ಕುಣಿಗಲ್ : ತಾಲ್ಲೂಕಿನ ಕಸಬಾ ಹೋಬಳಿ ಟಿ ಹೊಸಹಳ್ಳಿ ಗ್ರಾಮ ವ್ಯಾಪ್ತಿಯ ವ್ಯಾಪ್ತಿಯಲ್ಲಿ ಸುಮಾರು 5 ಕೋಟಿ ರೂ.ಗಳ ವೆಚ್ಚದ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಶಾಸಕ ಡಾ.ಎಚ್.ಡಿ.ರಂಗನಾಥ್ ಗುದ್ದಲಿ ಪೂಜೆ ನೆರವೇರಿಸಿದರು.
ಅವರು ಟಿ.ಹೊಸಳ್ಳಿ, ಗಿರಿಗೌಡರ ಪಾಳ್ಯ, ಹಾಗೂ ಸಾಲಂದ್ರಿ ಪಾಳ್ಯ, ಗ್ರಾಮಗಳಿಗೆ ರಸ್ತೆ ಚರಂಡಿ ನಿರ್ಮಾಣಕ್ಕೆ ಸುಮಾರು 5 ಕೋಟಿ ವೆಚ್ಚದಲ್ಲಿ ಶಂಕುಸ್ಥಾಪನೆ ಮಾಡಿ ಮಾತನಾಡುತ್ತಾ, ನಾನು ಶಾಸಕನಾದ ನಂತರ ಮತದಾರರ ಋಣವನ್ನು ತಿಳಿಸಲು ತಾಲ್ಲೂಕಿನಾದ್ಯಂತ ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತ ಬಂದಿದ್ದೇನೆ ಇನ್ನು ಮುಂದೆಯೂ ಸರ್ಕಾರದಿಂದ ವಿಶೇಷ ಅನುದಾನ ತಂದು ಹಿಂದುಳಿದ ಗ್ರಾಮಗಳನ್ನು ಗುರುತಿಸಿ ರಸ್ತೆ, ನೀರಾವರಿ ಕಾಮಗಾರಿಗೆ ಹೆಚ್ಚಿನ ಮಹತ್ವವನ್ನು ಕೊಟ್ಟು ತಾಲ್ಲೂಕನ್ನು ಅಭಿವೃದ್ಧಿ ಪಡಿಸಲು ಕಂಕಣ ಬದ್ದನಾಗಿದ್ದೇನೆ ಎಂದರು.
ರಾಜ್ಯದಲ್ಲಿ ಕಸ ವಿಲೇವಾರಿ ಸಂಬಂಧ ವಿರೋಧ ಪಕ್ಷಗಳು ಉರುಳಿಲ್ಲದ ಆರೋಪವನ್ನು ಮಾಡುತ್ತಾರೆ, ಗೃಹಲಕ್ಷ್ಮಿ ಯೋಜನೆಯನ್ನು ನಿಜವಾದ ಫಲಾನುಭವಿಗಳು ತೆಗೆದುಕೊಳ್ಳಲಿ ಎಂಬ ಸದುದ್ದೇಶದಿಂದ ಬಯೋ ಮೆಟ್ರಿಕ್ ಅಳವಡಿಸಲು ಸರ್ಕಾರ ಮುಂದಾಗಿದೆ ಇದರಿಂದ ಅನರ್ಹ ಫಲಾನುಭವಿಗಳನ್ನು ಗುರ್ತಿಸಿದರೆ ಪ್ರತಿ ತಿಂಗಳು ಸರ್ಕಾರಕ್ಕೆ ಸುಮಾರು 100 ಕೋಟಿ ರೂ. ಗಳು ಉಳಿತಾಯವಾಗಬಹುದು ಎಂದು ಅಂದಾಜಿಸಲಾಗಿದೆ. ಈ ಹಣವನ್ನು ಬೇರೆ ಕೆಲಸಗಳಿಗೆ ಉಪಯೋಗಿಸಬಹುದು ಆದ್ದರಿಂದ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಬಯೋಮೆಟ್ರಿಕ್ ಕಡ್ಡಾಯಗೊಳಿಸಿದೆ ಯೋಜನೆಯನ್ನು ಶ್ರೀಮಂತರು ಕೂಡ ಪಡೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ.
ಆರ್ಥಿಕವಾಗಿ ಸಬಲರಾಗಿರುವ ಕುಟುಂಬದ ಮಹಿಳೆಯರು ಈ ಯೋಜನೆಯಿಂದ ಹೊರ ಬಂದರೆ, ಎಷ್ಟೋ ಬಡ ಕುಟುಂಬದ ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದರು.
ಮತಪಟ್ಟಿ ಪರಿಷ್ಕರಣೆ (ಎಸ್ ಐಆರ್) ಸಂಬಂಧ ಕೇಂದ್ರದ ಬಿಜೆಪಿ ಸರ್ಕಾರ ಬಡವರನ್ನು ದೀನ ದಲಿತರನ್ನು ಮುಸಲ್ಮಾನವನ್ನು, ಅಲ್ಪಸಂಖ್ಯಾತರನ್ನು, ಮತ ಪಟ್ಟಿಯಿಂದ ತೆಗೆಯಲು ಪ್ರಯತ್ನ ಮಾಡುತ್ತಿದೆ ನಾವುಗಳು ದಡ್ಡರಲ್ಲ ನಮ್ಮಲ್ಲಿ ಬುದ್ಧಿವಂತರಿದ್ದಾರೆ. ಪ್ರತಿ ಬೂತ್ ಮಟ್ಟದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಪರಿಶೀಲನೆ ಮಾಡುತ್ತೇವೆ ಮತದಾರರು ಕೂಡ ಈ ವಿಚಾರವಾಗಿ ಜಾಗೃತೆಯಿಂದ ಇರಬೇಕೆಂದರು. ಬಿಜೆಪಿ ಪಕ್ಷ ಪಶ್ಚಿಮ ಬಂಗಾಳದಲ್ಲಿ ಟಿ ಎಂ ಸಿ ಪಕ್ಷವನ್ನು ಸೋಲಿಸಲೇಬೇಕು ಎಂಬ ಉನ್ನಾರ ಮಾಡಿ ಬಡವರನ್ನು, ದಿನ ದಲಿತರನ್ನ, ಮುಸಲ್ಮಾನ್, ಅಲ್ಪಸಂಖ್ಯಾತರನ್ನು, ಮತದಾರರ ಪಟ್ಟಿಯಿಂದ ಹೆಸರು ತೆಗೆದ ಪರಿಣಾಮ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಪಕ್ಷ ಸೋತು ಬಿಜೆಪಿ ಪಕ್ಷ ಜಯ ಸಾಧಿಸಿತು. ಆ ಕುತಂತ್ರ ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ ಬಿಜೆಪಿ ಸರ್ಕಾರ ಶ್ರೀರಾಮ, ಹನುಮಂತ, ಇನ್ನಿತರ ದೇವರ ಹೆಸರುಗಳನ್ನು ಹೇಳುತ್ತಾ 370 ಆಕ್ಟ, ಎನ್ ಆರ್ ಆರ್ ಐ, ಕಾನೂನು ಒಳಗೊಂಡಂತೆ ಜನರಿಗೆ ಇನ್ನಿತರ ಬೇಡವಾದ ಕಾನೂನುಗಳನ್ನು ಜಾರಿಗೆ ತಂದು ರಾಷ್ಟ್ರದ ಜನರನ್ನು ದಿಕ್ಕು ತಪ್ಪಿಸಿ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಗೆಲ್ಲುವ ಹೊಸತಂತ್ರ ರೂಪಿಸುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿ ಡಿ ಓ ನರಸಿಂಹಮೂರ್ತಿ, ಇಂಜಿನಿಯ ನಂದೀಶ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜು, ಗುತ್ತಿಗೆದಾರರಾದ ಉಮೇಶ್ (ಗುಂಡಣ್ಣ) ಚಿಕ್ಕಣ್ಣ, ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


