ಯಾದಗಿರಿ: ಸ್ನೇಹಿತರೊಂದಿಗೆ ಸೆಕ್ಸ್ ಗೆ ಒಪ್ಪದ ಪತ್ನಿಯನ್ನು ಪತಿಯೊಬ್ಬ ಬರ್ಬರವಾಗಿ ಹತ್ಯೆ ನಡೆಸಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಹುಣಸಗಿಯಲ್ಲಿ ನಡೆದಿದೆ.
ಗಂಗನಾಳ ಗ್ರಾಮದ ಮಹಿಳೆ ಕಳೆದ ಜುಲೈ 25 ರಂದು ಗಂಡನ ಜೊತೆ ಮಲಗಿದ್ದ ವೇಳೆ ಮೃತಪಟ್ಟಿದ್ದರು. ಮೃತ ಮಹಿಳೆಯ ಸಹೋದರ ತಂಗಿಯ ಸಾವಿಗೆ ಅನುಮಾನ ವ್ಯಕ್ತಪಡಿಸಿ ಗೋಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಂಗಿಯ ಮೊಬೈಲ್ ಗಮನಿಸಿದಾಗ ಕಾಲ್ ರೆಕಾರ್ಡಿಂಗ್ ನಲ್ಲಿ ಭೀಮಣ್ಣ ಭಾಗಲೇರ ಪತ್ನಿಗೆ ಕಿರುಕುಳ ನೀಡಿರುವುದು ಪತ್ತೆಯಾಗಿದೆ.
ನೀನು ಬೇರೆಯವರ ಜೊತೆಗೆ ಸೆಕ್ಸ್ ಮಾಡಬೇಕು ಇದರಿಂದ ನನಗೆ ಖುಷಿಯಾಗುತ್ತದೆ, ಮಕ್ಕಳು ಆಗುತ್ತವೆ, ದುಡ್ಡು ಬರುತ್ತದೆ, ಸಾಲ ತೀರುತ್ತದೆ. ನೀನು ಇದಕ್ಕೆ ಒಪ್ಪದಿದ್ದರೆ ಕೊಲೆ ಮಾಡುವುದಾಗಿ ಭೀಮಣ್ಣ ಭಾಗಲೇರ ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಸದ್ಯ ಆರೋಪಿ ಆರೋಪಿ ಭೀಮಣ್ಣ ಭಾಗಲೇರನನ್ನು ಪೊಲೀಸರು ಬಂಧಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


