nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ

    June 17, 2026

    ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು

    June 17, 2026
    Facebook Twitter Instagram
    ಟ್ರೆಂಡಿಂಗ್
    • ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
    • ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ
    • ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು
    • ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ
    • ಗ್ರಾಮೀಣ ಕುಡಿಯುವ ನೀರು ಪೂರೈಕೆ ವ್ಯತ್ಯಯವಾಗದಂತೆ ಕ್ರಮ: ಸಚಿವ ಈಶ್ವರ ಖಂಡ್ರೆ
    • ಶುಲ್ಕ ಮರುಪಾವತಿ ಯೋಜನೆಯಡಿ ಅರ್ಜಿ ಆಹ್ವಾನ
    • ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ
    • ಮಧುಗಿರಿ: ರಾಜಣ್ಣ, ಜಮೀರ್ ಗೆ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಪ್ರತಿಭಟನೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ‘ತತ್ತ್ವಪದಗಳೆಂದರೆ ತಿಳುವಳಿಕೆಯ ಹಾಡುಗಳು’: ಕನ್ನಡ ವಿದ್ವಾಂಸ ಡಾ.ಶ್ಯಾಮಸುಂದರ ಬಿದರಕುಂದಿ ಅಭಿಮತ
    ತುಮಕೂರು August 25, 2024

    ‘ತತ್ತ್ವಪದಗಳೆಂದರೆ ತಿಳುವಳಿಕೆಯ ಹಾಡುಗಳು’: ಕನ್ನಡ ವಿದ್ವಾಂಸ ಡಾ.ಶ್ಯಾಮಸುಂದರ ಬಿದರಕುಂದಿ ಅಭಿಮತ

    By adminAugust 25, 2024No Comments2 Mins Read

    Provided by
    Provided by

    ತುಮಕೂರು: ತತ್ತ್ವಪದಗಳೆಂದರೆ ತಿಳುವಳಿಕೆಯ ಹಾಡುಗಳು. ಜನರ ಸಾಹಿತ್ಯವಾಗಿರುವ ತತ್ತ್ವಪದಗಳು, ಕೀರ್ತನೆಗಳು ಹೃದಯದಿಂದ ಹುಟ್ಟಿವೆ. ಮಾತಿನಲ್ಲಿ ಕಾವ್ಯಕಟ್ಟಿ, ಹಾಡಿ, ಜನರಿಗೆ ತಿಳುವಳಿಕೆ ಹೇಳಿದ ಕೀರ್ತಿಶಿಶುನಾಳ ಶರೀಫರಿಗೆ ಸಲ್ಲುತ್ತದೆ ಎಂದು ಹಿರಿಯ ಕನ್ನಡ ವಿದ್ವಾಂಸ ಡಾ.ಶ್ಯಾಮಸುಂದರ ಬಿದರಕುಂದಿ ಹೇಳಿದರು.

    ತುಮಕೂರು ವಿಶ್ವವಿದ್ಯಾನಿಲಯದ ಸಂತ ಶಿಶುನಾಳ ಶರೀಫ ಅಧ್ಯಯನ ಪೀಠ ಗುರುವಾರ ಆಯೋಜಿಸಿದ್ದ ‘ಕನ್ನಡದ ಆಧುನಿಕತೆ ಮತ್ತು ಸಂತ ಶಿಶುನಾಳ ಶರೀಫರು’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

    ದೇವರ, ಧರ್ಮದ ಹೆಸರಿನಲ್ಲಿ ಮೌಢ್ಯ ಬಿತ್ತುವ ಪ್ರಕ್ರಿಯೆ ಹಿಂದೆಯಿಂದ ನಡೆದಿದೆ. ಆದರೆ, ಪ್ರತಿ ಶತಮಾನದಲ್ಲೂ ಪಂಪ, ಬಸವಣ್ಣನಂತಹ ಮಾನವೀಯ ಮೌಲ್ಯ ಉಳ್ಳವರು ಜನ್ಮತಾಳಿ ಪ್ರತಿ ಹಂತದಲ್ಲೂ ಮನುಷ್ಯತ್ವ ಬೋಧಿಸಿದರು ಎಂದು ತಿಳಿಸಿದರು.

    ಮನುಷ್ಯ ಎಂಬುವ ಮಾತು ಹೃದಯದಿಂದ ಹುಟ್ಟುತ್ತದೆ. ಬಟ್ಟೆಯಿಂದ ಶ್ರೀಮಂತಿಕೆ ಬರುವುದಿಲ್ಲ, ಮನುಷ್ಯತ್ವದಿಂದ ಶ್ರೀಮಂತಿಕೆ ಬರಬೇಕು. ಮನುಷ್ಯರು ಭೇದ ಭಾವವಿಲ್ಲದೆ ಹೆಣ್ಣು–ಗಂಡು, ಮೇಲು–ಕೀಳು, ಬಡವ–ಶ್ರೀಮಂತ, ಜಾತಿ ಮುಂತಾದ ತಾರತಮ್ಯವಿಲ್ಲದೆ ಬದುಕಲು ಪ್ರಯತ್ನಿಸಬೇಕು. ಇದು ಶಿಶುನಾಳ ಶರೀಫರ ಆಶಯವಾಗಿತ್ತು ಎಂದರು.

    ತಾತ್ವಿಕ ಚಿಂತನೆಗಳಿಂದ, ಪ್ರಶ್ನೆಗಳಿಂದ ಶರೀಫರು ತಾವೂ ಬೆಳೆದು, ಸಮಾಜವನ್ನು ಸಮಾಜದಿಂದಲೇತಿದ್ದಲು ಪದಗಳನ್ನು ಕಟ್ಟಿದರು. ಆಧುನಿಕ ಕನ್ನಡದ ಆರಂಭಿಕ ಕವಿಯಾಗಿ ಸಮಾಜಕ್ಕೆ ಶಿಕ್ಷಕನಾಗಿ, ಮೌಖಿಕ ಸಾಹಿತ್ಯದ ಸಾಂತ್ವನಜೀವಿಯಾಗಿ ಕಾಣುತ್ತಾರೆ. ಮನುಷ್ಯ ಬದುಕಬೇಕಾಗಿರುವುದು ಜ್ಞಾನದಿಂದ, ಅರಿವಿನಿಂದ ಎಂದು ಶರೀಫರು ಜಗತ್ತಿಗೆ ಸಾರಿದರು ಎಂದರು.

    ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಶರೀಫರು ಬರೆದ ಕವಿತೆಗಳು ಸಾಮಾಜಿಕ ಪಿಡುಗುಗಳನ್ನು ತೊಲಗಿಸುವ ಮತ್ತು ಜೀವನಕ್ಕೆ ಹತ್ತಿರವಾಗುವಂತಹ ಕವಿತೆಗಳು. ಧರ್ಮ, ಜಾತಿಗಳು ಒಂದಾಗಿ ಸಾಮರಸ್ಯ ಮನುಷ್ಯನಲ್ಲಿ ಹೆಚ್ಚಾಗಬೇಕು ಎಂದರು.

    ಸಂತ ಶಿಶುನಾಳ ಶರೀಫ ಅಧ್ಯಯನ ಪೀಠದ ನಿರ್ದೇಶಕ ಪ್ರೊ.ಎನ್.ಎಸ್. ಗುಂಡೂರ ಮಾತನಾಡಿ, ಶಿಶುನಾಳ ಶರೀಫರು ಕನ್ನಡ ಸಾಹಿತ್ಯ ಲೋಕದ ಕಿರೀಟ, ಶರೀಫರ ತತ್ತ್ವಪದಗಳನ್ನು ಕಾಪಾಡಿಕೊಂಡು, ಮುಂದಿನ ಪೀಳಿಗೆಗಳಿಗೆ ಪಸರಿಸಬೇಕು. ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ಹೆಚ್ಚಾದಾಗ ಲೇಖಕನಿಗೆ ಮತ್ತು ಓದುಗನಿಗೆ ಆಂತರಿಕ ಉಪಯೋಗಗಳಿವೆ ಎಂದರು. ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ.ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ

    June 17, 2026

    ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು

    June 17, 2026

    Comments are closed.

    Our Picks

    ಮಗಳ ಗಂಡನನ್ನೇ ವರಿಸಿದ ಅತ್ತೆ: ಕದ್ದುಮುಚ್ಚಿ ಶುರುವಾದ ಪ್ರೀತಿಗೆ ಬಿತ್ತು ಮದುವೆ ಮುದ್ರೆ!

    June 8, 2026

    ಪೈಲ್ವಾನ್ ಜೊತೆ ಕುಸ್ತಿಯಾಡು ಎಂದು ಹೆಂಡತಿಯನ್ನೇ ಮುಂದೆ ಬಿಟ್ಟ ಖ್ಯಾತ ನಟ: ಮುಂದೇನಾಯ್ತು?

    June 8, 2026

    ಪತ್ನಿಗೆ ರಾಜ್ಯಸಭಾ ಆಫರ್ ನಿರಾಕರಿಸಿದ ಸಿದ್ದರಾಮಯ್ಯ; 3 ಡಿಸಿಎಂ ಹುದ್ದೆಗಾಗಿ ಪಟ್ಟು!

    June 1, 2026

    ದ್ವೇಷ ಭಾಷಣ ಮಸೂದೆಗೆ ಕೇಂದ್ರ ಗೃಹ ಸಚಿವಾಲಯ ಬ್ರೇಕ್: ಕರ್ನಾಟಕ ಸರ್ಕಾರಕ್ಕೆ ಭಾರಿ ಹಿನ್ನಡೆ!

    May 26, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ಸಿರಾನಗರಸಭೆ ವ್ಯಾಪ್ತಿಯಲ್ಲಿ ವಿವಿಧ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

    June 17, 2026

    ತುಮಕೂರು : 2026–2027 ಸಾಲಿನ ಎಸ್ ಎಫ್ ಸಿ ಮುಕ್ತನಿಧಿ ಅನುದಾನದಲ್ಲಿ ಹಾಗೂ ನಗರಸಭಾ ನಿಧಿಯಲ್ಲಿ ಶೇ24.1, 7.25 ಹಾಗೂ…

    ಜು.18: ನ್ಯಾಯಾಲಯಗಳಲ್ಲಿ ವಿಶೇಷ ಲೋಕ ಅದಾಲತ್: ವಿವಿಧ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಸಹಕಾರಿ

    June 17, 2026

    ಕೊರಟಗೆರೆ: ಆಟೋ ಡಿಕ್ಕಿಯಾಗಿ ಯುವಕ ಸಾವು

    June 17, 2026

    ಸಮಾಜ ಕಲ್ಯಾಣ ಇಲಾಖೆ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಆರಂಭ

    June 17, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.