ಬೀದರ್: ಮೀಸಲಾತಿ ರದ್ದುಪಡಿಸುವ ಹೇಳಿಕೆ ನೀಡಿರುವ ರಾಹುಲ್ ಗಾಂಧಿಯನ್ನು ಉಚ್ಛಾಟಿಸುವ ಹೇಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಲಿ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸವಾಲು ಹಾಕಿದ್ದಾರೆ.
ರಾಹುಲ್ ಗಾಂಧಿಯನ್ನು ಉಚ್ಛಾಟಿಸುವ ಹೇಳಿಕೆ ನೀಡುವ ಮೂಲಕ ತಾವು ಗಾಂಧಿ ಕುಟುಂಬದ ವಾಚ್ ಮ್ಯಾನ್ ಅಲ್ಲ ಎನ್ನುವುದನ್ನು ಸಾಬೀತು ಪಡಿಸಲಿ ಎಂದು ಅವರು ಸವಾಲೆಸೆದಿದ್ದಾರೆ.
ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ನಗರದಲ್ಲಿ ರವಿವಾರ ಜಿಲ್ಲಾ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮೀಸಲಾತಿಯ ಸೌಲಭ್ಯದಲ್ಲಿ ಅಧಿಕಾರವನ್ನು ಅನುಭವಿಸುತ್ತ ಬಂದಿರುವ ಖರ್ಗೆ, ಈಗ ಎಐಸಿಸಿ ಅಧ್ಯಕ್ಷರೂ ಆಗಿದ್ದಾರೆ. ಒಂದು ಗಾಂಧಿ ಪರಿವಾರದ ಮರ್ಜಿಯಲ್ಲಿ ನೀವು ಇಲ್ಲ ಎನ್ನುವುದಾದರೇ, ರಾಹುಲ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಲಿ ಎಂದು ಆಗ್ರಹಿಸಿದರು.
ದೇಶದಲ್ಲಿ ಮೀಸಲಾತಿ ಸೌಲಭ್ಯ ತಂದದ್ದು ರಾಹುಲ್ ಅವರ ತಂದೆ ಅಥವಾ ಮುತ್ತಜ್ಜನಲ್ಲ. ನಮ್ಮ ತಂದೆ ಡಾ.ಅಂಬೇಡ್ಕರ ಅವರ ಹೋರಾಟದ ಪ್ರತಿಫಲದಿಂದ ಇದು ಸಿಕ್ಕಿರುವುದು. ದಲಿತ, ಹಿಂದುಳಿದವರ ವಿರೋಧಿ ಗಾಂಧಿ ಕುಟುಂಬದ ಮತ್ತು ಕಾಂಗ್ರೆಸ್‌ನ ಪರಂಪರೆಯಾಗಿದೆ. ಮೀಸಲಾತಿಯಿಂದ ದೇಶದ ಉದ್ಧಾರ ಆಗುವುದಿಲ್ಲ ಎಂದು ನೆಹರು ಹೇಳಿದ್ದರು. ಮುಂದೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, ರಾಜೀಲ್ ಗಾಂಧಿ ಸಹ ಇದನ್ನೇ ಮುಂದುವರೆಸಿಕೊಂಡು ಬಂದಿದ್ದರು. ಈಗ ರಾಹುಲ್ ಈ ರೀತಿ ಹೇಳುವುದರಲ್ಲಿ ಹೊಸದೇನು ಇಲ್ಲ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


