ಬೆಂಗಳೂರು: ಪಶ್ಚಿಮ ಬಂಗಾಳ ಮೂಲದ ಯುವತಿಯೊಬ್ಬಳು ಬೆಂಗಳೂರಿನಲ್ಲಿ ರೈಲಿಗೆ ಸಿಕ್ಕಿ ಸಾವಿಗೆ ಶರಣಾಗಿರುವ ಘಟನೆ ನಡೆದಿದೆ.
ಲಿಖಿತ ಗೇಸರ್ (25) ಸಾವಿಗೆ ಶರಣಾದ ಯುವತಿಯಾಗಿದ್ದಾಳೆ. ಈಕೆ ಇತ್ತೀಚೆಗೆ ಈಕೆಯ ಅಕ್ಕ—ಭಾವನ ಜೊತೆಗೆ ಸೋಲದೇವನಹಳ್ಳಿ ಪೊಲೀಸ್ ಠಾಣೆ ಸಮೀಪದಲ್ಲಿ ವಾಸವಾಗಿದ್ದಳು.
10 ದಿನಗಳ ಹಿಂದೆಯಷ್ಟೇ ಲಿಖಿತ ಬೆಂಗಳೂರಿಗೆ ಬಂದಿದ್ದಳು. ಇಂದು ಬೆಳಗ್ಗೆ 9 ಗಂಟೆಗೆ ಮನೆಯ ಸಮೀಪವಿರುವ ರೈಲ್ವೆ ನಿಲ್ದಾಣದ ಹಳಿ ಬಳಿ ಹೋಗಿ ರೈಲಿನಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ.
ಪ್ರೇಮವೈಫಲ್ಯದ ಹಿನ್ನೆಲೆ ಲಿಖಿತ ಜೀವನದಲ್ಲಿ ಜಿಗುಪ್ಸೆಗೊಂಡಿದ್ದಳು. ಹೀಗಾಗಿ ವಾತಾವರಣ ಬದಲಾಗಲಿ ಅಂತ ಅಕ್ಕ-ಭಾವ ತಮ್ಮ ಮನೆಗೆ ಕರೆಸಿಕೊಂಡಿದ್ದರು. ಆದರೆ ಇದೀಗ ಆಕೆ ಸಾವಿನ ಮೊರೆ ಹೋಗಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗಿದೆ.
ಯಶವಂತಪುರ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


