ತುರುವೇಕೆರೆ: ನವೋದಯ ವಿದ್ಯಾಲಯ 2025–26ನೇ ಸಾಲಿನ 6ನೇ ತರಗತಿ ಪರೀಕ್ಷೆಗೆ ಪ್ರವೇಶ ಬಯಸುವ ವಿದ್ಯಾರ್ಥಿ ಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಸೆ.16 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಆರ್.ಎಸ್. ಅಕ್ಷರ ಅಕಾಡಮಿ ಅಧ್ಯಕ್ಷರಾದ ನೆಮ್ಮದಿ ಗ್ರಾಮದ ಎ.ಎಸ್.ಮೂರ್ತಿ ತಿಳಿಸಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು ಜವಾಹರಲಾಲ್ ನವೋದಯ ವಿದ್ಯಾಲಯ ಭಾರತ ಸರ್ಕಾರದ ಒಂದು ಅತ್ಯುತ್ತಮ ಸಂಸ್ಥೆಯಾಗಿದೆ. 6ರಿಂದ 12ನೇ ತರಗತಿವರೆಗಿರುವ ಈ ಶಾಲೆಯಲ್ಲಿ ಉಚಿತ ಊಟ, ವಸತಿ ಸೌಕರ್ಯ, ಬಾಲಕ–ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳು, ಕ್ರೀಡೆ ಮತ್ತು ಎನ್.ಸಿ.ಸಿ., ಎನ್.ಎಮ್.ಎಸ್., ಸ್ಕೌಟ್ಸ್ ಮತ್ತು ಗೈಡ್ಸ್ ಸೇರಿದಂತೆ ಉತ್ತಮ ಶಿಕ್ಷಣಕ್ಕೆ ಉತ್ತೇಜನ ನೀಡುವಂತ ಅತ್ಯುತ್ತಮ ಶಾಲೆ ಇದಾಗಿದೆ. ಅಲ್ಲದೆ ಇಂತಹ ಶಾಲೆಗಳಲ್ಲಿ ಓದಿ ಹೊರಬಂದ ವಿದ್ಯಾರ್ಥಿಗಳಿಗೆ ಉತ್ತಮ ಸ್ಥಾನಮಾನಗಳು ದೊರೆತಿವೆ. ಆ ನಿಟ್ಟಿನಲ್ಲಿ ಹೆಚ್ಚು ಗ್ರಾಮೀಣ ಭಾಗದ 5ನೇ ತರಗತಿ ವಿಧ್ಯಾರ್ಥಿಗಳ ಪೋಷಕರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ ಎಂದರು.
ಅರ್ಜಿ ಸಲ್ಲಿಸುವವರು ನಿಮ್ಮ ಶಾಲಾ ಮುಖ್ಯೋಪಾಧ್ಯಾಯರ ಸಲಹೆ ಪಡೆದು ಸೆ.16ರೊಳಗೆ ಅರ್ಜಿ ಸಲ್ಲಿಸ ಬೇಕು. 2025ರ ಜ.18ಕ್ಕೆ ಪ್ರವೇಶ ಪರೀಕ್ಷೆಯಿದ್ದು, ನವೋದಯ ಶಿಕ್ಷಣಕ್ಕೆ ಬೆಂಗಳೂರಿನ ಖ್ಯಾತ ತಜ್ಞರಾದಂತ ನೀರೇಶ್ ಕುಲಕರ್ಣಿ ಅವರನ್ನು ವಿಶೇಷವಾಗಿ ತುರುವೇಕೆರೆಗೆ ಕರೆತಂದು ಅವರ ಮೂಲಕ ತಾಲ್ಲೂಕಿನ ಮಕ್ಕಳಿಗೆ ಕೋಚಿಂಗ್ ವ್ಯವಸ್ಥೆ ಕಲ್ಪಿಸುವ ದೃಷ್ಠಿಯಿಂದ ಆರ್.ಎಸ್. ಅಕ್ಷರ ಅಕಾಡಮಿ ಸಂಸ್ಥೆ ತುರುವೇಕೆರೆಯಲ್ಲಿ ಪ್ರಾರಂಬಗೊಂಡಿದೆ ಆ ಸಂಸ್ಥೆ ಮುಖಾಂತರ ಮಕ್ಕಳಿಗೆ ಕೋಚಿಂಗ್ ವ್ಯವಸ್ಥೆ ಮಾಡಲಾಗುವುದು. ನವೋದಯ ವಿದ್ಯಾಲಯ ಜಿಲ್ಲೆಗೊಂದರಂತೆ ಇದ್ದು 80ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಅದರಲ್ಲಿ ಶೇ.75ರಷ್ಟು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅವಕಾಶವಿದ್ದು ತಾಲ್ಲೂಕಿನ ಗ್ರಾಮೀಣ ಭಾಗದ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಭೀಮೋತ್ಸವ ಆಚರಣಾ ಸಮಿತಿ ಗೌರವಾಧ್ಯಕ್ಷ ಎಂ.ಎನ್.ಸುಬ್ರಮಣ್ಯ, ಮಾಯಸಂದ್ರ ಶಿಕ್ಷಕ ಚಂದ್ರಯ್ಯ ಹರಿದಾಸನಹಳ್ಳಿ, ನರಸಿಂಹಮೂರ್ತಿ ವಿಠಲದೇವರಹಳ್ಳಿ, ಕರವೇ ರಂಗಸ್ವಾಮಿ ಉಪಸ್ಥಿತರಿದ್ದರು.
ವರದಿ: ಸುರೇಶ್ ಬಾಬು ಎಂ. ತುರುವೇಕೆರೆ
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q