ಬೀಜಿಂಗ್: ಸೂಪರ್ ಮಾರ್ಕೆಟ್ ನಿಂದ ತಂದ ಮೂನ್ ಕೇಕ್ ನಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿರುವ ಘಟನೆ ಚೀನಾದ ಜಿಯಾಂಗ್‌ಸುವಿನ ಚಾಂಗ್ ಝೌನನಲ್ಲಿ ನಡೆದಿದೆ.
ಇಲ್ಲಿನ ಸೂಪರ್ ಮಾರ್ಕೆಟ್ ಸ್ಯಾಮ್ಸ್ ಕ್ಲಬ್ ನಿಂದ ಕುಟುಂಬವೊಂದು ನಾನ್ ವೆಜ್ ಮೂನ್ಕೇಕ್ ಖರೀದಿ ಮಾಡಿತ್ತು. ಕೇಕ್ ಮನೆಗೆ ತೆಗೆದುಕೊಂಡು ಕುಟುಂಬದ ಸದಸ್ಯರು ಕುಳಿತುಕೊಂಡು ತಿನ್ನುವ ವೇಳೆ ಕೇಕ್ ನಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಕುಟುಂಬಸ್ಥರು, ನಾನ್ ವೆಜ್ ತುಂಬಿರುವ ಮೂನ್ ಕೇಕ್ ನಲ್ಲಿ ಮನುಷ್ಯನ ಹಲ್ಲು ಪತ್ತೆಯಾಗಿದೆ. ಇದು ನಮ್ಮ ಕುಟುಂಬದ ಸದಸ್ಯರದ್ದಲ್ಲ ಎಂದು ಬರೆದುಕೊಂಡಿದೆ.
ಸದ್ಯ ಘಟನೆಯ ಬಗ್ಗೆ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ಈ ಘಟನೆಯ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತಮ್ಮದೇ ಆದ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಹೀಗೆ ಕಾಮೆಂಟ್ ಮಾಡಿದ್ದಾರೆ: ಮೂನ್ ಕೇಕ್ ನಲ್ಲಿ ನಾನ್ ವೆಜ್ ಮಾತ್ರ ಇರುತ್ತದೆ ಎಂದು ಭಾವಿಸಿದ್ರೆ ಕ್ಯಾಲ್ಸಿಯಂ ಕೂಡ ಇರುತ್ತದೆ ಎಂದು ಈಗ ತಿಳಿಯಿತು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q