ಬೆಂಗಳೂರು: ಮೀಟೂ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರ ಸುರಕ್ಷತೆ ವಿಚಾರವಾಗಿ ಮಾತನಾಡಿರುವ ನಟ ಉಪೇಂದ್ರ, ಕೇವಲ ಸಿನಿಮಾ ರಂಗ ಮಾತ್ರವಲ್ಲ, ಎಲ್ಲ ಕ್ಷೇತ್ರಗಳಲ್ಲೂ ಶೋಷಣೆ ನಡೆಯುವುದು ಸಹಜ, ಎಲ್ಲರೂ ಅದನ್ನು ಅನುಭವಿಸಿರುತ್ತಾರೆ ಎಂದು ಹೇಳಿದ್ದಾರೆ.
ನನಗೆ ಇಷ್ಟು ವರ್ಷಗಳಲ್ಲಿ ಈ ರೀತಿ ನಡೆದಿದ್ದು ಗೊತ್ತಿಲ್ಲ, ಬಹುಶಃ ನಾನು ಹುಡುಗಿಯಾಗಿದ್ದರೆ ಗೊತ್ತಾಗುತ್ತಿತ್ತೇನೋ ಎಂದಿದ್ದಾರೆ.
ಗಂಡಸರ ಮೇಲೂ ಶೋಷಣೆ ಆಗಿವೆ, ಎಲ್ಲರಿಗೂ ಸಣ್ಣ ಪುಟ್ಟ ಆಗಿರುತ್ತದೆ ಎಂದು ಉಪೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾವು ಎಲ್ಲೋ ಒಂದು ಕಡೆ ಸ್ಕ್ರಿಪ್ಟ್ ತೆಗೆದುಕೊಂಡು ಹೋಗಿರುತ್ತೇವೆ. ಅದು ಇನ್ನೆಲ್ಲೋ ಸಿನಿಮಾ ಆಗಿಬಿಡುತ್ತೆ. ಕೆಲ ಸಿನಿಮಾಗಳನ್ನು ಮಾರಿಕೊಂಡಿರುತ್ತಾರೆ. ಅದರ ಹಣವೂ ನಮಗೆ ಸಿಗಲ್ಲ. ಆಗ ಕಾಪಿ ರೈಟ್, ಹೋರಾಟ ಮಾಡಲು ಆಗಲ್ಲ. ಕೇವಲ ಸಿನಿಮಾ ಅಷ್ಟೇ ಅಲ್ಲ ಎಲ್ಲ ಉದ್ಯಮದಲ್ಲೂ ಶೋಷಣೆ ಇದೆ. ಪ್ರಸ್ತುತ ಇದಕ್ಕಾಗಿ ಒಂದು ವೇದಿಕೆ ಸಿದ್ಧವಾಗುತ್ತಿರುವುದು ಉತ್ತಮ ಸಂಗತಿ. ಇದರಿಂದ ಮುಕ್ತವಾಗಿ ಧ್ವನಿಯೆತ್ತಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q


