ಬೆಂಗಳೂರು: ಕರಿಯ ಸಿನಿಮಾ ರೀರಿಲೀಸ್ ಸಂದರ್ಭದಲ್ಲಿ ಕೆಲವು ಅಭಿಮಾನಿಗಳು ಪುಂಡಾಟಿಕೆ ಮೆರೆದ ಘಟನೆ ನಡೆದಿದ್ದು, ಪೊಲೀಸರು ವಾರ್ನಿಂಗ್ ನೀಡಿದರೂ ಕೇಳದೇ ದುರ್ವರ್ತನೆ ತೋರಿದ ಘಟನೆ ನಡೆದಿದೆ.
ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದ ಬಳಿ ಈ ಘಟನೆ ನಡೆದಿದೆ. ಉದ್ಧಟತನದ ವರ್ತನೆ ತೋರುತ್ತಿದ್ದವರಿಗೆ ಪೊಲೀಸರು ಮೈಕ್ ಹಿಡಿದು ವಾರ್ನಿಂಗ್ ನೀಡಿದರು.
ನಿಮ್ಮಂತಹ ಅಭಿಮಾನಿಗಳಿಂದ ದರ್ಶನ್ ಗೆ ಕೆಟ್ಟ ಹೆಸರು ಬರುತ್ತಿದೆ. ನಿಮ್ಮಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು ಎಂದು ಪೊಲೀಸರು ಬುದ್ಧಿ ಹೇಳಿದರೂ ಬಾಯಿಗೆ ಬಂದಂತೆ ನಿಂದಿಸುತ್ತಾ ಥೇಟರ್ ಬಾಗಿಲು ಹಾಕಿಕೊಂಡರು. ಈ ವೇಳೆ ಥಿಯೇಟರ್ ಬಾಗಿಲು ಓಪನ್ ಮಾಡಿ ಪೊಲೀಸರು ಮೂವರನ್ನು ವಶಕ್ಕೆ ಪಡೆದರು.
ಪೊಲೀಸರು ವಶಕ್ಕೆ ಪಡೆದ ಬಳಿಕ ಪುಂಡಾಟಿಕೆ ಮೆರೆದ ಅಭಿಮಾನಿ ತಪ್ಪಾಯ್ತು ಅಂತಾ ಕ್ಷಮೆ ಕೇಳಿದ್ದಾರೆ ಅಂತ ವರದಿಯಾಗಿದೆ. ಇನ್ನೂ ಅಭಿಮಾನಿಗಳ ಅತಿರೇಕದ ವರ್ತನೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಸನ್ನ ಥೇಟರ್ ನಲ್ಲಿ ರಾತ್ರಿ 10:30ರ ಪ್ರದರ್ಶನವನ್ನು ಪೊಲೀಸರು ಕ್ಯಾನ್ಸಲ್ ಮಾಡಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


