ಹೊಸಪೇಟೆ: ತುಂಗಭದ್ರಾ ಡ್ಯಾಂಗೆ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡೋದಕ್ಕೆ ಮೊದಲೇ ಹೇಳಿದ್ದೆ. ಅಗ ಅಧಿಕಾರಿಗಳು ಎಲ್ಲಾ ಸರಿ ಇದೆ ಅಂತಾ ಹೇಳಿದರು. ಅಂದು ಮುನ್ನೆಚ್ಚರಿಕೆ ತೆಗೆದುಕೊಂಡಿದಿದ್ದರೆ ಈ ಘಟನೆಗೆ ಕಾರಣ ಆಗುತ್ತಿರಲಿಲ್ಲ ಅಂತ ಡ್ಯಾಂ ಗೇಟ್ ತಜ್ಞ ಕನ್ನಯ್ಯ ನಾಯ್ಡು ಹೇಳಿದ್ದಾರೆ.
ನಗರದ ಟಿಬಿಡ್ಯಾಂನ ಚಕ್ರವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಘಟನೆ ವಿಷಯ ತಿಳಿದ ನಂತರ ಮೂರು ರಾಜ್ಯಗಳ ನೀರಾವರಿ ಹಾಗೂ ಡ್ಯಾಂ ಅಧಿಕಾರಿಗಳ ಜತೆ ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ಚರ್ಚೆ ಮಾಡಿ ಸಿಡಬ್ಲೂಸಿ ಅಪ್ರೂವಲ್ ತಗೊಂಡೆವು.
ಶುಕ್ರವಾರ ರಾತ್ರಿ ನೀರಿನಲ್ಲಿ ಎಲಿಮೆಂಟ್ ಅಳವಡಿಕೆ ಯಶಸ್ಸು ಆಗಿದೆ. ಶನಿವಾರ ಎರಡು ಎಲಿಮೆಂಟ್ ಅಳವಡಿಕೆ ಮಾಡುತ್ತೇವೆ. ಸೋಮವಾರಕ್ಕೆ ಮಿಕ್ಕಿದ್ದು ಕೆಲಸ ಮುಗಿಯುತ್ತೆ ಅಂತ ತಿಳಿಸಿದ್ರು.
ಜಲಾಶಯ ಒಂದು 100 ವರ್ಷ ಬಾಳಿಕೆ ಬರುತ್ತೆ. ಕ್ರಸ್ಟ್ ಗೇಟ್ ಗಳು 50 ವರ್ಷ ಗೇಟ್ ಬಾಳಿಕೆ ಬರುತ್ತೆ. ಸದ್ಯ ಟಿಬಿಡ್ಯಾಂ ಗೇಟ್ 70 ವರ್ಷ ಆಗಿದೆ. ಗೇಟ್ ಬದಲಿಸಿದರೆ, ಇನ್ನು 30 ವರ್ಷ ಭದ್ರ. ನಂತರ ಜಲಾಶಯ ಬದಲಿಸಬೇಕಿದೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


