ಬೆಂಗಳೂರು: ದೆಹಲಿಯ ಶ್ರದ್ಧಾ ವಾಕರ್ ಮಾದರಿಯಲ್ಲೇ ಬೆಂಗಳೂರಿನ ವೈಯಾಲಿಕಾವಲ್ ನ ಮುನೇಶ್ವರ ಬ್ಲಾಕ್ ನಾಲ್ಕನೆ ಕ್ರಾಸ್ನಲ್ಲಿ ಬಾಡಿಗೆ ಮನೆಯೊಂದರಲ್ಲಿ ಯುವತಿಯೊಬ್ಬಳ ಬರ್ಬರ ಹತ್ಯೆ ನಡೆದಿದೆ.
ಮಹಾಲಕ್ಷ್ಮಿ (29) ಹತ್ಯೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಕಳೆದ 3 ತಿಂಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಾಲಕ್ಷ್ಮಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಕತ್ತರಿಸಿ 30ಕ್ಕೂ ಹೆಚ್ಚು ತುಂಡು ಮಾಡಿ ಫ್ರೀಡ್ಜ್ ನಲ್ಲಿಟ್ಟಿರುವ ದೃಶ್ಯ ಕಂಡು ಬಂದಿದೆ.
ಮೃತ ಮಹಾಲಕ್ಷ್ಮೀಗೆ ಮದುವೆಯಾಗಿತ್ತು. 4 ವರ್ಷದ ಒಂದು ಮಗು ಕೂಡ ಇದೆ. ಪತಿಯಿಂದ ಬೇರ್ಪಟ್ಟ ಬಳಿಕ ಕಳೆದ ಮೂರು ತಿಂಗಳ ಹಿಂದಷ್ಟೆ ಈಕೆ ಈ ಬಾಡಿಗೆ ಮನೆಗೆ ಬಂದಿದ್ದಳು ಎಂದು ತಿಳಿದು ಬಂದಿದೆ.
ಮಹಾಲಕ್ಷ್ಮಿಯನ್ನ, ಯುವಕನೊಬ್ಬ ಪಿಕಪ್ ಮತ್ತು ಡ್ರಾಪ್ ಮಾಡುತ್ತಿದ್ದನಂತೆ ಈತನ ಮೇಲೆಯೇ ಇದೀಗ ಅನುಮಾನ ಸೃಷ್ಟಿಯಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q