ತುಮಕೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಒಂಟಿ ಪ್ರಸರಣ ಮಾರ್ಗದಿಂದ ಸುಮಾರು 8.60 ಕಿಮೀ ಉದ್ದದ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಸೆಪ್ಟೆಂಬರ್ 18ರಂದು ಅಥವಾ ತದನಂತರ ವಿದ್ಯುದ್ದೀಕರಣ ಗೊಳಿಸಲಿದೆ.
ಈ ಪ್ರಸರಣ ಮಾರ್ಗವು ಜಿಲ್ಲೆಯ ತಿಪಟೂರು ತಾಲ್ಲೂಕು ಕಿಬ್ಬನಹಳ್ಳಿ ಹೋಬಳಿಯ ಕರಡಾಳು, ಕೊಟಗೇಹಳ್ಳಿ, ನೊಣವಿನಕೆರೆ ಹೋಬಳಿಯ ಹಾರೋಘಟ್ಟ, ಕುರುಬರ ಮಲ್ಲೇನಹಳ್ಳಿ; ತುರುವೇಕೆರೆ ತಾಲ್ಲೂಕು, ಕಸಬ ಹೋಬಳಿಯ ಸೀಗೆಹಳ್ಳಿ, ಕೋಲಘಟ್ಟ, ಕೋಲಘಟ್ಟಕಾವಲ್ ಗ್ರಾಮಗಳ ಸರಹದ್ದಿನಲ್ಲಿ ಹಾದು ಹೋಗಲಿದ್ದು, ಸಾರ್ವಜನಿಕರು ಸದರಿ ಗ್ರಾಮಗಳಲ್ಲಿ ಗೋಪುರಗಳನ್ನು ಹತ್ತುವುದಾಗಲೀ, ಲೋಹದ ತಂತಿ, ಹಸಿರು ಬಳ್ಳಿ, ಕೊಂಬೆ ಇತ್ಯಾದಿಗಳನ್ನು ವಿದ್ಯುತ್ ಪ್ರವಹಿಸುವ ತಂತಿಗಳಿಗೆ ಎಸೆಯುವುದಾಗಲೀ ಅಥವಾ ದನಕರುಗಳನ್ನು ಗೋಪುರಗಳಿಗೆ ಕಟ್ಟುವುದಾಗಲಿ ಮಾಡಬಾರದಾಗಿ ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಇಂಜಿನಿಯರ್ ಸೂಚನೆ ನೀಡಿದ್ದಾರೆ.
ಸದರಿ ದಿನಾಂಕದಂದು ಅಥವಾ ತದನಂತರವೂ ಕೂಡ ಯಾರಾದರೂ ಇಂತಹ ಕೃತ್ಯಗಳನ್ನು ಎಸಗಿದಲ್ಲಿ ಉಂಟಾಗುವ ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಯಾವುದೇ ರೀತಿಯಲ್ಲೂ ಜವಾಬ್ದಾರಿಯಾಗುವುದಿಲ್ಲವೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:


