ಸುದೀಪ್ ಅವರು ಬಾಲ್ಯದಿಂದಲೂ, ತಾನೊಬ್ಬ ಸಿನಿಮಾ ಹೀರೋ ಆಗಬೇಕು ಎಂದು ಕನಸು ಕಟ್ಟಿಕೊಂಡು ಅದಕ್ಕಾಗಿ ಮುಂಬೈ ಗೆ ಹೋಗಿ ತರಬೇತಿ ಪಡೆದುಕೊಂಡು ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು. ಆರಂಭದ ದಿನಗಳಲ್ಲಿ ಇವರನ್ನು ಆರಡಿ ಹೈಟು, ಐರನ್ ಲೆಗ್, ಎಮ್ಮೆ ತರಹ ಧ್ವನಿ ಇದೆ ಎಂದೆಲ್ಲಾ ಅವಮಾನ ಮಾಡಿ ಹೀಯಾಳಿಸಿದರು. ಆದರೆ ಇಂದು ಅದೇ ಬೇಸ್ ವಾಯ್ಸ್ ಗಾಗಿ, ಆರಡಿ ಹೀರೋಗಾಗಿ ಕನ್ನಡ ಸಿನಿಮಾ ರಂಗ ಮಾತ್ರವಲ್ಲದೆ ಭಾರತದ ಎಲ್ಲಾ ಚಿತ್ರರಂಗದವರು ಕೂಡ ಕರೆದು ಮಣೆ ಹಾಕುತ್ತಿದ್ದಾರೆ.
ಸುದೀಪ್ ಅವರ ಅದೃಷ್ಟ ಬದಲಾಯಿಸಿದ ಚಿತ್ರ ಎಂದರೆ ಅದು ಹುಚ್ಚ ಸಿನಿಮಾ. ಹುಚ್ಚ ಸಿನಿಮಾವನ್ನು ತೆರೆ ಮೇಲೆ ತರುವ ಮುನ್ನ ವಿಷ್ಣುವರ್ಧನ್ ಅವರಿಗೆ ತೋರಿಸಬೇಕು ಎನ್ನುವುದು ಸುದೀಪ್ ಆಸೆ ಆಗಿತ್ತು.
ಯಾಕೆಂದರೆ ವಿಷ್ಣುವರ್ಧನ್ ಅವರು ಸುದೀಪ್ ಅವರ ಫೇವರಿಟ್ ಹೀರೋ ಮಾತ್ರ ಅಲ್ಲದೆ ಅವರ ಅನೇಕ ವಿಷಯಗಳನ್ನು ತಮ್ಮ ಜೀವನದಲ್ಲಿ ಅವರು ಆಗಿನಿಂದಲೇ ಅಳವಡಿಸಿಕೊಂಡಿದ್ದರು. ವಿಷ್ಣುವರ್ಧನ್ ಅವರ ಅಭಿಪ್ರಾಯ ಸುದೀಪ್ ಅವರಿಗೆ ಬಹಳ ಮುಖ್ಯವಾಗಿದ್ದ ಕಾರಣ ಹುಚ್ಚ ಸಿನಿಮಾವನ್ನು ವಿಷ್ಣುವರ್ಧನ್ ಅವರಿಗೆ ತೋರಿಸಿದರು.
ಆ ಸಿನಿಮಾ ನೋಡಿದ ತಕ್ಷಣವೇ ವಿಷ್ಣುವರ್ಧನ್ ಸುದೀಪ್ ಅವರನ್ನು ನೋಡಿ ಇಷ್ಟು ದಿನ ಎಲ್ಲಿದ್ದೀರಿ ಸುದೀಪ್ ಎಷ್ಟು ಚೆನ್ನಾಗಿ ನಟನೆ ಮಾಡಿದ್ದೀರಾ. ಈ ಸಿನಿಮಾದಿಂದ ಖಂಡಿತ ನಿಮ್ಮ ಅದೃಷ್ಟ ಬದಲಾಗುತ್ತದೆ ನೋಡಿ ಎಂದು ಭವಿಷ್ಯ ಹೇಳಿದ್ದಾರಂತೆ. ಅದೇ ರೀತಿ ಸುದೀಪ್ ಅವರ ಅದೃಷ್ಟ ಬದಲಾಯಿಸಿದ ಚಿತ್ರ ಹುಚ್ಚ. ಹುಚ್ಚ ಸಿನಿಮಾದ ಬಳಿಕ ಸುದೀಪ್ ಅವರು ಹಿಂತಿರುಗಿ ನೋಡಿದ್ದೇ ಇಲ್ಲ. ಇಂದು ಬಹು ಭಾಷೆಗಳ ಬೇಡಿಕೆ ನಟನಾಗಿ ನ್ಯಾಷನಲ್ ಸ್ಟಾರ್ ಆಗಿ ಸುದೀಪ್ ಅವರು ಬೆಳೆದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


