nammatumakuru

    Subscribe to Updates

    Get the latest creative news from FooBar about art, design and business.

    What's Hot

    ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ

    August 18, 2025

    ತಲ್ವಾರ್ ನಿಂದ ಹಲ್ಲೆ ನಡೆಸಿ ತಮ್ಮನಿಂದ ಅಣ್ಣನ ಬರ್ಬರ ಹತ್ಯೆ!

    August 18, 2025

    ಭಾರೀ ಮಳೆ ಹಿನ್ನೆಲೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ

    August 18, 2025
    Facebook Twitter Instagram
    ಟ್ರೆಂಡಿಂಗ್
    • ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ
    • ತಲ್ವಾರ್ ನಿಂದ ಹಲ್ಲೆ ನಡೆಸಿ ತಮ್ಮನಿಂದ ಅಣ್ಣನ ಬರ್ಬರ ಹತ್ಯೆ!
    • ಭಾರೀ ಮಳೆ ಹಿನ್ನೆಲೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ
    • ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟನ್ನೂ ಬದಲಿಸಿ: ಬಿ.ವೈ.ವಿಜಯೇಂದ್ರ ಒತ್ತಾಯ
    • ನಿಡಗಲ್ಲು ಉತ್ಸವ ಸರ್ಕಾರದ ವತಿಯಿಂದ ಆಚರಿಸಲು ವಾಲ್ಮೀಕಿ ಶ್ರೀ ಒತ್ತಾಯ
    • ಅಂಗನವಾಡಿ:  257 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
    • ಸಿನಿಮಾ ಗೆಲ್ಲಿಸಲು ಸ್ಟಾರ್ ನಟರೇ ಬೇಕಿಲ್ಲ: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ
    • ಗವಿಸಿದ್ದಪ್ಪ ನಾಯಕ್ ಕೊಲೆ ಕೇಸ್ ಗೆ ಹೊಸ ತಿರುವು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಈ ದಿನದ ಕಥೆಯ ಶೀರ್ಷಿಕೆ: ರಾಜನ ಪರೀಕ್ಷೆ
    Uncategorized August 18, 2024

    ಈ ದಿನದ ಕಥೆಯ ಶೀರ್ಷಿಕೆ: ರಾಜನ ಪರೀಕ್ಷೆ

    By adminAugust 18, 2024No Comments3 Mins Read
    venu gopal

    ಒಮ್ಮೆ ಸತ್ಯಪುರ ರಾಜ್ಯಕ್ಕೆ ಸೇರಿದ ಸಿರಿವನ ಎಂಬ ಅರಣ್ಯದಲ್ಲಿ ಪ್ರಖ್ಯಾತ ಗುರು ಪ್ರಭುಶಿಖಿರ ಎಂಬುವರ ಗುರುಕುಲದಲ್ಲಿ ಸರ್ವವಿದ್ಯಾ ಪರಂಗತರಾಗಿದ್ದ ಜ್ಞಾನದೇವ, ಸತ್ಯದೇವ ಮತ್ತು ಅಮರದೇವಗಳೆಂಬ ಮೂವರು ಪಂಡಿತರು ರಾಜ ವೀರಬಲ್ಲಾಳನ ಆಸ್ಥಾನಕ್ಕೆ ಬಂದರು.

    ಅವರ ಮುಖದ ವರ್ಚಸ್ಸನ್ನು ನೋಡಿ ಎದ್ದು ನಿಂತು ಗೌರವಿಸಿ ನಂತರ ರಾಜ ಪಂಡಿತರುಗಳೇ ನನ್ನಿಂದ ನಿಮಗೆ ಏನಾಗಬೇಕು ಎಂದಾಗ ಮೂವರೂ ತಮ್ಮ ತಮ್ಮ ಪರಿಚಯ ಮಾಡಿಕೊಂಡ ನಂತರ ಅಮರದೇವನು ರಾಜರೇ ನಮಗೆ ನಿಮ್ಮ ಆಸ್ಥಾನದಲ್ಲಿ ನಮಗೆ ರಾಜಗುರು ಸ್ಥಾನಬೇಕು ನೀಡುವಿರಾ ಎಂದಾಗ ಹರ್ಷಿತನಾದ ರಾಜನು ಆಗಬಹುದು, ಆದರೆ ರಾಜಗುರು ಸ್ಥಾನ ಕೇವಲ ಒಬ್ಬರಿಗೆ ಮಾತ್ರ ದೊರಕುವುದು ಎಂದಾಗ ಸತ್ಯದೇವನು ಮುಂದೆ ಬಂದು ಇವರಿಬ್ಬರಿಗಿಂತ ನನಗೆ ಹೆಚ್ಚು ಜ್ಞಾನ ನನಗೆ ನೀಡಬೇಕು ಎಂದಾಗ ಅವರಿಬ್ಬರಲ್ಲಿ ಮಾತಿನ ವೈಮನಸ್ಯ ಉಂಟಾಯಿತು.


    Provided by
    Provided by

    ನಂತರ ಸುಮ್ಮನೆ ನಿಂತಿದ್ದ ಜ್ಞಾನದೇವನನ್ನು ಕುರಿತು ರಾಜ ನೀವು ಏನು ಹೇಳುವಿರಿ ಎಂದಾಗ ಜ್ಞಾನದೇವನು ಮಹಾರಾಜರೇ ತಮ್ಮ ತೀರ್ಮಾನವೇ ಅಂತಿಮ ನಾನು ಹೇಳುವುದು ಏನೂ ಇಲ್ಲ ಎಂದಾಗ ರಾಜನು ಯೋಚಿಸಿ ಆಯಿತು. ಈಗ ನಿಮ್ಮ ಮೂವರಿಗೂ ಒಂದು ಪರೀಕ್ಷೆ ನೀಡುವೆ ಅದರಲ್ಲಿ ವಿಜಯಿಶಾಲಿಯಾದ ಒಬ್ಬರಿಗೆ ರಾಜಗುರು ಪದವಿ ನೀಡುವೆ ಒಪ್ಪಿಗೆಯೇ ಎಂದಾಗ ಪಂಡಿತರುಗಳು ಒಪ್ಪಿದರು.

    ನಂತರ ರಾಜ ಮೂವರಿಗೂ ಒಂದೊಂದು ಅತ್ಯಂತ ಬೆಲೆಬಾಳುವ ವಜ್ರಗಳನ್ನು ನೀಡಿ ನಂತರ ಮೂವರನ್ನು ಕುರಿತು ನೋಡಿ ಇನ್ನು ಒಂದು ವರುಷದ ಅವಧಿಯಲ್ಲಿ ಈ ವಜ್ರವನ್ನು ಹೇಗೆ ಬಳಸುತ್ತೀರೊ ಗೊತ್ತಿಲ್ಲ ಆದರೆ ಈ ಒಂದು ವಜ್ರದಿಂದ ಅತಿಹೆಚ್ಚು ಸಂಪಾದನೆ ಮಾಡಿ ತೋರಿಸಿಸುತ್ತಾರೋ ಅವರಿಗೆ ರಾಜಗುರು ಪದವಿ ನೀಡಲಾಗುವುದು ಎಂದಾಗ ಸರಿ ಎಂದು ಹೇಳಿ ಮೂವರೂ ಮೂರುದಿಕ್ಕುಗಳನ್ನು ಹಿಡಿದು ಹೊರಟುಹೋದರು.

    ಒಂದು ವರುಷವಾಯಿತು ನಂತರ ಮೂವರೂ ಸತ್ಯಪುರ ರಾಜ ಮಹಲಿಗೆ ಬಂದರು ರಾಜನು ಅವರಿಗೆ ಸ್ವಾಗತಕೋರಿ ಈಗ ಹೇಳಿ ಯಾರು ಏನೇನು ಮಾಡಿ ಸಂಪಾದಿಸಿದಿರಿ ಎಂದಾಗ ಮೊದಲು ಅಮರದೇವನು ಮುಂದೆ ಬಂದು ರಾಜರೇ ನಾನು ಪಕ್ಕದ ರಾಜ್ಯದ ನಗರವೊಂದಕ್ಕೆ ಹೋಗಿ ತಾವು ನೀಡಿದ ವಜ್ರವನ್ನು ಅಧಿಕ ಬೆಲೆಗೆ ಮಾರಿ ಬಂದ ಹಣದಿಂದ ಲೇವಾದೇವಿ ವ್ಯವಹಾರ ಮಾಡಲು ಶುರು ಮಾಡಿದೆ. ಅದು ದಿನದಿಂದ ದಿನಕ್ಕೆ ಅತ್ಯಧಿಕ ಲಾಭ ತಂದು ಕೊಟ್ಟಿತು. ಆದ್ದರಿಂದ ಇಂದು ನನ್ನಬಳಿ ಒಂದು ಸಾವಿರಕ್ಕೂ ಅಧಿಕ ಅಂತಹ ವಜ್ರಗಳಿವೆ ಎಂದಾಗ ರಾಜನಾದಿಯಾಗಿ ಎಲ್ಲರೂ ಚಪ್ಪಾಳೆ ತಟ್ಟಿ ಶಹಬಾಷ್ ಎಂದರು.
    ನಂತರ ಸತ್ಯದೇವನು ಮುಂದೆ ಬಂದು ರಾಜರೇ ನಾನು ತಾವು ನೀಡದ ವಜ್ರವನ್ನು ಒಬ್ಬ ಜಮೀನು ದಾರನಿಗೆ ಕೊಟ್ಟು ಒಂದಿಷ್ಟು ಭೂಮಿಕೊಂಡು ಕೊಂಡೆ, ನಂತರ ಅದೇ ಭೂಮಿಯನ್ನು ಅಧಿಕ ಬಲೆಗೆ ಬೇರೆಯವರಿಗೆ ಮಾರಿದೆ, ಬಂದ ಅಧಿಕಹಣದಿಂದ ಬೇರೆಡೆ ಮತ್ತಷ್ಟು ಭೂಮಿ ಕೊಂಡುಕೊಂಡೆ, ಮತ್ತೆ ಅಧಿಕ ಬಲೆಗೆ ಮಾರಿದೆ ಹೀಗೆಯೇ ಮಾಡುತ್ತಾ ಮಾಡುತ್ತಾ ಇಂದು ನನ್ನ ಬಳಿ ಎರಡು ಸಾವಿರಕ್ಕೂ ಅಧಿಕ ಮಂಡಲ ಭೂಮಿ ಇದೆ ಎಂದಾಗ ಮತ್ತೆ ರಾಜನಾದಿಯಾಗಿ ಎಲ್ಲರೂ ಚಪ್ಪಾಳೆ ತಟ್ಟಿದರು.

    ನಂತರ ರಾಜನು ಜ್ಞಾನದೇವರೇ ತಾವು ಏನು ಮಾಡಿದಿರಿ ಎಂದಾಗ ಜ್ಞಾನದೇವನು ಕೈ ಮುಗಿದು ಮುಂದೆ ಬಂದು ವಿನಯದಿಂದ ಮಹಾರಾಜರೇ ನೀವು ಕೊಟ್ಟ ವಜ್ರವು ನನಗೆ ತಮ್ಮಿಂದ ದಾನಸ್ವರೂಪವಾಗಿ ಬಂದಿದ್ದರಿಂದ ಅದನ್ನು ನಾನು ಬಳಸಲು ಮನಸ್ಸು ಬಾರದೆ ಅದನ್ನು ಅರಮನೆಯ ಹೊರಗೆ ನಿಂತಿದ್ದ ಒಬ್ಬ ನಿರ್ಗತಿಕನಿಗೆ ಅಂದೇ ದಾನ ನೀಡಿದೆ ಎಂದಾಗ ಅಲ್ಲಿದ್ದ ಎಲ್ಲರೂ ಇನ್ನು ಇವರಿಗೆ ರಾಜಗುರು ಸ್ಥಾನ ಸಿಕ್ಕಂತೆ ಎಂದುಕೊಳ್ಳುವಾಗು ರಾಜನು ಹಾಗಾದರೆ ತಾವು ಏನು ಸಂಪಾದಿಸಿದಿರಿ ಎಂದು ಕೇಳಿದಾಗ ಜ್ಞಾನದೇವನು ನಾನು ಸೀದಾ ಅರಣ್ಯಕ್ಕೆ ಹೋಗಿ ಅಲ್ಲಿ ನನ್ನ ಸ್ವಪ್ರಯತ್ನದಿಂದ ಒಂದು ಸಣ್ಣ ಕುಟೀರ ಕಟ್ಟಿದೆ, ನಂತರ ಅಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾ ದಾನ ನೀಡುತ್ತಿರುವೆನು, ಇದರಿಂದ ಇಂದು ನೂರಾರು ಬಡವರು, ನಿರ್ಗತಿಕರು ವಿದ್ಯೆಕಲಿಯುತ್ತಿದ್ದಾರೆ. ಇದರಿಂದ ಮುಂದೊಂದು ದಿನ ತಮ್ಮ ರಾಜ್ಯ ಅಧಿಕ ವಿದ್ಯಾವಂತರಿಂದ ಕೂಡುವುದು ಮತ್ತು ಅವರೆಲ್ಲಾ ಸ್ವಾವಲಂಬಿಗಳಾಗಿ ಬದುಕುವರು ರಾಜರೇ ಇದೇ ನಾನು ಸಂಪಾದಿಸಿದ್ದು ಎಂದಾಗ ರಾಜನಾದಿಯಾಗಿ ಕುಳಿತಿದ್ದ ಎಲ್ಲರೂ ಎಂದು ನಿಂತು ಜೋರಾದ ಚಪ್ಪಾಳೆಯೊಂದಿಗೆ ಜೈಕಾರ ಹಾಕಿದರು.
    ನಂತರ ರಾಜನು ಅಮರದೇವ ಮತ್ತು ಸತ್ಯದೇವರನ್ನು ಕುರಿತು ನೋಡಿ ನಾನು ವಜ್ರ ನೀಡಿದ್ದು ನೀವು ಅದನ್ನು ಹೇಗೆ ಸದ್ಬಳಕೆ ಮಾಡುತ್ತೀರಿ ಎಂದು ಪರೀಕ್ಷಿಸಲು ಆದರೆ ನೀವು ನಿಮ್ಮ ಸ್ವಾರ್ಥಕ್ಕಾಗಿ ಸಂಪಾದಿಸಿದಿರಿ ಅದರಿಂದ ನೀವು ಸಿರಿವಂತರಾದಿರಿ, ಆದರೆ ಜ್ಞಾನದೇವರನು ಸಮಾಜಕ್ಕಾಗಿ, ದೇಶದ ಹಿತಕ್ಕಾಗಿ ಸೇವೆ ಸಲ್ಲಿಸಿದ್ದಾರೆ ಆದ್ದರಿಂದ ಅವರಿಗೇ ರಾಜಗುರು ಸ್ಥಾನ ಸಲ್ಲುವುದು ಎಂದಾಗ ರಾಜನಿಗೆ ಜೈಕಾರ ಹಾಕಿದರು.

    ನೀತಿ: ಸಾಂದರ್ಭಿಕ ಪರೀಕ್ಷೆಗಳ ಮೂಲ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಬಹು ಮುಖ್ಯ.

    ವಿಶೇಷ ಲೇಖನ
    ಉದಯೋನ್ಮುಖ ಬರಹಗಾರರು
    ರಚನೆ : ಶ್ರೀ ವೇಣುಗೋಪಾಲ್ ತುಮಕೂರು
    ಅನಿಸಿಕೆ ಅಭಿಪ್ರಾಯ ತಿಳಿಸಲು ದೂರವಾಣಿ ಸಂಖ್ಯೆ: 9449138522

    admin
    • Website

    Related Posts

    ನಟ ದರ್ಶನ್ ಜೈಲು ಪಾಲಾದ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮೀ ಭಾವನಾತ್ಮಕ ಪೋಸ್ಟ್!

    August 16, 2025

    ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಹೂ ಕೀಳಲು ಹೋಗಿದ್ದ ವ್ಯಕ್ತಿ ಸಾವು!

    August 8, 2025

    ರಾಜ್ಯ ಹೆದ್ದಾರಿಯನ್ನೇ ನುಂಗಿ ತೇಗಿದ ಹೊಟೇಲ್: ಕಣ್ಮುಚ್ಚಿ ಕುಳಿತ ಲೋಕೋಪಯೋಗಿ ಇಲಾಖೆ

    August 4, 2025
    Our Picks

    ದರ್ಗಾದ ಮೇಲ್ಛಾವಣಿ ಕುಸಿದು 5 ಮಂದಿ ಸಾವು

    August 16, 2025

    ಹಿಂದೂ ಎಂದು ನಂಬಿಸಿ ಅನೇಕ ಯುವತಿಯರನ್ನು ವಿವಾಹವಾಗಿದ್ದ ವ್ಯಕ್ತಿಯ ಬಂಧನ

    August 16, 2025

    ದೀಪಾವಳಿಗೆ ಡಬಲ್ ಗಿಫ್ಟ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ

    August 15, 2025

    ಶಾಲಾ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ: ಐವರ ಬಂಧನ

    August 11, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಕೇಂದ್ರ ಮತ್ತು ರಾಜ್ಯ ಸರ್ಕಾರ ಮಧ್ಯೆ ಸಮನ್ವಯತೆ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ : ವಿ.ಸೋಮಣ್ಣ

    August 18, 2025

    ಕೊರಟಗೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಸಮನ್ವಯತೆ ಇಲ್ಲದೆ ಇದ್ದರೆ ಅಭಿವೃದ್ಧಿ ಅಸಾಧ್ಯ ಎಂದು ಕೇಂದ್ರ ಸಚಿವ…

    ತಲ್ವಾರ್ ನಿಂದ ಹಲ್ಲೆ ನಡೆಸಿ ತಮ್ಮನಿಂದ ಅಣ್ಣನ ಬರ್ಬರ ಹತ್ಯೆ!

    August 18, 2025

    ಭಾರೀ ಮಳೆ ಹಿನ್ನೆಲೆ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಭೇಟಿ

    August 18, 2025

    ತುಂಗಭದ್ರಾ ಜಲಾಶಯದ 33 ಕ್ರಸ್ಟ್ ಗೇಟನ್ನೂ ಬದಲಿಸಿ: ಬಿ.ವೈ.ವಿಜಯೇಂದ್ರ ಒತ್ತಾಯ

    August 18, 2025

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2025 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.