‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದ ಚಂದನ್ ಶೆಟ್ಟಿ ಇದೀಗ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು, ಇದರ ಟೈಟಲನ್ನು ಇಂದು ರಿವಿಲ್ ಮಾಡಲಾಗಿದೆ. ಈ ಚಿತ್ರಕ್ಕೆ ‘ಮುದ್ದು ರಾಕ್ಷಸಿ’ ಎಂಬ ಟೈಟಲ್ ಇಡಲಾಗಿದ್ದು, ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಪುನೀತ್ ಶ್ರೀನಿವಾಸ್ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಶ್ರೀ ಚೌಡೇಶ್ವರಿ ಕಂಬೈನ್ಸ್ ಬ್ಯಾನರ್ ನಲ್ಲಿ ಎಲ್ ಮೋಹನ್ ಕುಮಾರ್ ನಿರ್ಮಾಣ ಮಾಡಿದ್ದು, ಎಂ ಎಸ್ ತ್ಯಾಗರಾಜ್ ಸಂಗೀತ ಸಂಯೋಜನೆ ನೀಡುತ್ತಿದ್ದಾರೆ. ಸಚಿನ್ ಜಗದೇಶ್ವರನ್ ಸಂಭಾಷಣೆ, ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿನೋದ್ ಅವರ ಸಾಹಸ ನಿರ್ದೇಶನ, ಧನು ಹಾಗೂ ಸಂತೋಷ್ ನೃತ್ಯ ನಿರ್ದೇಶನ, ಹಾಗೂ ಏ ಕರುಣಾಕರ್ ಅವರ ಛಾಯಾಗ್ರಾಣವಿದೆ.
‘ಮುದ್ದು ರಾಕ್ಷಸಿ ‘ ಟೈಟಲ್ ಭಿನ್ನವಾಗಿದ್ದು, ಜನರಲ್ಲಿ ಕೌತುಕ ಮೂಡಿಸಿದೆ. ಇದರಲ್ಲಿ ಒಂದು ಡಿಫರೆಂಟ್ ಆದ ರೊಮ್ಯಾಂಟಿಕ್ ಪ್ರೇಮ್ ಕಹಾನಿ ಇರಲಿದೆ. ಸೈಕೋಥ್ರಿಲ್ಲರ್ ಕಥಾಹಂದರ ಪ್ರಮುಖವಾಗಿ ಇರಲಿದೆ. ಮೊದಲು ಈ ಸಿನಿಮಾಕ್ಕೆ ಕ್ಯಾಂಡಿಕ್ರರ್ಶ್ ಎಂದು ಹೆಸರಿಡಲಾಗಿತ್ತು. ಈಗ ಸಿನಿಮಾ ತಂಡ ಚಿತ್ರದ ಹೆಸರನ್ನೇ ಬದಲಾವಣೆ ಮಾಡುವ ನಿರ್ಧಾರ ಮಾಡಿದೆ. ಕ್ಯಾಂಡಿಕ್ರಶ್ ಎನ್ನುವ ಬದಲಿಗೆ ಸಿನಿಮಾಗೆ ‘ಮುದ್ದುರಾಕ್ಷಸಿ’ ಎನ್ನುವ ಅಚ್ಚಗನ್ನಡದ ಹೆಸರನ್ನು ಇಟ್ಟಿದೆ. ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರೂ ಕೂಡ ಸಿನಿಮಾದ ಪೋಸ್ಟರ್‌ಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಹಂಚಿಕೊಂಡಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


