nammatumakuru

    Subscribe to Updates

    Get the latest creative news from FooBar about art, design and business.

    What's Hot

    ತಾಳ್ಮೆ ಕಳೆದುಕೊಳ್ಳದೇ ಒರಟು ಸ್ವಭಾವದವರ ಜೊತೆಗೆ ವ್ಯವಹರಿಸುವುದು ಹೇಗೆ?: ಇಲ್ಲಿದೆ 7 ಟಿಪ್ಸ್

    January 11, 2026

    ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಅಧ್ಯಕ್ಷರಿಗೆ ಸನ್ಮಾನ

    January 11, 2026

    ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    January 11, 2026
    Facebook Twitter Instagram
    ಟ್ರೆಂಡಿಂಗ್
    • ತಾಳ್ಮೆ ಕಳೆದುಕೊಳ್ಳದೇ ಒರಟು ಸ್ವಭಾವದವರ ಜೊತೆಗೆ ವ್ಯವಹರಿಸುವುದು ಹೇಗೆ?: ಇಲ್ಲಿದೆ 7 ಟಿಪ್ಸ್
    • ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಅಧ್ಯಕ್ಷರಿಗೆ ಸನ್ಮಾನ
    • ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
    • ಪಕ್ಷಕ್ಕೆ ಡ್ಯಾಮೇಜ್ ಆಗೋ ಕೆಲಸ ಯಾವತ್ತೂ ಮಾಡಿಲ್ಲ: ಶಾಸಕ ಎಸ್.ಆರ್.ಶ್ರೀನಿವಾಸ್
    • ಕೇರಳದಲ್ಲಿ ಮಲಯಾಳಂ ಕಡ್ಡಾಯ ವಿರೋಧಿಸಿ ಹೋರಾಟದ ಎಚ್ಚರಿಕೆ ನೀಡಿದ ಸಿಎಂ ಸಿದ್ದರಾಮಯ್ಯ
    • ಸದೃಢ ದೇಹ ಮತ್ತು ಮಾಂಸಖಂಡಗಳ ಬೆಳವಣಿಗೆಗೆ ಇಲ್ಲಿವೆ 7 ಅದ್ಭುತ ಆಹಾರಗಳು!
    • ವಿಜಯಪುರ ಸೈನಿಕ ಶಾಲೆಯಲ್ಲಿ ಬೃಹತ್ ನೇಮಕಾತಿ: ಶಿಕ್ಷಕರು ಹಾಗೂ ವಾರ್ಡ್ ಬಾಯ್ ಹುದ್ದೆಗಳಿಗೆ ಅರ್ಜಿ ಆಹ್ವಾನ
    • ಸರಗೂರು: ಅರ್ಜುನ ಯೂತ್ಸ್ ಸ್ಪೋರ್ಟ್ ಕ್ಲಬ್  ಮಾದರಿ: ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಶನಿವಾರದ ಆ ಒಂದು ಸಂಜೆ | ವಿವೇಕಾನಂದ ಎಚ್.ಕೆ.
    ಲೇಖನ August 30, 2024

    ಶನಿವಾರದ ಆ ಒಂದು ಸಂಜೆ | ವಿವೇಕಾನಂದ ಎಚ್.ಕೆ.

    By adminAugust 30, 2024No Comments3 Mins Read
    vivekananda
    • ವಿವೇಕಾನಂದ. ಎಚ್. ಕೆ.

    ಸುಮಾರು 6 ಗಂಟೆ. ಮೋಡ ಮುಸುಕಿದ ವಾತಾವರಣ. ಇನ್ನೂ ಸ್ವಲ್ಪ ಬೆಳಕಿತ್ತು. ನಗರದ ಅಪಾರ್ಟ್ಮೆಂಟ್ ಕಟ್ಟಡ ನಿರ್ಮಾಣ ಕಾರ್ಯದ ಅಂದಿನ ಕೆಲಸ ಮುಗಿದು ಕೂಲಿ ಹಣದ ಬಟವಾಡೆ ನಡೆಯುತ್ತಿತ್ತು.

    ಮೇಸ್ತ್ರಿ ಒಬ್ಬರು ಕುರ್ಚಿ, ಟೇಬಲ್ ಹಾಕಿಕೊಂಡು ಕುಳಿತು ನಗದು ಹಣವನ್ನು ಹಂಚಿಕೆ ಮಾಡುತ್ತಿದ್ದರು. ಅಲ್ಲಿ ಸುಮಾರು 40 – 50 ವಿವಿಧ ಕೆಲಸಗಾರರು ಸೇರಿದ್ದರು. ಅದರಲ್ಲಿ ಹೆಂಗಸರು ಸಹ ಬಹುತೇಕ ಸಮ ಪ್ರಮಾಣದಲ್ಲಿ ಇದ್ದರು. ಕೆಲವರು ನೆಲದ ಮೇಲೆ, ಸ್ವಲ್ಪ ಜನ ಅಲ್ಲಿದ್ದ ಸಿಮೆಂಟ್ ಇಟ್ಟಿಗೆಗಳ ಮೇಲೆ, ಹಲವರು ಪ್ಲಾಸ್ಟಿಕ್ ಚೀಲಗಳ ಮೇಲೆ ಕುಳಿತು ತದೇಕ ಚಿತ್ತದಿಂದ ಮೇಸ್ತ್ರಿ ಎಣಿಸುವ ದುಡ್ಡನ್ನೇ ನೋಡುತ್ತಾ ಕುಳಿತಿದ್ದರು.


    Provided by
    Provided by

    ಒಂದಿಬ್ಬರು ಎಲೆ ಅಡಿಕೆ, ಮತ್ತಿಬ್ಬರು ಸಿಗರೇಟು, ಇನ್ನಿಬ್ಬರು ವಿಮಲ್ ಅಡಿಕೆ ಪುಡಿ ಹಾಕುತ್ತಾ ಹಣವನ್ನೇ ದಿಟ್ಟಿಸುತ್ತಿದ್ದರು. ಹೆಣ್ಣು ಮಗಳೊಬ್ಬರು ಮಗುವಿಗೆ ಹಾಲು ಕುಡಿಸುತ್ತಿದ್ದರೆ ಮತ್ತೊಂದು ಹೆಂಗಸು ತಲೆ ಬಾಚಿಕೊಳ್ಳುತ್ತಾ ಹಣವನ್ನೇ ನೋಡುತ್ತಿತ್ತು.

    ಅಲ್ಲಿ ಒಬ್ಬಬ್ಬರಿಗೆ ಅಂದಾಜು ಸುಮಾರು 3 ರಿಂದ 5 ಸಾವಿರದವರೆಗೆ ಹಣ ಸಿಗುತ್ತಿತ್ತು. ‌ಅದು ಒಂದು ವಾರದ ಕೂಲಿ ಅಥವಾ ಸಂಬಳ ಇರಬೇಕು.

    ಆ ದೃಶ್ಯ ನೋಡಿದಾಗ ಗಮನ ಸೆಳೆದದ್ದು ಅವರು ಮೇಸ್ತ್ರಿ ಎಣಿಸುತ್ತಿದ್ದ ಹಣವನ್ನು ನೋಡುತ್ತಿದ್ದ ರೀತಿ, ಕಣ್ಣುಗಳಲ್ಲಿ ಇದ್ದ ವರ್ಣಿಸಲಾಗದ – ತೀಕ್ಷ್ಣವೂ ಅಲ್ಲದ, ಕುತೂಹಲವು ಅಲ್ಲದ, ಆಸೆಯೂ ಅಲ್ಲದ ಅಸಹಜ ನೋಟ, ಮುಖದಲ್ಲಿ ವ್ಯಕ್ತವಾಗುತ್ತಿದ್ದ ಗುರುತಿಸಲಾಗದ ಭಾವ ಮನಸ್ಸುಗಳಲ್ಲಿ ಮೂಡುತ್ತಿದ್ದ ಆಲೋಚನೆ ಎಲ್ಲೆಲ್ಲೋ ಕರೆದೊಯ್ಯುತ್ತಿತ್ತು.

    ಆ ದುಡ್ಡು ಅವರ ಪಾಲಿಗೆ ಎಷ್ಟೊಂದು ಮಹತ್ವದ್ದಾಗಿರಬಹುದು, ಆ ನಿರ್ಜೀವ ಪೇಪರ್ ನೋಟುಗಳು ಜೀವವಿರುವ ವ್ಯಕ್ತಿಗಳನ್ನು ಹೇಗೆ ನಿಯಂತ್ರಿಸುತ್ತದೆ, ಅವರ ಕೈಗೆ ಸಿಗುವ ಆ ಹಣವನ್ನು ಅವರು ಹೇಗೆಲ್ಲಾ ಖರ್ಚು ಮಾಡಬಹುದು.

    ಒಬ್ಬರು ಸಾಲದ ಕಂತು ಕಟ್ಟಬಹುದು, ಇನ್ನೊಬ್ಬರು ಬಡ್ಡಿ ಕಟ್ಟಬಹುದು, ಮತ್ತೊಬ್ಬರು ಮನೆ ಬಾಡಿಗೆ, ಇತರರು ಮಕ್ಕಳ ಶಾಲಾ ಶುಲ್ಕ, ನೀರು ವಿದ್ಯುತ್ ಬಿಲ್, ದಿನಸಿ ಅಂಗಡಿ, ಗ್ಯಾಸ್, ಮಾತ್ರೆಗಳು, ಬಟ್ಟೆಗಳು ಹೀಗೆ ಎಷ್ಟೆಷ್ಟೋ ಜೀವನಾವಶ್ಯಕ ಅಥವಾ ಬದುಕಿನ ಚಲನೆಗಾಗಿ ಆ ಹಣವನ್ನೇ ಅವಲಂಬಿಸಿರುವ ಮನಸ್ಥಿತಿ ತುಂಬಾ ಕಾಡುತ್ತದೆ.

    ಶಾಪಿಂಗ್ ಮಾಲ್ ಗಳು, ಸಿನಿಮಾ ಥಿಯೇಟರ್‌ ಗಳು, ಪ್ರವಾಸಿ ತಾಣಗಳು, ಬ್ಯೂಟಿ ಪಾರ್ಲರ್ಗಳು, ವೈಭವೋಪೇತ ಹೋಟೆಲ್‌ಗಳು, ಅಪಾರ್ಟ್ಮೆಂಟ್ ಗಳು, ಮದುವೆ ಗೃಹ ಪ್ರವೇಶಗಳು, ನಾಮಕರಣ ಜನ್ಮದಿನಗಳು, ಪಾರ್ಟಿ ಸಮಾರಂಭಗಳು, ರೆಸಾರ್ಟ್ ಗಳು, ಕಾರುಗಳು, ದುಬಾರಿ ಶೂ ಬಟ್ಟೆ ಮೊಬೈಲುಗಳು, ಸ್ವಿಮಿಂಗ್ ಪೂಲ್ಗಳು ಇವುಗಳ ನಡುವೆ ಈ ಕೂಲಿ ಕಾರ್ಮಿಕರ 3/4 ಸಾವಿರ ರೂಪಾಯಿಗಳ ಖರ್ಚಿನ ಕಾತುರತೆ ನೆನಪಾಗುತ್ತದೆ.

    ಈ ಸಣ್ಣ ಹಣಕ್ಕಾಗಿ ಒಂದು ವಾರ ಕಾಲ ಬೆವರು ಸುರಿಸಿ ದುಡಿಯುವ, ಅದೇ ಬದುಕಾಗಿ ಜೀವನ ಸವೆಸುವ ಜೀವಗಳ ನಡುವೆ ನೂರಾರು ಕೋಟಿಗಳ, ಅಪಾರ ಆಸ್ತಿಗಳ, ಕೇಜಿ ಗಟ್ಟಲೆ ಚಿನ್ನ ಬೆಳ್ಳಿ ಸಂಗ್ರಹಿಸಿರುವವರು ನೆನಪಾಗುತ್ತಾರೆ.

    ಹಣವೆಂಬ ವಸ್ತು ಇಡೀ ಜೀವನದ ಧ್ಯೇಯ, ಗುರಿ, ಸಾರ್ಥಕತೆಯ ಅಥವಾ ಮೋಕ್ಷದ ಮಾರ್ಗವಾಗಿ ಮಾರ್ಪಾಟಾಗಿರುವ ಸಮಾಜದಲ್ಲಿ ನಾವು ವಾಸಿಸುತ್ತಿದ್ದೇವೆ.

    ಹಣ ಎಲ್ಲಿಯಾದರೂ ಇರಲಿ, ಯಾರದಾದರೂ ಆಗಿರಲಿ ಅದನ್ನು ನೋಡುವಾಗ ಆಗುವ ಮನಸ್ಸುಗಳ ಭಾವ, ಅದು ಬೇರೆಯವರ ಪಾಲಾದಾಗ ಅಥವಾ ಅದು ನಮಗೆ ದೊರೆತಾಗ ಆಗುವ ಮಾನಸಿಕ ತಳಮಳ ಬಹುಶಃ ಹಣವೇ ನಮ್ಮ ಬದುಕು ಎಂದೇ ಭಾಸವಾಗುತ್ತದೆ.

    ರಾಜಕೀಯ, ವ್ಯಾಪಾರ, ಧಾರ್ಮಿಕ, ಆರೋಗ್ಯ, ಶಿಕ್ಷಣ, ಸಮಾಜ ಸೇವೆ, ಆಧ್ಯಾತ್ಮ ಯಾವುದೇ ಆಗಿರಲಿ ಬಹುತೇಕ ಎಲ್ಲವೂ ಹಣ ಕೇಂದ್ರಿತವೇ ಆಗಿರುತ್ತದೆ. ಅದರ ಪ್ರಮಾಣ ಹೆಚ್ಚು ಕಡಿಮೆ ಆಗಬಹುದಷ್ಟೇ.

    ದಿನದ ಎಚ್ಚರದ ಪ್ರತಿ ಕ್ಷಣವೂ ಹಣ ಬೇರೆ ಬೇರೆ ರೂಪದಲ್ಲಿ ಪ್ರಭಾವ ಬೀರುತ್ತಲೇ ಇರುತ್ತದೆ.

    ಕೂಲಿ ಕಾರ್ಮಿಕರು ಹಣವನ್ನು ನೋಡುತ್ತಿದ್ದ ದೃಶ್ಯಗಳು, ಹಣಕ್ಕಾಗಿ ಮಾಡುವ ಸುಫಾರಿ ಕೊಲೆಗಳು, ಹಣಕ್ಕಾಗಿ ಮಂತ್ರಿಗಳು, ಅತಿ ಗೌರವಾನ್ವಿತ ಅಧಿಕಾರಿಗಳು, ಸರ್ವಸಂಗ ಪರಿತ್ಯಾಗಿ ಧಾರ್ಮಿಕ ಮುಖಂಡರು, ಸಮಾಜ ಸೇವಕರು, ಹೋರಾಟಗಾರರು, ದರೋಡೆಕೋರರು ಎಲ್ಲರೂ ಹಣದ ಪ್ರಾಮುಖ್ಯತೆಯನ್ನು ಮತ್ತೆ ಮತ್ತೆ ದೃಢಪಡಿಸುತ್ತಾರೆ.

    ಆದರೆ ಒಂದಲ್ಲಾ ಒಂದು ದಿನ ಇದರಿಂದ ನಾವು ಹೊರಗೆ ಬರಲೇ ಬೇಕಿದೆ. ಇಲ್ಲದಿದ್ದರೆ ನಾಗರಿಕ ಸಮಾಜ ಮಾನವೀಯವಾಗಿ ಉಳಿಯದೆ ಕೇವಲ ಹಣದ ಗುಲಾಮಿತನದಲ್ಲಿ ಬದುಕು ‌ಶವವಾಗುವ ಸಮಾಜದಲ್ಲಿ ನಾವು ಇರಬೇಕಾಗುತ್ತದೆ.

    ಹಣ ನಮ್ಮನ್ನು ನಿಯಂತ್ರಿಸುವ ವ್ಯವಸ್ಥೆ ಬದಲಾಗಿ ಮತ್ತೆ ನಾವು ಹಣವನ್ನು ನಿಯಂತ್ರಿಸುವ ಕಾಲದ ನಿರೀಕ್ಷೆಯಲ್ಲಿ…….

    ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
    ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
    ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
    ಮನಸ್ಸುಗಳ ಅಂತರಂಗದ ಚಳವಳಿ,


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ತಾಳ್ಮೆ ಕಳೆದುಕೊಳ್ಳದೇ ಒರಟು ಸ್ವಭಾವದವರ ಜೊತೆಗೆ ವ್ಯವಹರಿಸುವುದು ಹೇಗೆ?: ಇಲ್ಲಿದೆ 7 ಟಿಪ್ಸ್

    January 11, 2026

    ದಾಖಲೆ ಬರೆದ ಯಶ್ ‘ಟಾಕ್ಸಿಕ್’ ಟೀಸರ್; ಹಸಿಬಿಸಿ ದೃಶ್ಯ ಕಂಡು ಪ್ರೇಕ್ಷಕ ಶಾಕ್!

    January 9, 2026

    ಉದ್ಧಟತನ ಕಲಿಸಿದ ಪಾಠ

    January 7, 2026

    Comments are closed.

    Our Picks

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025

    ದೆಹಲಿ ಕಾರು ಸ್ಫೋಟ ಪ್ರಕರಣ: ತುಮಕೂರಿನಲ್ಲೂ ವಿಚಾರಣೆ!

    November 14, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಲೇಖನ

    ತಾಳ್ಮೆ ಕಳೆದುಕೊಳ್ಳದೇ ಒರಟು ಸ್ವಭಾವದವರ ಜೊತೆಗೆ ವ್ಯವಹರಿಸುವುದು ಹೇಗೆ?: ಇಲ್ಲಿದೆ 7 ಟಿಪ್ಸ್

    January 11, 2026

    ನಮ್ಮ ಜೀವನದಲ್ಲಿ ನಾನಾ ರೀತಿಯ ವ್ಯಕ್ತಿಗಳು ಎದುರಾಗುತ್ತಾರೆ. ಕೆಲವರು ಸೌಮ್ಯ ಸ್ವಭಾವದವರಾಗಿದ್ದರೆ, ಇನ್ನು ಕೆಲವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುವಂತಿರುತ್ತಾರೆ. ಕಚೇರಿಯಲ್ಲಿ…

    ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಅಧ್ಯಕ್ಷರಿಗೆ ಸನ್ಮಾನ

    January 11, 2026

    ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

    January 11, 2026

    ಪಕ್ಷಕ್ಕೆ ಡ್ಯಾಮೇಜ್ ಆಗೋ ಕೆಲಸ ಯಾವತ್ತೂ ಮಾಡಿಲ್ಲ: ಶಾಸಕ ಎಸ್.ಆರ್.ಶ್ರೀನಿವಾಸ್

    January 11, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.