ಬೆಂಗಳೂರು: ಅರಣ್ಯ, ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯ ಸಚಿವರಾದ ಈಶ್ವರ ಖಂಡ್ರೆ ಅವರನ್ನು ಮಂಗಳವಾರ, ವಿಧಾನ ಸೌಧದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಭೇಟಿಯಾಗಿ “ಚಿಣ್ಣರ ವನ ದರ್ಶನ” ಮತ್ತು “ಸಸ್ಯಶಾಮಲ” ಕಾರ್ಯಕ್ರಮಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.
ಸಭೆಯ ಮುಖ್ಯ ಉದ್ದೇಶ ಈ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ ವಿಸ್ತರಿಸುವುದಾಗಿತ್ತು. ಈ ಸಂಬಂಧ, ಆಯೋಗದ ಸದಸ್ಯರು, ಈ ಕಾರ್ಯಕ್ರಮಗಳಿಗೆ ಇರುತ್ತಿರುವ ಮಿತಿಯನ್ನು ಹೆಚ್ಚಿಸುವ ಕುರಿತು ಸಚಿವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರ್ ಗೌಡ ರಾಮತ್ನಾಳ, ಶಶಿಧರ್ ಕೋಸಂಬೆ, ಮತ್ತು ಡಾ. ತಿಪ್ಪೇಸ್ವಾಮಿ ಕೆ.ಟಿ. ಉಪಸ್ಥಿತರಿದ್ದರು.
ಸಭೆಯು ಸಕಾರಾತ್ಮಕವಾಗಿ ಮುಗಿದಿದ್ದು, ಮಕ್ಕಳ ಹಕ್ಕುಗಳ ರಕ್ಷಣೆಗೆ ಈ ಕಾರ್ಯಕ್ರಮಗಳು ಹೇಗೆ ಉಪಯೋಗಿಯಾಗುತ್ತವೆ ಎಂಬ ವಿಷಯದಲ್ಲಿ ಸದರಿ ಮಂಡಳಿಯು ಆತ್ಮವಿಶ್ವಾಸ ವ್ಯಕ್ತಪಡಿಸಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


