಪಟೂರು  | ಡಿಸೆಂಬರ್ 16ರಂದು ಪತ್ರ ಬರಹಗಾರರಿಂದ ಬೆಳಗಾವಿ ಚಲೋ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ, ಪರಿಸರ ಮಾಲಿನ್ಯ ತಪ್ಪಿಸಿ: ಡಾ.ಎಚ್.ಕೆ.ಎಸ್.ಸ್ವಾಮಿ ಕರೆ
    ತುಮಕೂರು August 12, 2024

    ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸಿ, ಪರಿಸರ ಮಾಲಿನ್ಯ ತಪ್ಪಿಸಿ: ಡಾ.ಎಚ್.ಕೆ.ಎಸ್.ಸ್ವಾಮಿ ಕರೆ

    By adminAugust 12, 2024No Comments3 Mins Read
    thumakur 2

    ತುಮಕೂರು: ಮುಂಬರಲಿರುವ ಗಣೇಶನ ಹಬ್ಬದಲ್ಲಿ ಪರಿಸರಸ್ನೇಹಿ ಗಣಪತಿಗಳನ್ನು ಇಟ್ಟು, ಪೂಜಿಸಿ, ಕೆರೆಕಟ್ಟೆಗಳನ್ನ ಸಂರಕ್ಷಿಸಿ, ಯಾವುದೇ ವಾಯುಮಾಲಿನ್ಯ, ಜಲ ಮಾಲಿನ್ಯ, ಮಣ್ಣಿನ ಮಾಲಿನ್ಯ, ಮಾಡದಂತೆ ದೇವರನ್ನು ಪ್ರಾರ್ಥಿಸಿ, ಪರಿಸರದ ಜೊತೆಗೆ ನಮ್ಮ ಹಬ್ಬಗಳು ಸಹ ಸಾಗಲಿ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಎಚ್.ಕೆ.ಎಸ್. ಸ್ವಾಮಿ ಹಾರೈಸಿದ್ದಾರೆ.

    ಬರಲಿರುವ ಗಣೇಶನ ಹಬ್ಬಕ್ಕೆ ಈಗಾಗಲೇ ಬಣ್ಣ ಬಣ್ಣದ ವೈವಿಧ್ಯಮಯವಾದ ಗಣಪತಿಗಳನ್ನ ಕಲಾವಿದರು ತಯಾರು ಮಾಡಿ ಇಟ್ಟಿದ್ದಾರೆ, ಒಂದೇ ಸಾರಿ ಅವು ಮಾರುಕಟ್ಟೆಗೆ ಬಂದು ಲಗ್ಗೆ ಹಾಕುತ್ತವೆ. ಅದರಲ್ಲಿ ಬೇಕಾದಷ್ಟು ಬಣ್ಣಗಳನ್ನ ಹಚ್ಚಿ, ಅವು ಕೆಲವು ರಾಸಾಯನಿಕಗಳು ಇರಬಹುದು, ಇನ್ನೂ ಕೆಲವು ನೈಸರ್ಗಿಕವಾಗಿರಬಹುದು. ಅವೆರಡರ ವ್ಯತ್ಯಾಸ ತಿಳಿಯದಲೇ ಜನ ರಾಸಾಯನಿಕ ಇರುವ ಗಣಪತಿಗಳನ್ನೇ ಕೊಂಡು ಪೂಜೆ ಮಾಡಿ, ಒಂದೇ ದಿವಸದಲ್ಲಿ ಅಥವಾ ಮೂರನೇ ದಿವಸದಲ್ಲಿ ಸುತ್ತಮುತ್ತಲಿರುವ ಕೆರೆಗಳಿಗೆ, ನದಿಗಳಿಗೆ, ಸಮುದ್ರಗಳಿಗೆ ಬಿಡುತ್ತಿರುವುದರಿಂದ ನೀರಿನಲ್ಲಿ ಬಣ್ಣಗಳು ಕರಗಿ ಅಲ್ಲಿರುವ ಜಲಪ್ರಾಣಿಗಳಿಗೆ ವಿಷವಾಗಿ, ಅವುಗಳು ಸಾವನ್ನಪ್ಪುವುದನ್ನು ನಾವು ತಡೆಯಬೇಕು ಎಂದರು.


    Provided by
    Provided by

    ಹಬ್ಬ ಮಾಡುವ ಸಡಗರದಲ್ಲಿ ಹುಡುಗರು ಬಣ್ಣ ಬಣ್ಣದ ಗಣಪತಿಗಳನ್ನು ಇಟ್ಟು ಪೂಜಿಸಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಅವರಿಗೆ ಪರಿಸರಸ್ನೇಹಿ, ಬಣ್ಣಗಳನ್ನ ಲೇಪನ ಮಾಡದಂತ ಗಣಪತಿಗಳನ್ನು ನೀಡಬೇಕು. ಸಾಧ್ಯವಾದರೆ ಹಿರಿಯರು ಅವರಿಗೆ ಮನದಟ್ಟು ಮಾಡಿಕೊಟ್ಟು, ಬಣ್ಣ ರಯಿತವಾದ, ಸರಳವಾದ ಮಣ್ಣಿನ ಗಣಪತಿಯನ್ನ ಪೂಜಿಸಿ, ಅದನ್ನ ಮತ್ತೆ ಮಣ್ಣಿಗೆ, ನೀರಿಗೆ ವಾಪಸ್ ಬಿಟ್ಟರೆ, ಪರಿಸರ ಸುಂದರವಾಗಿರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ಸಹಕಾರಿಯಾಗಿದೆ. ಆದರೆ ನಾವು ಒಮ್ಮೆ, ನಮ್ಮ ಮಿತಿಮೀರಿ, ಅತಿಯಾದ ಹೆಚ್ಚು ಬಣ್ಣಗಳಿಂದ, ಅತಿ ಎತ್ತರದ ಗಣಪತಿಗಳನ್ನು ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರದ ಗಣಪತಿಗಳನ್ನು ಪೂಜಿಸಿ, ನೀರಿಗೆ ಬಿಟ್ಟು, ಜಲ ಮಾಲಿನ್ಯ, ಮಣ್ಣಿನ ಮಾಲಿನ್ಯ ಮಾಡುತ್ತಿದ್ದೇವೆ, ಇದರ ಬಗ್ಗೆ ಜಾಗೃತಿ ಸಾಲದಾಗಿದೆ, ಇನ್ನು ಹೆಚ್ಚಿನ ಮಟ್ಟದ ಜಾಗೃತಿಯನ್ನು ಮೂಡಿಸಿ, ಜನರಲ್ಲಿ ಪರಿಸರಸ್ನೇಹಿ ಹಬ್ಬಗಳ ಆಚರಣೆ ಬಗ್ಗೆ ಮನದಟ್ಟು ಮಾಡಿಕೊಡಲು ಸಂಘ ಸಂಸ್ಥೆಗಳು, ಸರ್ಕಾರದ ಇಲಾಖೆಗಳು, ಪೋಲೀಸ್ ಇಲಾಖೆ, ಮಾಲಿನ್ಯ ಇಲಾಖೆ, ಇನ್ನು ಹೆಚ್ಚಿನ ಮಟ್ಟದ ಶ್ರಮವಹಿಸಬೇಕಾಗಿದೆ ಎಂದರು.

    ಬಹಳಷ್ಟು ಕಡೆ ಪರಿಸರಸ್ನೇಹಿ ಗಣಪತಿಯೆಂದರೆ ಜನರಿಗೆ ಅರಿವೇ ಇಲ್ಲದಂತಾಗಿದೆ, ಬಣ್ಣ ಇಲ್ಲದ್ದು, ಬಣ್ಣ ಇರುವಂತದ್ದು ಯಾವುದರಲ್ಲಿ ಪರಿಸರ ಹೆಚ್ಚು ಕಾಣುತ್ತದೆ ಎಂಬುದನ್ನು ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳು, ಜನ ಸಂಘಟನೆಗಳು, ಅರ್ಥ ಮಾಡಿಕೊಂಡು, ಕೇವಲ ಬರಿ ಮಣ್ಣಿನಿಂದ ಮಾಡಿದಂತಹ, ಅದ್ಭುತವಾದ ವಿಗ್ರಹಗಳನ್ನು ಪ್ರದರ್ಶನಕ್ಕೆ ಇಟ್ಟು, ಸಾವಿರಾರು ಜನರ ಭಕ್ತಾದಿಗಳಿಗೆ ಮನಸ್ಸಿನಲ್ಲಿ ಪರಿಸರ ಜಾಗೃತಿ ಮೂಡಿಸಲು ಈ ಪರಿಸರ ಹಬ್ಬಗಳು. ಗಣೇಶನ ಹಬ್ಬ ಇರಬಹುದು, ದೀಪಾವಳಿ ಇರಬಹುದು, ಇವೆಲ್ಲವನ್ನೂ ನಾವು ಹೇಗೆ ಮಾಡಬೇಕು, ಜಾಗೃತಿ ಮೂಡಿಸುವುದೇ ಹಬ್ಬಗಳ ಉದ್ದೇಶವಾಗಿದೆ. ದೇವರನ್ನ ನೆಪ ಮಾಡಿಕೊಂಡು, ಪರಿಸರ ಸ್ನೇಹಿ ಜೀವನ ಮಾಡುವುದನ್ನು ಜನರಿಗೆ ಹೇಳಿಕೊಡಬೇಕಾಗಿದೆ. ಪರಿಸರವೇ ದೇವರು, ಈಗಾಗಲೇ ನಮಗೆ ಪರಿಸರದಿಂದ ಆಗುವ ಅನಾಹುತಗಳಿಂದ, ಜೀವ ಹಾನಿ ಮಾಡಿಕೊಂಡು, ಮಳೆ ಬಂದರೆ ನಡುಗಿ, ಹೆದರಿ, ಆಗುವ ಅನಾವುತಗಳಿಂದ, ಜೀವ ಹಾನಿ ಮಾಡುವುದನ್ನ, ನಾವು ನೋಡಿದ್ದೇವೆ. ಹಾಗಾಗಿ ಎಲ್ಲೇ ಆಗಲಿ, ಮಣ್ಣಿನ ಸವಕಳಿಯಾಗದಂಗೆ, ನೀರಿನ ಮಾಲಿನ್ಯಾಗದಂತೆ, ಸಂರಕ್ಷಿಸಿಕೊಂಡು, ಹಬ್ಬ ಆಚರಿಸುವುದು ಮುಖ್ಯವಾಗಬೇಕು. ಇದನ್ನು ನಾವು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

    ಪರಿಸರಸ್ನೇಹಿ ಗಣೇಶನ ಹಬ್ಬದಲ್ಲಿ, ಪ್ಲಾಸ್ಟಿಕ್ ಅನ್ನು ಕಡಿಮೆ ಬಳಕೆ ಮಾಡಿ, ಅವುಗಳನ್ನ ನೀರಿಗೆ ಬಿಡದಂತೆ ಎಚ್ಚರಿಕೆವಹಿಸಿ, ಮರುಬಳಕೆ ಆಗುವಂಥ ವಸ್ತುಗಳನ್ನೇ ಬಳಕೆ ಮಾಡಿ, ಗಣೇಶನ ತರುವುವಾಗ, ಬಿಡುವಾಗ, ಪಟಾಕಿ ಹಚ್ಚಿದಂತೆ ಮಾಡಿ, ಶಬ್ದ ಮಾಲಿನ್ಯವನ್ನು ಸಹ ಹೆಚ್ಚಾಗಿ ಮಾಡದಂತೆ, ಸುತ್ತಮುತ್ತಲಿರುವ ಜನರನ್ನ, ಅವರ ನೆಮ್ಮದಿಯನ್ನ ಕಾಪಾಡಿಕೊಂಡು, ಎಲ್ಲ ಜಾತಿ ಮತ ಭೇದವನ್ನು ಮರೆತು, ಜನರನ್ನ ಸಂಘಟಿಸಿ, ಆದೇ ವ್ಯಕ್ತಿಗಳನ್ನ ರಚನಾತ್ಮಕ ಕಾರ್ಯಕ್ರಮಗಳಿಗೆ ಬಳಸಿ, ಪರಿಸರ ಉಳಿಸಿ, ನೆಮ್ಮದಿಯ ಜೀವನ ಸಾಗಿಸಿ ಎಂಬುದೇ ಈ ಹಬ್ಬಗಳ ಸಂದೇಶ. ಇದನ್ನ ನಾವು ಜನರಿಗೆ, ತಳಮಟ್ಟದಿಂದ, ಎತ್ತರದ ಮಟ್ಟದವರೆಗೂ ಸಹ ತೆಗೆದುಕೊಂಡು ಹೋಗುವಂತಹ ಜವಾಬ್ದಾರಿಯನ್ನ, ಪ್ರತಿಯೊಬ್ಬರು ತೆಗೆದುಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.

    ಬಹಳಷ್ಟು ಜನ ವಿದ್ಯಾರ್ಥಿಗಳಿಗೆ ಗಣಪತಿಯನ್ನು ಇಟ್ಟು ಪೂಜೆ ಮಾಡಿ, ಸಾಂಸ್ಕೃತಿಕ ಚಟುವಟಿಕೆಗಳನ್ನ ಮಾಡಿ, ಹಾಡು, ನೃತ್ಯ, ನಾಟಕ, ಹರಿಕಥೆ, ವಸ್ತು ಪ್ರದರ್ಶನ, ಕೋಲಾಟ, ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಇಂತಹ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಹಬ್ಬಗಳು ಸಹಕಾರಿಯಾಗಿದೆ. ಹಾಗಾಗಿ ಗಣೇಶನ ಮುಂದಿಟ್ಟುಕೊಂಡು, ಬಹಳಷ್ಟು ಸಾಮಾಜಿಕ ಸುಧಾರಣೆಗಳನ್ನ ಮಾಡಬಹುದು. ಗಣೇಶನ ಮಂಟಪದಲ್ಲಿ ಹಾಕಿರೋ ಮೈಕ್ ಸೆಟ್ ಗಳ ಮುಖಾಂತರ, ಒಳ್ಳೊಳ್ಳೆ ಭಾಷಣಗಳನ್ನ, ಹಾಸ್ಯ ಸಾಹಿತಿಗಳನ್ನ, ಕಲಾವಿದರನ್ನು ಪ್ರೋತ್ಸಾಹಿಸಿ, ಒಂದು ಸುಂದರ ಸಮಾಜವನ್ನು ನಿರ್ಮಾಣ ಮಾಡಲು, ಈ ಹಬ್ಬಗಳು ಸಹಕಾರಿಯಾಗಿವೆ. ಎಲ್ಲ ಜಾತಿ ಧರ್ಮ ಮತದವರನ್ನು, ಒಗ್ಗೂಡಿಸಿಕೊಂಡು, ಮನಸ್ಸಿನಲ್ಲಿ ನೆಮ್ಮದಿ ಮೂಡುವಂತಹ ವಿಚಾರಗಳನ್ನು ತಲುಪಿಸಿ, ಸಾಮಾಜಿಕ ಸಮಸ್ಯೆಗಳನ್ನ ಬಗೆಹರಿಸುವ ನಿಟ್ಟಿನಲ್ಲಿ ಹಬ್ಬಗಳು ಆಚರಣೆಯಾಗಲಿ. ಮಕ್ಕಳು ಮಣ್ಣನ್ನ ಮುಟ್ಟಿ, ಕೈಯಿಂದಲೇ ಗಣೇಶನ ಮಾಡಿ, ಪೂಜಿಸಿ, ದುಂದು ವೆಚ್ಚ ಮಾಡದಂತೆ, ಸರಳವಾಗಿ ಹೆಚ್ಚಿನ ಮಟ್ಟದ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿ, ಹಬ್ಬಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    ಲಂಚ  ಪಡೆಯುತ್ತಿದ್ದ ವೇಳೆ ಡಿಐಸಿ ಜಂಟಿ ನಿರ್ದೇಶಕ ಲೋಕಾಯಕ್ತರ ಬಲೆಗೆ!

    December 12, 2025

    ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರದಿಂದ ಅಡ್ಡಿ: ಕೆಪಿಸಿಸಿ ಉಪಾಧ್ಯಕ್ಷ ಮುರಳೀಧರ ಹಾಲಪ್ಪ

    December 12, 2025

    ಗರ್ಭ ಧರಿಸಿದ 325 ಬಾಲಕಿಯರು: ತುಮಕೂರಿನಲ್ಲಿ ಹೆಚ್ಚಿದ ಪೋಕ್ಸೋ ಪ್ರಕರಣಗಳು

    December 11, 2025

    Comments are closed.

    Our Picks

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025

    ಭಾರತ—ರಷ್ಯಾ ಸಂಬಂಧ ಮತ್ತಷ್ಟು ಬಲ: ಪ್ರಧಾನಿ ನರೇಂದ್ರ ಮೋದಿ

    September 25, 2025

    ದೆಹಲಿಯಲ್ಲಿ ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

    September 20, 2025

    ಖ್ಯಾತ ತಮಿಳು ಹಾಸ್ಯ ನಟ ರೋಬೋ ಶಂಕರ್‌ ನಿಧನ

    September 19, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ಉದ್ಯೋಗಿಗಳಿಗೆ ಮಹತ್ವದ ಮಾಹಿತಿ: ಕಾರ್ಮಿಕರ ಭವಿಷ್ಯ ನಿಧಿ: ದಾಖಲಾತಿ ವಿವರಗಳು ಇಲ್ಲಿದೆ

    December 12, 2025

    ತುಮಕೂರು:  ಉದ್ಯೋಗದಾತರ ಕಾರ್ಮಿಕರ ಭವಿಷ್ಯ ನಿಧಿ ಸಂಘಟನೆ (EPFO) ಇದರ ಹಿಂದಿನ ಪಾವತಿಗಳನ್ನು ಕ್ರಮಬದ್ಧಗೊಳಿಸಲು ನವೆಂಬರ್ 1ರಿಂದ ಏಪ್ರಿಲ್ 30ರವರೆಗೆ…

    ಬೀದರ್: ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ

    December 12, 2025

    ಪೊಲೀಸ್ ಠಾಣೆ ಆವರಣದಲ್ಲಿ ಕಾರಿನೊಳಗೆ ಅವಿತುಕೊಂಡ ಚಿರತೆ

    December 12, 2025

    ತುಮಕೂರಿನಲ್ಲಿ ಉದ್ಘಾಟನೆಗೆ ಸಿದ್ಧಗೊಂಡ ಜಿಲ್ಲಾ ಬಂಜಾರ ಭವನ

    December 12, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.