ಬಾಹ್ಯಾಕಾಶ ಯಾನಿಗಳು ಅಥವಾ ಗಗನಯಾತ್ರಿಗಳು ಎಷ್ಟು ವೇತನ ಪಡೆಯಬಹುದು? ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳುವ ವೇಳೆ ಮತ್ತು ಅಲ್ಲಿಂದ ಭೂಮಿಗೆ ಮರಳುವ ವೇಳೆ ಸದಾ ಜೀವ ಭಯದಲ್ಲೇ ಇರುವ ವಿಜ್ಞಾನಿಗಳಿಗೆ ಸಂಬಳ ಎಷ್ಟು ಗೊತ್ತೆ ?
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿ ಅಲ್ಲಿಯೇ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಮತ್ತಿತರರಿಗೆ ಕಳೆದ ವರ್ಷದ ವೇತನ ಶ್ರೇಣಿಯ ಅನ್ವಯ ವಾರ್ಷಿಕ 70 ಲಕ್ಷ ರು.ನಿಂದ 1.27 ಕೋಟಿ ರು.ವರೆಗೂ ವೇತನ ನಿಗದಿಪಡಿಸಲಾಗಿದೆ. ಆದರೆ ಈ ವೇತನ ಸೇನೆಯಿಂದ ಆಯ್ಕೆಯಾದ ಗಗನಯಾತ್ರಿಗಳಿಗೆ ಸ್ವಲ್ಪ ಕಡಿಮೆ ಇರುತ್ತದೆ. ಕಾರಣ, ಯಾತ್ರೆ ಬಳಿಕ ಅವರು ಸೇನೆಯ ಹುದ್ದೆಯಲ್ಲಿ ಮುಂದುವರೆಯುತ್ತಾರೆ. ಉದಾಹರಣೆಗೆ ಭಾರತೀಯ ಮೂಲದ ರಾಜಾ ಚಾರಿ ಅವರ ಮಾಸಿಕ ವೇತನ 8.92 ಲಕ್ಷ ರು.ನಷ್ಟಿದೆ.
ಇನ್ನು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಗಗನಯಾತ್ರಿಗಳಲ್ಲಿ, ಆರಂಭಿಕ ಹಂತದಲ್ಲಿ ಮಾಸಿಕ 5.50 ಲಕ್ಷ ರು., ಬ್ರಿಟನ್‌ನಲ್ಲಿ 5.86 ಲಕ್ಷ ರು., ಫ್ರಾನ್ಸ್‌ನಲ್ಲಿ 7.23- 8.43 ಲಕ್ಷ ರು., ರಷ್ಯಾದಲ್ಲಿ 4.58 ಲಕ್ಷ ರು. ವೇತನ ನಿಗದಿ ಮಾಡಲಾಗಿದೆ. ಇದಲ್ಲದೇ ಗಗನಯಾತ್ರಿಗಳಿಗೆ ವಿವಿಧ ದೇಶಗಳು ಪ್ರತಿ ಉಡ್ಡಯನಕ್ಕೂ ಪ್ರತ್ಯೇಕ ಬೋನಸ್ ಮತ್ತು ಇತರೆ ಭತ್ಯೆಗಳನ್ನೂ ನೀಡುತ್ತವೆ.
ಹೆಸರು/ದೇಶ ವೇತನ
ಸುನಿತಾ ವಿಲಿಯಮ್ಸ್ 70 ಲಕ್ಷ – 1.27 ಕೋಟಿ (ವಾರ್ಷಿಕ)
ರಾಜಾ ಚಾರಿ 8.92 ಲಕ್ಷ (ಮಾಸಿಕ)
ಯೂರೋಪ್ 5.50 ಲಕ್ಷ (ಮಾಸಿಕ)
ಬ್ರಿಟನ್ 5.86 ಲಕ್ಷ (ಮಾಸಿಕ)
ಫ್ರಾನ್ಸ್ 7.23- 8.43 ಲಕ್ಷ (ಮಾಸಿಕ)
ರಷ್ಯಾ 4.58 ಲಕ್ಷ (ಮಾಸಿಕ)
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q