ಕೊಪ್ಪಳ: ಇನ್ನೂ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರ ನಡೆಸುತ್ತದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದನಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಕೆಲಸ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಆದರೆ ಇನ್ನೂ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರ ನಡೆಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತುಂಗಭದ್ರಾ ಡ್ಯಾಂನ 19 ನೇ ಗೇಟ್ ಮುರಿದು ಬಿದ್ದಾಗ ಇಡೀ ಭಾರತ ದೇಶ ಕರ್ನಾಟಕದವರು ಏನು ಮಾಡುತ್ತಾರೆ ಎಂದು ಎದುರು ನೋಡುತ್ತಿದ್ದರು, ಆದರೆ ಹಗಲು ರಾತ್ರಿ ಕೆಲಸ ಮಾಡಿ ಹೊಸ ಗೇಟ್ ಅಳವಡಿಸುವ ಮೂಲಕ ನೀರು ನಿಲ್ಲಿಸಿದ್ದೇವೆ ಎಂದು ಇದೇ ವೇಳೆ ಅವರು ಹೇಳಿದರು.
ತುಂಗಭದ್ರಾ ಡ್ಯಾಂನಲ್ಲಿ ನೀರು ಕಡಿಮೆ ಆದ ಮೇಲೆ ಎಲ್ಲ ಗೇಟ್ಗಳನ್ನು ಬದಲಾವಣೆ ಮಾಡುವ ಮೂಲಕ ರೈತರನ್ನು ಉಳಿಸುವ ಕೆಲಸ ಮಾಡುತ್ತೇವೆ. ತುಂಗಭದ್ರಾ ಡ್ಯಾಂಗೆ ಪರ್ಯಾಯವಾಗಿ ನಿರ್ಮಿಸಲು ನಿಶ್ಚಯಿಸಿರುವ ನವಲಿ ಜಲಾಶಯಕ್ಕೆ 13 ಸಾವಿರ ಎಕರೆ ಭೂಮಿ ಬೇಕಿದ್ದು, ಆದಕ್ಕಾಗಿ ಡಿಪಿಎಆರ್ ಮಾಡುತ್ತಿದ್ದೇವೆ. ಶೀಘ್ರವೇ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತೆವೆ ಎಂದರು.
ತುಂಗಭದ್ರಾ ಡ್ಯಾಂನಿಂದ ರಾಜ್ಯಕ್ಕೆ 230 ಟಿಎಂಸಿ ನೀರು ಬಳಕೆಗೆ ಅವಕಾಶ ಇದ್ದರೂ, 33 ಟಿಎಂಸಿ ನೀರು ಉಳಿಸಿಕೊಳ್ಳಲು ಆಗುತ್ತಿಲ್ಲ. 19 ನೇ ಗೇಟ್ ಮುರಿದಾಗ ವಿರೋಧ ಪಕ್ಷಗಳು ಟೀಕೆ ಮಾಡಿದರು, ಆದರೆ ನಾವು ಮಾಡಿದ ಸಂಕಲ್ಪ, ಅಧಿಕಾರಿಗಳು ಮಾಡಿದ ಕೆಲಸದಿಂದ ಟೀಕೆಗಳು ಸತ್ತು ಹೋಗಿದ್ದು, ಇಂತಹ ಪವಿತ್ರವಾದ ಕೆಲಸವನ್ನು ನಾವು ಮಾಡಿದ್ದೇವೆ ಎಂದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q