ಚಿಕ್ಕಬಳ್ಳಾಪುರ: ಪತ್ನಿ ಕಪ್ಪಾಗಿದ್ದಾಳೆ ಎಂದು ನಿಂದಿಸಿ ವರದಕ್ಷಿಣೆ ಕಿರುಕುಳ ನೀಡಿದ್ದರಿಂದ ಮನನೊಂದ ಪತ್ನಿ ಸಾವಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಗಾಂಧಿನಗರದಲ್ಲಿ ನಡೆದಿದೆ.
ಗಾಂಧಿನಗರದ ನಿವಾಸಿ ಟೈಲರ್ ವೃತ್ತಿಯ ಕೆ.ಬಿ.ದೇವರಾಜು ಅವರ ಏಕೈಕ ಪುತ್ರಿ ಬಿಂದುಶ್ರೀ (22) ಸಾವಿಗೆ ಶರಣಾದ ಯುವತಿಯಾಗಿದ್ದಾಳೆ. ಈಕೆಯನ್ನ ಆವಲಹಳ್ಳಿ ಸಮೀಪದ ಹಿರಂಡಹಳ್ಳಿ ಗ್ರಾಮದ ಮುನಿರಾಜು ಎಂಬವರ ಮಗ ಎಚ್.ಎಂ.ರಾಘವೇಂದ್ರ ಎಂಬಾತನಿಗೆ ಫೆಬ್ರವರಿ 2024ರಲ್ಲಿ ವಿವಾಹ ಮಾಡಿಕೊಡಲಾಗಿತ್ತು.
ವಿವಾಹದ ನಂತರ ವರದಕ್ಷಿಣೆ ನೀಡುವಂತೆ ಪ್ರಾಣ ತಿನ್ನಲು ಪತಿಯ ಮನೆಯವರು ಆರಂಭಿಸಿದ್ದರು. ತವರು ಮನೆಯಿಂದ 20 ಲಕ್ಷ ರೂಪಾಯಿ ಹಣ ತರುವಂತೆ ದೈಹಿಕ ಮಾನಸಿಕ ಹಿಂಸೆ ನೀಡಲಾಗಿತ್ತು ಎನ್ನಲಾಗಿದೆ.
ನಿರಂತರ ಕಿರುಕುಳ ತಾಳಲಾರದೇ ಬಿಂದುಶ್ರೀ ತನ್ನ ಜೀವನವನ್ನೇ ಕೊನೆಗಾಣಿಸಿದ್ದಾಳೆ. ಇತ್ತ ಪುತ್ರಿಯ ಸಾವಿನ ಸುದ್ದಿ ಸಹಿಸಲಾರದೇ ಬಿಂದು ಶ್ರೀಯ ತಂದೆ ಕೆ.ವಿ.ದೇವರಾಜ್ ಕೂಡ ಸಾವಿಗೆ ಶರಣಾಗಲು ಯತ್ನಿಸಿದ್ದಾರೆ. ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


