ತುಮಕೂರು: ತುಮಕೂರು ಜಿಲ್ಲೆಯ ಕೆ.ಟಿವಿ ಕನ್ನಡ ವಾಹಿನಿಯ ಜಿಲ್ಲಾ ವರದಿಗಾರರಾದ ಸಿದ್ದೇಶ್ ಎನ್.ಎಸ್. ಅವರಿಗೆ 78ನೇ ಭಾರತದ ಸ್ವಾತಂತ್ರ್ಯೋತ್ಸವದ ಅಂಗವಾಗಿ “ಭಾರತ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ಈ ಪ್ರಶಸ್ತಿಯನ್ನು ಬೆಂಗಳೂರಿನ ಕನ್ನಡ ಭವನದಲ್ಲಿ ನೆಹರೂ ಯುವ ಕೇಂದ್ರ, ಸ್ವಾನ್ ಸಾಮಾಜಿಕ–ಆರ್ಥಿಕ ಅಭಿವೃದ್ಧಿ ಸಂಸ್ಥೆ (ರಿ.), ಸ್ವರ್ಣಮುಖಿ ಮಾಸ ಪತ್ರಿಕೆ, ಇಂದು ಸಂಜೆ ದಿನಪತ್ರಿಕೆ, ಎಸ್.ಬಿ. ನ್ಯೂಸ್ ಹಾಗೂ ವಿ. ನಾಗರಾಜು ಪ್ರತಿಷ್ಠಾನದ ಸಹಯೋಗದಲ್ಲಿ 22-08-2024ರಂದು ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಸಿದ್ದೇಶ್ ಎನ್.ಎಸ್. ಅವರು ತಮ್ಮ ವರದಿಗಾರಿಕೆಯಲ್ಲಿ ತೇಜಸ್ವಿನಿ ಪತ್ರಿಕೆ ಸೇರಿದಂತೆ ಹಲವು ಸಣ್ಣ ಮತ್ತು ಮಧ್ಯಮ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ಕೆ.ಟಿವಿ ಕನ್ನಡ ವಾಹಿನಿಯ ತುಮಕೂರು ಜಿಲ್ಲಾ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ, ಈ ಗೌರವವನ್ನು ಸಲ್ಲಿಸಲಾಗಿದೆ.
ಈ ಪ್ರಶಸ್ತಿಯೊಂದಿಗೆ ಸಿದ್ದೇಶ್ ಎನ್.ಎಸ್. ಅವರ ವರದಿಗಾರಿಕೆಯಲ್ಲಿ ತೋರಿದ ಶ್ರದ್ಧೆ, ಪ್ರಾಮಾಣಿಕತೆ, ಮತ್ತು ನಿಷ್ಠೆಗೆಯ ಗುರುತಾಗಿ ಈ ಗೌರವ ದೊರೆತಿದ್ದು, ಅವರಿಗೆ ಮತ್ತಷ್ಟು ಪ್ರೋತ್ಸಾಹ ನೀಡಲಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q