ತುಮಕೂರು:ಹಾಲಿನ ದರ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ ಮೂರು ಪೈಸೆ ಆದಾಯ ಬರಲ್ಲ. ಅದು ಕೇಂದ್ರ ಸರ್ಕಾರಕ್ಕೆ ಲಾಭ ಅಷ್ಟೇ, ಇನ್ಕಂ ಟ್ಯಾಕ್ಸ್ ಮೂಲಕ ಕೇಂದ್ರಕ್ಕೆ ಹೊಗುತ್ತೆ ಎಂದು ಸಹಕರ ಸಚಿವ ರಾಜಣ್ಣ ತಿಳಿಸಿದರು. ತುಮಕೂರಿನಲ್ಲಿ ನಡೆದ ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರಕ್ಕೆ ಬರಲ್ಲ. ಲಾಭ ರೈತರಿಗೆ, ಕೇಂದ್ರ ಸರ್ಕಾರಕ್ಕೆ ಸಿಗುತ್ತೆ. ಒಂದು ಬಾಟಲು ನೀರಿಗೆ ಕೊಡುವ ದರವನ್ನು ಹಾಲಿಗೆ ಕೊಡಿ ಅಂದ್ರೆ ವಿರೋಧ ಬರ್ತಿದೆ, ಇದು ಬಹಳ ವಿಪರ್ಯಾಸ ಎಂದರು.
ಹಾಲಿನ ದರ ರೈತರ ಖಾತೆಗೆ ಹೋಗುತ್ತದೆ. ಸಂಸ್ಥೆ, ಸರ್ಕಾರಕ್ಕೆ ಲಾಭವಿಲ್ಲ.ರೈತರಿಗೆ ಹಣ ಕೊಡ್ತೀವಿ ಅನ್ನೊದನ್ನ ಎಲ್ಲಾರು ಬೆಂಬಲಿಸಬೇಕು ಎಂದರು.ಯಶಸ್ವಿ ಯೋಜನೆ ಎಸ್.ಎಂ.ಕೃಷ್ಣ ಕಾಲದಲ್ಲಿ ಜಾರಿಗೆ ತರಲಾಯ್ತು.ನಂತರ ಮಧ್ಯದಲ್ಲಿ ನಿಲ್ಲಿಸಲಾಯ್ತು.ಯಡಿಯೂರಪ್ಪ ಮತ್ತೆ ಜಾರಿ ಮಾಡ್ತೀನಿ ಅಂತ ಹೇಳಿದ್ರು.ಆದ್ರೂ ಜಾರಿ ಆಗಿರಲಿಲ್ಲ ಎಂದರು.
ಈಗ ಸಿದ್ದರಾಮಯ್ಯಗೆ ಮನವೊಲಿಸಿ ಯಶಸ್ವಿ ಯೋಜನೆಯನ್ನು ಮತ್ತೆ ಪುನರ್ ಪ್ರತಿಷ್ಟಾಪನೆ ಮಾಡ್ತಿದ್ದೀವಿ. ರೈತರ ಅನುಕೂಲಕ್ಕಾಗಿ ಜಾರಿ ಮಾಡ್ತಿದ್ದೀವಿ ಎಂದರು.
ಇಡೀ ದೇಶದಲ್ಲಿ ನಮ್ಮಷ್ಟು ಕಡಿಮೆ ದರದಲ್ಲಿ ರೈತರಿಂದ ಹಾಲು ಸಂಗ್ರಹ ಮಾಡುವ ಯಾವುದೇ ರಾಜ್ಯವಿಲ್ಲ. ಹಾಗೇ ಕಡಿಮೆ ದರದಲ್ಲಿ ಗ್ರಾಹಕರಿಗೆ ಹಾಲು ಕೊಡ್ತಿರೋ ರಾಜ್ಯ ಬೇರೆಯಿಲ್ಲ ಎಂದರು.
31ರೂಪಾಯಿಗೆ ಖರೀದಿ ಮಾಡ್ತೀವಿ. 42ರೂಪಾಯಿಗೆ ಮಾರಾಟ ಮಾಡ್ತೀವಿ. ಮದ್ಯ ಬರುವ ಖರ್ಚು ಕಡಿಮೆ ಮಾಡಿಕೊಳ್ಳಬೇಕು ಎಂಬ ಉದ್ದೇಶವಿದೆ ಎಂದರು.
ಇಡಿ ದೇಶದಲ್ಲಿ ಇಷ್ಟು ಕಡಿಮೆ ಪ್ರಮಾಣದಲ್ಲಿ ಹಾಲು ಮಾರಾಟ ಮಾಡುವ ವ್ಯವಸ್ಥೆಯಿಲ್ಲ ಎಂದರು.
ಕೆಲವು ರಾಜ್ಯಗಳಲ್ಲಿ 58-60ರೂಪಾಯಿಗೆ ಮಾರಾಟ ಮಾಡ್ತಾರೆ. ಎಲ್ಲಾ ಅಂಕಿ ಅಂಶಗಳನ್ನ ಮುಖ್ಯಮಂತ್ರಿ ಕೊಟ್ಟಿದ್ದೇನೆ.ನಮ್ಮ ರಾಜ್ಯದಲ್ಲೂ ಖರೀದಿ ಮಾಡುವುದು ಮಾರಾಟ ಮಾಡುವುದು ಎಲ್ಲಾವೂ ಒಂದೇ ದರ ಮಾಡೋಣ ಅಂತ ಹೇಳಿದೆ ಎಂದರು.
ಆಗ 10 ರೂಪಾಯಿ ವ್ಯತ್ಯಾಸ ಬಂದಿತ್ತು. ಅಷ್ಟೊಂದು ಮಾಡಿದ್ರೆ ಜನ ಸುಮ್ಮನೆ ಇರ್ತಾರಾ ಅಂದ್ರು.
ಪಟ್ಟಣ ಜನರ ಯೋಗ ಕ್ಷೇಮ ನೋಡಲು ಇದ್ದಿರೋ. ಹಳ್ಳಿಗಾಡಿನ ಜನತ ಯೋಗ ಕ್ಷೇಮ ನೋಡಲು ಇದ್ದಿರೋ ಅಂತ ಹೇಳಿದೆ ಎಂದರು.
ರೈತರಿಂದ ಖರೀದಿ ಮಾಡುವ ಹಾಲಿನ ದರ ಹೆಚ್ಚಿಸಬೇಕು.
ಹೆಚ್ಚಳ ಎಷ್ಟು ಮಾಡ್ತಿವೊ ಅಷ್ಟನ್ನು ರೈತರಿಗೆ ಕೊಡ್ಬೇಕು.ಆಡಳಿತ ಮಂಡಳಿ ಲಾಸ್ ನಲ್ಲಿ ಇದ್ದೀವಿ ಅಂತ ಆ ಹಣ ಬಳಸಬಾರದು ಎಂದರು.
ಹಾಲಿಗೆ 5 ರೂಪಾಯಿ ಹೆಚ್ಚಳ ಮಾಡಿದ್ರು, 3,10 ರೂಪಾಯಿ ಮಾಡಿದ್ರು ಅದನ್ನ ರೈತರಿಗೆ ಕೊಡ್ಬೇಕು.ಸಭೆ ಕರೆದು ತೀರ್ಮಾನ ಮಾಡುವುದಾಗಿ ಹೇಳಿದ್ದಾರೆ ಎಂದರು.
ಹಳ್ಳಿಯ ಹಣಕಾಸು ವಹಿವಾಟು ಹೆಚ್ಚಿದಾಗ ಮಾತ್ರ ರಾಷ್ಟ್ರದ ಜಿಡಿಪಿ ಹೆಚ್ಚಲು ಸಾಧ್ಯ. ಸಾಫ್ಟವೇರ್ ಸೆಕ್ಟರ್ ನಿಂದ ಹಳ್ಳಿಗಾಡಿನ ಅಭಿವೃದ್ದಿ ಆಗಲ್ಲ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296


