‘ನ್ಯಾಷನಲ್ ಕ್ರಶ್’ ಎಂದೇ ಖ್ಯಾತರಾಗಿರುವ ನಟಿ ರಶ್ಮಿಕಾ ವಿಶ್ವದಾದ್ಯಂತ ಕೋಟಿ ಕೋಟಿ ಅಭಿಮಾನಿಗಳನ್ನು ಹೊಂದಿದ್ದಾರೆ. ರಶ್ಮಿಕಾ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಪ್ರಸಿದ್ಧ ನಟರೊಂದಿಗೆ ಜೋಡಿಯಾಗಿದ್ದಾರೆ. ಮತ್ತು ಅವರ ವೃತ್ತಿಜೀವನವು ಪ್ರಸ್ತುತ ಉತ್ತುಂಗದಲ್ಲಿದೆ. ಸಾಲು ಸಾಲಾಗಿ ಆಫರ್ ಗಳು ಬರುತ್ತಲೇ ಇವೆ.
ಮದನ್ ಮಂದಣ್ಣ–ಸುಮನ್ ಮಂದಣ್ಣ ಅವರ ಹಿರಿಯ ಮಗಳು ನಟಿ ರಶ್ಮಿಕಾಗೆ ಒಬ್ಬ ತಂಗಿ ಕೂಡ ಇದ್ದಾರೆ. ಅವರ ಫೊಟೋವನ್ನು ನಟಿ ಆಗಾಗ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡುತ್ತಿರುತ್ತಾರೆ. ಕೊಡಗಿನ ಕುವರಿ ರಶ್ಮಿಕಾ ಮಂದಣ್ಣಗೆ ಪುಟ್ಟ ತಂಗಿ ಇರುವ ವಿಚಾರ ಅವರ ಅಭಿಮಾನಿಗಳಿಗೆ ತಿಳಿದಿದೆ. ರಶ್ಮಿಕಾ ಕೂಡ ಅಪರೂಪಕ್ಕೊಮ್ಮೆ ತಂಗಿ ಜೊತೆಗಿನ ಫೋಟೋವನ್ನು ಶೇರ್ ಮಾಡ್ತಾರೆ. ಇಂದು ರಕ್ಷಾ ಬಂಧನವಾದ ಹಿನ್ನೆಲೆ ರಶ್ಮಿಕಾ ಮಂದಣ್ಣ ತಂಗಿಗಾಗಿ ಲವ್ಲಿ ಮೆಸೇಜ್ ಕಳಿಸಿದ್ದರು.
ಸೋಮವಾರ ಭಾರತದಾದ್ಯಂತ ರಕ್ಷಾ ಬಂಧನವನ್ನು ಆಚರಿಸಿದಾಗ, ನಟಿ ರಶ್ಮಿಕಾ ತನ್ನ ತಂಗಿಯ ಮೇಲಿನ ಅಪಾರ ಪ್ರೀತಿ ಮತ್ತು ವಾತ್ಸಲ್ಯವನ್ನು ವ್ಯಕ್ತಪಡಿಸುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ನಟಿ ರಶ್ಮಿಕಾ ತನ್ನ ತಂಗಿಗಿಂತ 17 ವರ್ಷ ದೊಡ್ಡವಳು ಎಂಬುದು ಗಮನಾರ್ಹ. ರಶ್ಮಿಕಾ ಮಂದಣ್ಣ ಅವರ ತಂಗಿಯ ಹೆಸರು ಶಿಮೋನ್ ಮಂದಣ್ಣ. ಶಿಮೋನ್ಗೆ 9 ವರ್ಷ. ಸದ್ಯ ರಶ್ಮಿಕಾ ತನ್ನ ತಂಗಿಯೊಂದಿಗೆ ಇರುವ ಮುದ್ದಾದ ಫೋಟೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.
ಪುಟ್ಟ ತಂಗಿ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ನೀನು ಸುಂದರ ಹುಡುಗಿಯಾಗಿ ಬೆಳೆಯುತ್ತೀಯಾ ಎಂದು ನಾನು ಭಾವಿಸುತ್ತೇನೆ, ಎಲ್ಲರೂ ಗೌರವಿಸುವ ವ್ಯಕ್ತಿಯಾಗುತ್ತೀತಾ ಎಂದು ನಂಬಿದ್ದೇನೆ. ನೀನು ಜೀವನದಲ್ಲಿ ಹಲವಾರು ಯುದ್ಧಗಳನ್ನು ಮಾಡಬೇಕಿಲ್ಲ. ನನಗೆ ಎಷ್ಟು ಸಾಧ್ಯವೋ ಅಷ್ಟು ನಾನು ನಿನ್ನನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ ಎಂದು ಈ ವೇಳೆ ನಿನಗೆ ಭರವಸೆ ನೀಡುತ್ತೇನೆ ಎಂದು ಹೇಳಿದ್ರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q