ತುಮಕೂರು: ಮುಂಬರಲಿರುವ ಗಣೇಶನ ಹಬ್ಬದಲ್ಲಿ ಪರಿಸರಸ್ನೇಹಿ ಗಣಪತಿಗಳನ್ನು ಇಟ್ಟು, ಪೂಜಿಸಿ, ಕೆರೆಕಟ್ಟೆಗಳನ್ನ ಸಂರಕ್ಷಿಸಿ, ಯಾವುದೇ ವಾಯುಮಾಲಿನ್ಯ, ಜಲ ಮಾಲಿನ್ಯ, ಮಣ್ಣಿನ ಮಾಲಿನ್ಯ, ಮಾಡದಂತೆ ದೇವರನ್ನು ಪ್ರಾರ್ಥಿಸಿ, ಪರಿಸರದ ಜೊತೆಗೆ ನಮ್ಮ ಹಬ್ಬಗಳು ಸಹ ಸಾಗಲಿ ಎಂದು ಕರ್ನಾಟಕ ಜ್ಞಾನವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷರಾದ ಡಾ.ಎಚ್.ಕೆ.ಎಸ್. ಸ್ವಾಮಿ ಹಾರೈಸಿದ್ದಾರೆ.
ಬರಲಿರುವ ಗಣೇಶನ ಹಬ್ಬಕ್ಕೆ ಈಗಾಗಲೇ ಬಣ್ಣ ಬಣ್ಣದ ವೈವಿಧ್ಯಮಯವಾದ ಗಣಪತಿಗಳನ್ನ ಕಲಾವಿದರು ತಯಾರು ಮಾಡಿ ಇಟ್ಟಿದ್ದಾರೆ, ಒಂದೇ ಸಾರಿ ಅವು ಮಾರುಕಟ್ಟೆಗೆ ಬಂದು ಲಗ್ಗೆ ಹಾಕುತ್ತವೆ. ಅದರಲ್ಲಿ ಬೇಕಾದಷ್ಟು ಬಣ್ಣಗಳನ್ನ ಹಚ್ಚಿ, ಅವು ಕೆಲವು ರಾಸಾಯನಿಕಗಳು ಇರಬಹುದು, ಇನ್ನೂ ಕೆಲವು ನೈಸರ್ಗಿಕವಾಗಿರಬಹುದು. ಅವೆರಡರ ವ್ಯತ್ಯಾಸ ತಿಳಿಯದಲೇ ಜನ ರಾಸಾಯನಿಕ ಇರುವ ಗಣಪತಿಗಳನ್ನೇ ಕೊಂಡು ಪೂಜೆ ಮಾಡಿ, ಒಂದೇ ದಿವಸದಲ್ಲಿ ಅಥವಾ ಮೂರನೇ ದಿವಸದಲ್ಲಿ ಸುತ್ತಮುತ್ತಲಿರುವ ಕೆರೆಗಳಿಗೆ, ನದಿಗಳಿಗೆ, ಸಮುದ್ರಗಳಿಗೆ ಬಿಡುತ್ತಿರುವುದರಿಂದ ನೀರಿನಲ್ಲಿ ಬಣ್ಣಗಳು ಕರಗಿ ಅಲ್ಲಿರುವ ಜಲಪ್ರಾಣಿಗಳಿಗೆ ವಿಷವಾಗಿ, ಅವುಗಳು ಸಾವನ್ನಪ್ಪುವುದನ್ನು ನಾವು ತಡೆಯಬೇಕು ಎಂದರು.
ಹಬ್ಬ ಮಾಡುವ ಸಡಗರದಲ್ಲಿ ಹುಡುಗರು ಬಣ್ಣ ಬಣ್ಣದ ಗಣಪತಿಗಳನ್ನು ಇಟ್ಟು ಪೂಜಿಸಬೇಕೆಂಬ ಆಸೆಯನ್ನು ಹೊಂದಿರುತ್ತಾರೆ. ಅವರಿಗೆ ಪರಿಸರಸ್ನೇಹಿ, ಬಣ್ಣಗಳನ್ನ ಲೇಪನ ಮಾಡದಂತ ಗಣಪತಿಗಳನ್ನು ನೀಡಬೇಕು. ಸಾಧ್ಯವಾದರೆ ಹಿರಿಯರು ಅವರಿಗೆ ಮನದಟ್ಟು ಮಾಡಿಕೊಟ್ಟು, ಬಣ್ಣ ರಯಿತವಾದ, ಸರಳವಾದ ಮಣ್ಣಿನ ಗಣಪತಿಯನ್ನ ಪೂಜಿಸಿ, ಅದನ್ನ ಮತ್ತೆ ಮಣ್ಣಿಗೆ, ನೀರಿಗೆ ವಾಪಸ್ ಬಿಟ್ಟರೆ, ಪರಿಸರ ಸುಂದರವಾಗಿರುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಲು ಸಹಕಾರಿಯಾಗಿದೆ. ಆದರೆ ನಾವು ಒಮ್ಮೆ, ನಮ್ಮ ಮಿತಿಮೀರಿ, ಅತಿಯಾದ ಹೆಚ್ಚು ಬಣ್ಣಗಳಿಂದ, ಅತಿ ಎತ್ತರದ ಗಣಪತಿಗಳನ್ನು ಅಥವಾ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರದ ಗಣಪತಿಗಳನ್ನು ಪೂಜಿಸಿ, ನೀರಿಗೆ ಬಿಟ್ಟು, ಜಲ ಮಾಲಿನ್ಯ, ಮಣ್ಣಿನ ಮಾಲಿನ್ಯ ಮಾಡುತ್ತಿದ್ದೇವೆ, ಇದರ ಬಗ್ಗೆ ಜಾಗೃತಿ ಸಾಲದಾಗಿದೆ, ಇನ್ನು ಹೆಚ್ಚಿನ ಮಟ್ಟದ ಜಾಗೃತಿಯನ್ನು ಮೂಡಿಸಿ, ಜನರಲ್ಲಿ ಪರಿಸರಸ್ನೇಹಿ ಹಬ್ಬಗಳ ಆಚರಣೆ ಬಗ್ಗೆ ಮನದಟ್ಟು ಮಾಡಿಕೊಡಲು ಸಂಘ ಸಂಸ್ಥೆಗಳು, ಸರ್ಕಾರದ ಇಲಾಖೆಗಳು, ಪೋಲೀಸ್ ಇಲಾಖೆ, ಮಾಲಿನ್ಯ ಇಲಾಖೆ, ಇನ್ನು ಹೆಚ್ಚಿನ ಮಟ್ಟದ ಶ್ರಮವಹಿಸಬೇಕಾಗಿದೆ ಎಂದರು.
ಬಹಳಷ್ಟು ಕಡೆ ಪರಿಸರಸ್ನೇಹಿ ಗಣಪತಿಯೆಂದರೆ ಜನರಿಗೆ ಅರಿವೇ ಇಲ್ಲದಂತಾಗಿದೆ, ಬಣ್ಣ ಇಲ್ಲದ್ದು, ಬಣ್ಣ ಇರುವಂತದ್ದು ಯಾವುದರಲ್ಲಿ ಪರಿಸರ ಹೆಚ್ಚು ಕಾಣುತ್ತದೆ ಎಂಬುದನ್ನು ಗಣಪತಿ ಪ್ರತಿಷ್ಠಾಪನೆ ಮಾಡುವ ಸಂಘ ಸಂಸ್ಥೆಗಳು, ಜನ ಸಂಘಟನೆಗಳು, ಅರ್ಥ ಮಾಡಿಕೊಂಡು, ಕೇವಲ ಬರಿ ಮಣ್ಣಿನಿಂದ ಮಾಡಿದಂತಹ, ಅದ್ಭುತವಾದ ವಿಗ್ರಹಗಳನ್ನು ಪ್ರದರ್ಶನಕ್ಕೆ ಇಟ್ಟು, ಸಾವಿರಾರು ಜನರ ಭಕ್ತಾದಿಗಳಿಗೆ ಮನಸ್ಸಿನಲ್ಲಿ ಪರಿಸರ ಜಾಗೃತಿ ಮೂಡಿಸಲು ಈ ಪರಿಸರ ಹಬ್ಬಗಳು. ಗಣೇಶನ ಹಬ್ಬ ಇರಬಹುದು, ದೀಪಾವಳಿ ಇರಬಹುದು, ಇವೆಲ್ಲವನ್ನೂ ನಾವು ಹೇಗೆ ಮಾಡಬೇಕು, ಜಾಗೃತಿ ಮೂಡಿಸುವುದೇ ಹಬ್ಬಗಳ ಉದ್ದೇಶವಾಗಿದೆ. ದೇವರನ್ನ ನೆಪ ಮಾಡಿಕೊಂಡು, ಪರಿಸರ ಸ್ನೇಹಿ ಜೀವನ ಮಾಡುವುದನ್ನು ಜನರಿಗೆ ಹೇಳಿಕೊಡಬೇಕಾಗಿದೆ. ಪರಿಸರವೇ ದೇವರು, ಈಗಾಗಲೇ ನಮಗೆ ಪರಿಸರದಿಂದ ಆಗುವ ಅನಾಹುತಗಳಿಂದ, ಜೀವ ಹಾನಿ ಮಾಡಿಕೊಂಡು, ಮಳೆ ಬಂದರೆ ನಡುಗಿ, ಹೆದರಿ, ಆಗುವ ಅನಾವುತಗಳಿಂದ, ಜೀವ ಹಾನಿ ಮಾಡುವುದನ್ನ, ನಾವು ನೋಡಿದ್ದೇವೆ. ಹಾಗಾಗಿ ಎಲ್ಲೇ ಆಗಲಿ, ಮಣ್ಣಿನ ಸವಕಳಿಯಾಗದಂಗೆ, ನೀರಿನ ಮಾಲಿನ್ಯಾಗದಂತೆ, ಸಂರಕ್ಷಿಸಿಕೊಂಡು, ಹಬ್ಬ ಆಚರಿಸುವುದು ಮುಖ್ಯವಾಗಬೇಕು. ಇದನ್ನು ನಾವು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಪರಿಸರಸ್ನೇಹಿ ಗಣೇಶನ ಹಬ್ಬದಲ್ಲಿ, ಪ್ಲಾಸ್ಟಿಕ್ ಅನ್ನು ಕಡಿಮೆ ಬಳಕೆ ಮಾಡಿ, ಅವುಗಳನ್ನ ನೀರಿಗೆ ಬಿಡದಂತೆ ಎಚ್ಚರಿಕೆವಹಿಸಿ, ಮರುಬಳಕೆ ಆಗುವಂಥ ವಸ್ತುಗಳನ್ನೇ ಬಳಕೆ ಮಾಡಿ, ಗಣೇಶನ ತರುವುವಾಗ, ಬಿಡುವಾಗ, ಪಟಾಕಿ ಹಚ್ಚಿದಂತೆ ಮಾಡಿ, ಶಬ್ದ ಮಾಲಿನ್ಯವನ್ನು ಸಹ ಹೆಚ್ಚಾಗಿ ಮಾಡದಂತೆ, ಸುತ್ತಮುತ್ತಲಿರುವ ಜನರನ್ನ, ಅವರ ನೆಮ್ಮದಿಯನ್ನ ಕಾಪಾಡಿಕೊಂಡು, ಎಲ್ಲ ಜಾತಿ ಮತ ಭೇದವನ್ನು ಮರೆತು, ಜನರನ್ನ ಸಂಘಟಿಸಿ, ಆದೇ ವ್ಯಕ್ತಿಗಳನ್ನ ರಚನಾತ್ಮಕ ಕಾರ್ಯಕ್ರಮಗಳಿಗೆ ಬಳಸಿ, ಪರಿಸರ ಉಳಿಸಿ, ನೆಮ್ಮದಿಯ ಜೀವನ ಸಾಗಿಸಿ ಎಂಬುದೇ ಈ ಹಬ್ಬಗಳ ಸಂದೇಶ. ಇದನ್ನ ನಾವು ಜನರಿಗೆ, ತಳಮಟ್ಟದಿಂದ, ಎತ್ತರದ ಮಟ್ಟದವರೆಗೂ ಸಹ ತೆಗೆದುಕೊಂಡು ಹೋಗುವಂತಹ ಜವಾಬ್ದಾರಿಯನ್ನ, ಪ್ರತಿಯೊಬ್ಬರು ತೆಗೆದುಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆ ಮುಖಾಂತರ ವಿನಂತಿಸಿಕೊಂಡಿದ್ದಾರೆ.
ಬಹಳಷ್ಟು ಜನ ವಿದ್ಯಾರ್ಥಿಗಳಿಗೆ ಗಣಪತಿಯನ್ನು ಇಟ್ಟು ಪೂಜೆ ಮಾಡಿ, ಸಾಂಸ್ಕೃತಿಕ ಚಟುವಟಿಕೆಗಳನ್ನ ಮಾಡಿ, ಹಾಡು, ನೃತ್ಯ, ನಾಟಕ, ಹರಿಕಥೆ, ವಸ್ತು ಪ್ರದರ್ಶನ, ಕೋಲಾಟ, ರಂಗೋಲಿ ಸ್ಪರ್ಧೆ, ಗಾಯನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಇಂತಹ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಹಬ್ಬಗಳು ಸಹಕಾರಿಯಾಗಿದೆ. ಹಾಗಾಗಿ ಗಣೇಶನ ಮುಂದಿಟ್ಟುಕೊಂಡು, ಬಹಳಷ್ಟು ಸಾಮಾಜಿಕ ಸುಧಾರಣೆಗಳನ್ನ ಮಾಡಬಹುದು. ಗಣೇಶನ ಮಂಟಪದಲ್ಲಿ ಹಾಕಿರೋ ಮೈಕ್ ಸೆಟ್ ಗಳ ಮುಖಾಂತರ, ಒಳ್ಳೊಳ್ಳೆ ಭಾಷಣಗಳನ್ನ, ಹಾಸ್ಯ ಸಾಹಿತಿಗಳನ್ನ, ಕಲಾವಿದರನ್ನು ಪ್ರೋತ್ಸಾಹಿಸಿ, ಒಂದು ಸುಂದರ ಸಮಾಜವನ್ನು ನಿರ್ಮಾಣ ಮಾಡಲು, ಈ ಹಬ್ಬಗಳು ಸಹಕಾರಿಯಾಗಿವೆ. ಎಲ್ಲ ಜಾತಿ ಧರ್ಮ ಮತದವರನ್ನು, ಒಗ್ಗೂಡಿಸಿಕೊಂಡು, ಮನಸ್ಸಿನಲ್ಲಿ ನೆಮ್ಮದಿ ಮೂಡುವಂತಹ ವಿಚಾರಗಳನ್ನು ತಲುಪಿಸಿ, ಸಾಮಾಜಿಕ ಸಮಸ್ಯೆಗಳನ್ನ ಬಗೆಹರಿಸುವ ನಿಟ್ಟಿನಲ್ಲಿ ಹಬ್ಬಗಳು ಆಚರಣೆಯಾಗಲಿ. ಮಕ್ಕಳು ಮಣ್ಣನ್ನ ಮುಟ್ಟಿ, ಕೈಯಿಂದಲೇ ಗಣೇಶನ ಮಾಡಿ, ಪೂಜಿಸಿ, ದುಂದು ವೆಚ್ಚ ಮಾಡದಂತೆ, ಸರಳವಾಗಿ ಹೆಚ್ಚಿನ ಮಟ್ಟದ ಕಾರ್ಯಕ್ರಮಗಳನ್ನ ಆಯೋಜನೆ ಮಾಡಿ, ಹಬ್ಬಗಳನ್ನ ಸದ್ಬಳಕೆ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296