ಸೋಷಿಯಲ್ ಮೀಡಿಯಾದಲ್ಲಿ ನಮ್ರತಾ ಹಾಗೂ ಕಿಶನ್ ಬೆಳಗಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅದರಲ್ಲೂ ಇಬ್ಬರ ಡ್ಯಾನ್ಸ್ ವಿಡಿಯೋಗೇ ಅಭಿಮಾನಿಗಳು ಕಾಯುತ್ತಿರುತ್ತಾರೆ. ಇಬ್ಬರು ಕೂಡ ಒಳ್ಳೆಯ ಡ್ಯಾನ್ಸರ್ಸ್. ರೊಮ್ಯಾಂಟಿಕ್ ಆಗಿ ಡ್ಯಾನ್ಸ್ ಮಾಡಿ ಮೋಡಿ ಮಾಡಿದ ವಿಡಿಯೋಗಳು ಹರಿದಾಡುತ್ತಿವೆ.
ನಮ್ರತಾ ಹಾಗೂ ಕಿಶನ್ ಪರಿಚಯವಾಗಿದ್ದು ‘ತಕಧಿಮಿತ’ ಡ್ಯಾನ್ಸ್ ಶೋ ಮೂಲಕ. ಆ ಸಮಯದಲ್ಲಿ ನಮ್ರತಾ ಅವರ ಡ್ಯಾನ್ಸ್ ಪಾಟ್ನರ್ ಕಾಲಿನ ಸಮಸ್ಯೆ ಆಗಿ ಅರ್ಧಕ್ಕೆ ಬಿಟ್ಟಿದ್ದರು. ಆಗ ನಮ್ರತಾಗೆ ಪಾಟ್ನರ್ ಆಗಿದ್ದು ಇದೇ ಕಿಶನ್. ಡ್ಯಾನ್ಸ್ ಮುಗಿದ ಮೇಲೆ ನಮ್ರತಾರ ತಾಯಿ ಕಿಶನ್ ಕ್ಲೋಸ್ ಆಗಿದ್ದು. ಹಬ್ಬ ಹರಿದಿನಗಳಿಗೆ ಕರೆಯುತ್ತಿದ್ದರು. ಬಳಿಕ ಮನೆಯವರೆಲ್ಲ ಕ್ಲೋಸ್ ಆಗಿದ್ದು ಅಂತ ಕಿಶನ್ ಹೇಳಿಕೊಂಡಿದ್ದಾರೆ.
ಫ್ರೆಂಡ್ಸ್ ಅಂತ ಬಂದಾಗ ನೆಕ್ ನೇಮ್ ಇರುವುದು ಕಾಮನ್. ಕಿಶನ್ ಅವರು ನಮ್ರತಾರನ್ನ ಏನಂತ ಕರೆಯುತ್ತಾರೆ ಹಾಗೇ ನಮ್ರತಾ, ಕಿಶನ್ ಅವರನ್ನ ಏನಂತ ಕರೆಯುತ್ತಾರೆ ಎಂಬ ಕುತೂಹಲದ ಪ್ರಶ್ನೆಗೂ ಉತ್ತರಿಸಿದ್ದಾರೆ. ‘ನಮ್ರತಾಳನ್ನ ಗುಂಡಕ್ಕ ಅಂತ ಕರೆಯುತ್ತೀನಿ. ಆದ್ರೆ ನಂಬರ್ ಸೇವ್ ಮಾಡಿಕೊಂಡಿರುವುದು ಮಾತ್ರ WTF ಅಂತ. ಅದಕ್ಕೆ ಕಾರಣವೂ ಇದೆ.
ಯಾವಾಗ ಕೋಪ ಬಂದ್ರು ನಮ್ರತಾ What The F*** ಅಂತಾರೆ. ಅದ್ಕೆ ಆ ರೀತಿ ಸೇವ್ ಮಾಡಿಕೊಂಡಿದ್ದೀನಿ ಎಂದಿದ್ದಾರೆ.
ಹಾಗೇ ನಮ್ರತಾ ಕೂಡ ಕಿಶನ್ ಹೆಸರನ್ನ ಸ್ಟ್ರೆಸ್ ಅಂತ ಸೇವ್ ಮಾಡಿಕೊಂಡಿದ್ದಾರಂತೆ. ಯಾವಾಗಲೂ ಸ್ಟ್ರೆಸ್ ತೆಗೆದುಕೊಳ್ಳುವುದು ಕಿಶನ್ ಜಾಸ್ತಿ ಅಂತೆ. ಅದಕ್ಕೆ ಆ ರೀತಿ ಸೇವ್ ಮಾಡಿಕೊಂಡಿದ್ದೀನಿ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


