ರಾಖಿ ಹಬ್ಬದ ದಿನದಂದೇ ಆಕಾಶದಲ್ಲಿ ಅಪರೂಪದ ವಿಸ್ಮಯ ಘಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ಬಾರಿ ಆಗಸ್ಟ್ 19ರ ರಾಖಿ ಹುಣ್ಣಿಮೆಯಂದು ಆಕಾಶದಲ್ಲಿ ನೀಲಿ ಚಂದ್ರ ನೋಡಲು ಕಾಣಸಿಗಲಿದ್ದಾನೆ.
ಅತ್ಯಪರೂಪದ ”ಸೂಪರ್ ಬ್ಲೂ ಮೂನ್”ಗೆ ಕ್ಷಣಗಣನೆ ಆರಂಭವಾಗಿದೆ.
ಸೂಪರ್ಮೂನ್ಗಳು ಸಾಮಾನ್ಯವಾಗಿ ವರ್ಷಕ್ಕೆ 3-4 ಬಾರಿ ಸಂಭವಿಸುತ್ತವೆ.ಈ ತಿಂಗಳು, ಸೂಪರ್ ಮೂನ್ ಮತ್ತು ಬ್ಲೂ ಮೂನ್ ಒಂದುಗೂಡುವ ಅಪರೂಪದ ಖಗೋಳ ಘಟನೆಯನ್ನು ನಾವು ವೀಕ್ಷಿಸಬಹುದು. ಈ ಅಪರೂಪದ ಖಗೋಳ ವಿದ್ಯಮಾನವನ್ನು ಹಲವು ವರ್ಷಗಳಿಗೊಮ್ಮೆ ಮಾತ್ರ ಕಾಣಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಸಾಮಾನ್ಯವಾಗಿ, ಆಗಸ್ಟ್ನಲ್ಲಿ ಬರುವ ಹುಣ್ಣಿಮೆಯನ್ನು ‘ಸ್ಟರ್ಜನ್ ಮೂನ್ ಎಂದು ಕರೆಯಲಾಗುತ್ತದೆ. ಸೂಪರ್ ಬ್ಲೂ ಮೂನ್ ಆಗಸ್ಟ್ನಲ್ಲಿ ಕಾಣಿಸಿಕೊಳ್ಳುವುದರಿಂದ ಇದನ್ನು ‘ಸ್ಟರ್ಜನ್ ಮೂನ್ ಎಂದೂ ಕರೆಯಲಾಗುತ್ತದೆ. ಚಂದ್ರನು ಭೂಮಿಗೆ ಹತ್ತಿರ ಬಂದಾಗ ಈ ಸೂಪರ್ ಮೂನ್ಗಳು ರೂಪುಗೊಳ್ಳುತ್ತವೆ. ಚಂದ್ರನು ಭೂಮಿಗೆ 90 ಪ್ರತಿಶತದಷ್ಟು ಹತ್ತಿರ ಬಂದಾಗ ಸೂಪರ್ ಮೂನ್ ಸಂಭವಿಸುತ್ತದೆ. ಸೂಪರ್ಮೂನ್ ಎಂಬ ಪದವನ್ನು ಖಗೋಳಶಾಸ್ತ್ರಜ್ಞ ರಿಚರ್ಡ್ ನೊಲ್ಲೆ ಅವರು 1979 ರಲ್ಲಿ ಸೃಷ್ಟಿಸಿದ್ದರು.
ಭಾರತದ ಕಾಲಮಾನದ ಪ್ರಕಾರ ಆಗಸ್ಟ್ 19 ಅಂದರೆ ಇಂದು ರಾತ್ರಿ 11-56ಕ್ಕೆ ಚಂದ್ರನು ಸಾಮಾನ್ಯ ದಿನಗಳಿಗಿಂತ 30 ಪ್ರತಿಶತದಷ್ಟು ಪ್ರಕಾಶಮಾನವಾಗಿ ಮತ್ತು 14 ಪ್ರತಿಶತದಷ್ಟು ದೊಡ್ಡದಾಗಿ ಕಾಣಿಸುತ್ತಾನೆ. ಈ ವರ್ಷದ 4 ಸೂಪರ್ ಮೂನ್ಗಳಲ್ಲಿ ಇದು ಮೊದಲನೆಯದಾಗಿದೆ.ಇನ್ನುಳಿದ ಮೂರು ಮುಂಬರುವ ಸೆಪ್ಟೆಂಬರ್ 17, ಅಕ್ಟೋಬರ್ 17 ಮತ್ತು ನವೆಂಬರ್ 15 ರಂದು ಕಾಣಿಸಲಿದೆ ಎಂದು ಹೇಳಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


