ನೆಲಮಂಗಲ: ಸರ್ಕಾರ ಬಡ ಮಕ್ಕಳಿಗೆಂದು ಅನ್ನದಾಸೋಹ ಯೋಜನೆ ಅಡಿಯಲ್ಲಿ ಬಿಸಿಯೂಟ ನೀಡಲು ಕೋಟ್ಯಾಂತರ ರೂಪಾಯಿ ಬರಿಸುತ್ತಿದ್ದರೆ, ಇಲ್ಲಿ ನಾಲ್ಕು ಜನ ಆ ಮಕ್ಕಳ ಅನ್ನಕ್ಕೆ ಕನ್ನ ಹಾಕಲು ಯತ್ನಿಸಿ ಸಿಕ್ಕಿಹಾಕಿಕೊಂಡಂತಹ ಘಟನೆ ನೆಲಮಂಗಲ ಹೃದಯ ಭಾಗದಲ್ಲಿರುವದಲ್ಲಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜು ನಡೆದಿದೆ.
ದಿನಾಂಕ 26.08.2024ರ ಸೋಮವಾರದಂದು ಮಧ್ಯಾಹ್ನ ಸರಿಸುಮಾರು 3:20 ಗಂಟೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗ ನೆಲಮಂಗಲದಲ್ಲಿ ಬಿಸಿಯೂಟ ವ್ಯವಸ್ಥೆಯಲ್ಲಿ ನಿರ್ವಹಣೆ ಮಾಡುವಂತಹ ಸಹ ಶಿಕ್ಷಕರಾದ ಸುದರ್ಶನ್, ದ್ವಿತೀಯ ದರ್ಜೆ ಸಹಾಯಕರಾದ ಸಿದ್ದಲಿಂಗ ಮೂರ್ತಿ ರವರುಗಳು ಆಹಾರ ಪದಾರ್ಥಗಳನ್ನ ಕದ್ದು ಸಾಗಿಸುವಾಗ ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ರವರ ಕಣ್ಣಿಗೆ ಬಿದ್ದಿದ್ದು ತಕ್ಷಣದಲ್ಲಿ ಎಚ್ಚೆತ್ತ ಶಂಕರ್ ಗೌಡ್ರು ರವರು ಅಕ್ಷರ ದಾಸೋಹ ವಿಭಾಗದ ಸಹ ನಿರ್ದೇಶಕರಿಗೆ ಕರೆ ಮಾಡಿ ದೂರನ್ನ ಹೇಳಿದ್ದು ತಕ್ಷಣವೇ ಸಹ ನಿರ್ದೇಶಕರಾದ ಶಿವಕುಮಾರ್ ರವರು ಕದ್ದು ಸಾಗಿಸುತ್ತಿದ್ದ ಪದಾರ್ಥಗಳನ್ನು ಮರಳಿ ಶಾಲೆಗೆ ತರುವಂತೆ ಹೇಳಿರುತ್ತಾರೆ, ಆದರೆ ಇಲ್ಲಿವರೆಗೂ ಆಹಾರ ಪದಾರ್ಥಗಳನ್ನು ಕದ್ದು ಸಾಗಿಸುತ್ತಿದ್ದವರ ಮೇಲೆ ಯಾವುದೇ ಕ್ರಮ ವಹಿಸಿರುವುದಿಲ್ಲ, ಇಲ್ಲಿ ನಡೆಯುತ್ತಿರುವ ಘಟನೆಗಳನ್ನೆಲ್ಲ ಗಮನಿಸಿದರೆ ಇದರಲ್ಲಿ ಅಕ್ಷರ ದಾಸೋಹ ಸಹ ನಿರ್ದೇಶಕರಾದ ಶಿವಕುಮಾರ್ ರವರು ಮತ್ತು ಶಾಲೆಯ ಉಪ ಪ್ರಾಂಶುಪಾಲರಾದ ಬಿ.ಆರ್ ಲೋಕೇಶ್ ರವರು ಕೂಡ ಶಾಮಿಲಾಗಿರುವುದು ಮೇಲ್ನೋಟಕ್ಕೆ ಸತ್ಯವೆಂದು ಕಂಡು ಬರುತ್ತದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ನಾವುಗಳು ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೆಲಮಂಗಲ ಇವರಿಗೆ ದೂರನ್ನು ಸಹ ದಾಖಲಿಸಿರುತ್ತೇವೆ ನೆಲಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮುಂದಿನ ದಿನಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು, ನೆಲಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಕ್ತ ಕ್ರಮ ವಹಿಸದೆ ಇದ್ದಲ್ಲಿ ಶಿಕ್ಷಣಾಧಿಕಾರಿಗಳ ಕಚೇರಿಗೆ ಮುತ್ತಿಗೆಯಾಗಿ ಬೃಹತ್ ಮಟ್ಟದ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಮಾಧ್ಯಮದೊಂದಿಗೆ ಮಾತನಾಡಿದ ಕರ್ನಾಟಕ ರಣಧೀರರ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು ತಿಳಿಸಿದ್ದಾರೆ.ಈ ವಿಷಯವಾಗಿ ತಪ್ಪು ಮಾಡಿದ್ದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಬಿ.ಈ.ಓ ಗೆ ಲಿಖಿತ ದೂರು ಸಹ ಸಂಘಟನೆ ಯಿಂದ ನೀಡಲಾಗಿದೆ.
ವರದಿ: ಮಂಜುಸ್ವಾಮಿ ಎಂ.ಎನ್.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


