ಹಾಸನ: ದರ್ಶನ್ ಬಿಟ್ಟರೆ ಬೇರೆ ಯಾವುದೇ ಸುದ್ದಿಗಳೇ ಇಲ್ವಾ ಎಂದು ಮಾಧ್ಯಮಗಳ ವಿರುದ್ಧ ಸಚಿವ ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಹಾಸನದಲ್ಲಿ ದರ್ಶನ್ ವಿಚಾರವಾಗಿ ಸುದ್ದಿಗಾರರು ಪ್ರಶ್ನಿಸಲು ಮುಂದಾದ ವೇಳೆ ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಬರಿ ದರ್ಶನ್ ಬಗ್ಗೆ ತೋರಿಸುತ್ತೀರಿ. ಅವನನ್ನು ಬಿಟ್ಟು ಬೇರೆ ಯಾವ ವಿಚಾರ ಇಲ್ಲವೇ? ಒಳ್ಳೆಯ ವಿಚಾರಗಳನ್ನು ತೋರಿಸಿ ಎಂದು ಅವರು ಗರಂ ಆಗಿದ್ದಾರೆ.
ಬೆಳಿಗ್ಗೆ ಎದ್ದರೆ ಟಿವಿಯಲ್ಲಿ ಆತನನ್ನೇ ತೋರಿಸುತ್ತೀರಿ. ಅವನೇನು ಸಮಾಜಕ್ಕೆ ರೋಲ್ ಮಾಡೆಲ್ಲಾ? ಅಂತ ಅವರು ಪ್ರಶ್ನಿಸಿದರಲ್ಲದೇ, ಒಳ್ಳೆಯ ಕಲಾವಿದ ಎಂಬುದನ್ನು ಎಲ್ಲರೂ ಒಪ್ಪುತ್ತೇವೆ. ಒಳ್ಳೆಯ ಕಲಾವಿದ ಎಂದ ಮಾತ್ರಕ್ಕೆ ಮಾಡಬಾರದ್ದು ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೆ. ಮೂರು ಹೊತ್ತು ಆತನ ಬಗ್ಗೆಯೇ ತೋರಿಸಿದರೆ ಹೇಗೆ? ಟಿವಿಯವರಿಗೆ ಬೇರೆ ಕೆಲಸವಿಲ್ವಾ? ಅಂತ ಆಕ್ರೋಶ ವ್ಯಕ್ತಪಡಿಸಿದ್ರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


