ಡಾ.ಬ್ರೋ ಹಲವು ದೇಶಗಳನ್ನು ಸುತ್ತಿ ಬ್ಲಾಗ್ ಮಾಡಿದ್ದರು. ಇದೀಗ ಡಾ.ಬ್ರೋ ಹೊಸ ಉದ್ಯಮ ಆರಂಭಿಸಿದ್ದಾರೆ. ಬೆಂಗಳೂರಿನಲ್ಲಿ ತಮ್ಮ ಆಫೀಸು ಓಪನ್ ಮಾಡಿರುವ ಬ್ರೋ, ಗೋ ಪ್ರವಾಸವೆಂಬ ಟ್ರಾವೆಲಿಂಗ್ ಉದ್ಯಮ ಶುರು ಮಾಡಿದ್ದಾರೆ.
ವಿಶ್ವದ ಮೂಲೆ ಮೂಲೆಯನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದು ಕನ್ನಡಿಗರಿಗೆ ತೋರಿಸುತ್ತಿರುವ ಡಾ. ಬ್ರೋ ಪ್ರಸಿದ್ಧಿಯ ಗಗನ್, ವಿನೂತನ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರವಾಸದ ಮೂಲಕವೇ ಪ್ರಸಿದ್ಧಿ ಪಡೆದಿರುವ ಗಗನ್, ಈಗ ತಮ್ಮ ಜೊತೆ ಸಾಮಾನ್ಯ ಜನರಿಗೂ ವಿಶ್ವವನ್ನು ಸುತ್ತಲು ಅವಕಾಶ ಮಾಡಿಕೊಡ್ತಿದ್ದಾರೆ.
ಈ ಕೆಲಸಕ್ಕೆ ಡಾ.ಬ್ರೋಗೆ ಅವರ ಸ್ನೇಹಿತರು ಕೂಡ ಸಾಥ್ ಕೊಟ್ಟಿದ್ದಾರೆ. ಇವರೆಲ್ಲ ಸೇರಿ, ನಿಮ್ಮನ್ನು ಭಾರತ ಸೇರಿ, ಬೇರೆ ಬೇೆರೆ ದೇಶಗಳಿಗೆ ಪ್ರವಾಸಕ್ಕೆ ಕರೆದೊಯ್ಯುತ್ತಾರೆ. ಇನ್ನು ಗೋ ಪ್ರವಾಸಕ್ಕೆ ಎಷ್ಟರ ಮಟ್ಟಿಗೆ ರೆಸ್ಪಾನ್ಸ್ ಸಿಕ್ಕಿದೆ ಅಂದ್ರೆ, ಫಟಾಪಟ್ ಎಂದು ಟಿಕೇಟ್ ಸೇಲ್ ಆಗಿದೆ. ಡಾ.ಬ್ರೋ ಈ ಪ್ರವಾಸಿಗರ ಜೊತೆಗೆ ಹೋಗಿ, ಅಲ್ಲಿನ ವಿಶೇಷತೆಯನ್ನು ಪ್ರವಾಸಿಗರಿಗೆ ತೋರಿಸುತ್ತಾರೆ.
ವಿಜಯನಗರದಲ್ಲಿ ಡಾಕ್ಟರ್ ಬ್ರೋ, ಗೋ ಪ್ರವಾಸ (gopravasa) ಹೆಸರಿನ ಕಚೇರಿ ತೆರೆದಿದ್ದಾರೆ. 78ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿಯೇ ಡಾ. ಬ್ರೋ ಅವರ ಕಚೇರಿ ಉದ್ಘಾಟನೆಯಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಕಚೇರಿ ಮುಂದೆ ನಿಂತಿರುವ ಪೋಸ್ಟ್ ಹಾಕಿದ ಗಗನ್, 78ನೇ ಸ್ವಾತಂತ್ರ್ಯ ದಿನದಂದು ಗೋ ಪ್ರವಾಸದ ಹೊಸ ಆಫೀಸ್ ಅನ್ನು ವಿಜಯನಗರದಲ್ಲಿ ತೆರೆಯಲಾಗಿದೆ. ಪ್ರಯಾಣದ ಉತ್ಸಾಹಿ ಜನರ ಭಾಗವಾಗಲು ನನಗೆ ಖುಷಿಯಾಗ್ತಿದೆ ಎಂದು ಶೀರ್ಷಿಕೆ ಹಾಕಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


