ಬೆಂಗಳೂರು: ಮೊನ್ನೆ ಸುರಿದ ಬಾರಿ ಮಳೆಗೆ ಇಡಿ ನಗರ ತತ್ತರಿಸಿ ಹೋಗಲು ಬೀದಿ ಬದಿ ಅಂಗಡಿಗಳೇ ಕಾರಣ ಎನ್ನಲಾಗಿದ್ದು, ಅತೀ ಶೀಘ್ರವೇ ಫುಟ್ ಪಾತ್ ಅಂಗಡಿಗಳ ತೆರವು ಕಾರ್ಯಾಚರಣೆಗೆ ಮುಂದಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆದೇಶದ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಪಾದಚಾರಿ ಮಾರ್ಗಗಳಲ್ಲಿ ಅಕ್ರಮವಾಗಿ ಹಾಕಿಕೊಂಡಿರುವ ಅಂಗಡಿಗಳ ತೆರವು ಕಾರ್ಯಚರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.
ಮಳೆ ಅನಾಹುತ ಪ್ರದೇಶಗಳಿಗೆ ಭೇಟಿ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ರಾಜಕಾಲುವೆ ನೀರು ಉಕ್ಕಿ ಹರಿಯಲು ಕಾರಣ ಎನ್ನುವುದು ಪತ್ತೆಯಾಗಿರುವುದರಿಂದ ಅವರು ಅಕ್ರಮ ಮಳಿಗೆಗಳ ತೆರವಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪುಟ್ಪಾತ್ ಅಂಗಡಿಗಳು ತಮ್ಮ ಅಂಗಡಿಯ ತ್ಯಾಜ್ಯ ಗಳನ್ನು ರಾಜಕಾಲುವೆ ಗೆ ಬೇಕಾಬಿಟ್ಟಿ ಎಸೆಯುತ್ತಿರುವುದರಿಂದ ಡ್ರೈನೇಜ್ ಬ್ಲಾಕ್ ಅಗಿದೆ. ಅದೇ ರೀತಿ ಎಳನೀರು ವ್ಯಾಪಾರಿಗಳು ಖಾಲಿ ಬುರುಡೆಗಳನ್ನೂ ಚರಂಡಿಗೆ ಎಸೆದಿರುವುದು ಕಂಡು ಬಂದಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


