ಇಂದು ದಾವಣಗೆರೆ ಜಿಲ್ಲೆಯ ಆನೆಕೊಂಡ ಬಸವೇಶ್ವರ ಜಾತ್ರೆ ಅದ್ಧೂರಿಯಾಗಿ ನಡೆಯಿತು. ಈ ವೇಳೆಯಲ್ಲಿ ದೇವರ ಕಾರ್ಣಿಕ ನುಡಿಯನ್ನು ನುಡಿಯಲಾಗಿದೆ. ರಾಮ ರಾಮ ಎಂದು ನುಡಿದಿತಲೇ, ನರ ಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ, ಮುತ್ತೈದೆ ಭೂತಾಯಿ ಉಡಿ ತುಂಬಿತಲೇ ಎಂಬುದಾಗಿ ಪೂಜಾರಪ್ಪ ಕಾರ್ಣಿಕ ನುಡಿ ನುಡಿದಿದ್ದಾರೆ.
ಸಾವಿರಾರು ಜನರ ಸಮ್ಮುಖದಲ್ಲಿ ಕಾರ್ಣಿಕ ನುಡಿಯನ್ನು ಪೂಜಾರಿ ನುಡಿದಿದ್ದು, ಬರುವ ದಿನಗಳಲ್ಲಿ ನಾಡಿಗೆ, ದೇಶಕ್ಕೆ ಒಳ್ಳೇಯದಾಗಲಿದೆ ಎಂಬುದು ಇದರ ಸಾರಾಂಶ ಎಂಬುದಾಗಿ ಜನರು ವಿಶ್ಲೇಷಿಸಿದ್ದಾರೆ.
ನರ ಲೋಕದ ಜನಕೆ ದೃಷ್ಟಿ ಹೆಚ್ಚಿತಲೇ ಎಂಬುದಾಗಿ ದಾವಣಗೆರೆಯ ಆನೆಕೊಂಡ ಬಸವೇಶ್ವರ ದೇವರ ಕಾರ್ಣಿಕ ನುಡಿ ನುಡಿಯುವ ಮೂಲಕ, ಮುಂಬರುವ ದಿನಗಳಲ್ಲಿ ನಾಡಿಗೆ ದೇಶಕ್ಕೆ ಒಳ್ಳೇಯದಾಗಲಿದೆ ಎಂಬುದಾಗಿ ಹೇಳಿದೆ.
ರಾಮ ರಾಮ ಎಂದು ನುಡಿದಿತಲೇ, ನರ ಲೋಕದ ಜನಕೆ ಆನೆ ಕಣ್ಣೀರು ಉಗ್ಗಿತಲೇ, ಮುತ್ತೈದೆ ಭೂತಾಯಿ ಉಡಿ ತುಂಬಿತಲೇ ಎಂದು ಕಾರ್ಣಿಕ ಭವಿಷ್ಯ ನುಡಿದಿದ್ದು, ಇದು ಮುಂದಿನ ದಿನಗಳ ಶುಭ ಸೂಚಕವಾಗಿದೆ. ಕೃಷಿಯಲ್ಲಿ ಉತ್ತಮ ಫಸಲು ಬರಲಿದೆ ಎಂದು ಪೂಜಾರಪ್ಪ ಕಾರ್ಣಿಕ ನುಡಿ ವಿವರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


