ತುಮಕೂರು :ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆದ್ರೆ ನನ್ನಷ್ಟು ಖುಷಿ ಪಡೋರು ಯಾರೂ ಇಲ್ಲ ಎಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಮತ್ತು ಜಲಶಕ್ತಿ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರು ನುರಿತ ರಾಜಕಾರಣಿಯಾಗಿದ್ದಾರೆ. ಕೆಲವು ಸಂದರ್ಭದಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ. ಕಾನೂನಿನ ಕೆಲಸ ಕಾನೂನು ಮಾಡುತ್ತೆ ಎಂದರು.
ಸಿದ್ದರಾಮಯ್ಯ ಸಾಹೆಬ್ರು ಸಹ ಅವರೇನು ಮಾಡ್ಬೇಕು ಮಾಡ್ತಾರೆ. ಒಂದು ಸತ್ಯ, ಕಾನೂನಿಗಿಂತ ನಾವ್ಯಾರು ದೊಡ್ಡವರಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ದೂರದೃಷ್ಟಿಯ ಬ್ರಹ್ಮಾಸ್ತ್ರ ಏನಿದೆ ಎಂದರು.
ಅದು ಯಾರ್ಯಾರಿಗೆ ಏನಾಗಿದೆ ಅನ್ನೊದಕ್ಕಿಂತ ಹೆಚ್ಚಾಗಿ ಕಾನೂನು ತನ್ನ ಕೆಲಸವನ್ನ ತಾನು ಮಾಡುತ್ತದೆ ಎಂದರು.
ನನಗೂ 45 ವರ್ಷ ರಾಜಕೀಯ ಅನುಭವ ಇದೆ. ಒತ್ತಾಯ ಮಾಡೋದು, ಮತ್ತೊಂದು ಮಾಡೋದಕ್ಕಿಂತ ಹೆಚ್ಚಾಗಿ ಸಿದ್ದರಾಮಯ್ಯ ಸಾಹೇಬ್ರು ನುರಿತ ರಾಜಕಾರಣಿ, ಬುದ್ದಿವಂತರಿದ್ದಾರೆ. ನಾನು ಅವರು ಬಹಳ ಆತ್ಮೀಯರಾಗಿ ಕೆಲಸ ಮಾಡಿದ್ದೇವೆ
ನಿನ್ನೆನೂ ಸಹ ಅವರ ಜೊತೆ ಮಾತನಾಡಿದಾಗ, ಅವರು ಮಾತನಾಡಿದ್ದನ್ನ ನಾನು ಬಹಳ ಆನಂದದಿಂದ ಸ್ವೀಕಾರ ಮಾಡಿದ್ದಿನಿ ಎಂದರು.
ಬಾಕಿದ್ದೇಲ್ಲಾ ಕಾನೂನು ನೋಡುತ್ತೆ. ಕಾನೂನು ಏನು ಹೇಳುತ್ತೆ ಅದು ಆಗುತ್ತೆ. ಬಿಡು ಗುರು, ಒಂದು ಕುಟುಂಬ ಅಂದ ಮೇಲೆ ಐದು ಬೆರಳು ಒಂದೇ ಸಮ ಇದಿಯಾ. ಒಂದೊಂದು ಸರಿ ಆಗುತ್ತೆ ಎಂದರು.
ನಮ್ಮ ಅವರ ಆತ್ಮೀಯತೆ ಅನ್ನೊದಕ್ಕಿಂತ ಹೆಚ್ಚಾಗಿ, ಈ ಭಾಗದ ಜನರ ಋಣ ತಿರಿಸೋದು ಇದೆ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಿ ಋಣ ತಿರಿಸಬೇಕಿದೆ ಎಂದರು.
ನೀವೇನು ಹೇಳಿದ್ರಲ್ಲ, ಆ ರೀತಿಯಾಗಿ ಆದ್ರೆ ನನಕ್ಕಿಂತ ಜಾಸ್ತಿ ಆನಂದ ಪಡೋರು ಬೇರೆ ಯಾರು ಇಲ್ಲ. ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲಿ ಎಂದ ಸೋಮಣ್ಣ.
ಆ ತರ ಸನ್ನಿವೇಶ, ಸಂದರ್ಭ ನಮಗೆ ಗೊತ್ತಿಲ್ಲ. ನಾನು ಆ ತರ ಸಣ್ಣತನದಲ್ಲಿ ಬೇರೆಯವರ ಬಗ್ಗೆ ಮಾತನಾಡುವ ವ್ಯಕ್ತಿ ಅಲ್ಲ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


