nammatumakuru

    Subscribe to Updates

    Get the latest creative news from FooBar about art, design and business.

    What's Hot

    ನವರಾತ್ರಿಯಲ್ಲಿ ಗರ್ಬಾ ನೃತ್ಯವನ್ನೇಕೆ ಮಾಡುತ್ತಾರೆ? ಇದರ ವಿಶೇಷ ಅರ್ಥ ಇಲ್ಲಿದೆ!

    October 15, 2026

    ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

    October 15, 2026

    ನವರಾತ್ರಿಯ ನವದುರ್ಗೆಯರ ಆರಾಧನೆ; ಪ್ರತಿದಿನದ ದೇವಿಯ ವಿಶೇಷತೆ ಏನು?

    October 15, 2026
    Facebook Twitter Instagram
    ಟ್ರೆಂಡಿಂಗ್
    • ನವರಾತ್ರಿಯಲ್ಲಿ ಗರ್ಬಾ ನೃತ್ಯವನ್ನೇಕೆ ಮಾಡುತ್ತಾರೆ? ಇದರ ವಿಶೇಷ ಅರ್ಥ ಇಲ್ಲಿದೆ!
    • ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ
    • ನವರಾತ್ರಿಯ ನವದುರ್ಗೆಯರ ಆರಾಧನೆ; ಪ್ರತಿದಿನದ ದೇವಿಯ ವಿಶೇಷತೆ ಏನು?
    • ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್
    • ಡೆಂಗೀ ಹಾಗೂ ಚಿಕೂನ್ ಗುನ್ಯ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಈ ಮಾಹಿತಿ ತಪ್ಪದೇ ಓದಿ!
    • ರುಡ್ ಸೆಟ್ ಸಂಸ್ಥೆ : ಫಾಸ್ಟ್ ಫುಡ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
    • ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು: ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಕುಟುಂಬ
    • ಅತಿಥಿ ಶಿಕ್ಷಕರ ನೇಮಕ: ಅರ್ಜಿ ಆಹ್ವಾನ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » “ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ತರಬೇತಿಗಾಗಿ ಅರ್ಜಿ ಆಹ್ವಾನ”
    ರಾಜ್ಯ ಸುದ್ದಿ September 22, 2024

    “ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಗೆ ತರಬೇತಿಗಾಗಿ ಅರ್ಜಿ ಆಹ್ವಾನ”

    By adminSeptember 22, 2024No Comments2 Mins Read
    appliction

    ಬೆಂಗಳೂರು ಗ್ರಾಮಾಂತರ: ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳ ವ್ಯಾಪ್ತಿಗೆ ಒಳಪಡುವ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಡಳಿತ ನ್ಯಾಯಾಧೀಕರಣ ಯೋಜನೆಯಡಿ ಎರಡನೇ ಹಂತದಲ್ಲಿ ತರಬೇತಿ ನೀಡುವ ಸಲುವಾಗಿ ಪರಿಶಿಷ್ಟ ಜಾತಿಯ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

    ಅರ್ಹ ಅಭ್ಯರ್ಥಿಗಳು, ಸಮಾಜ ಕಲ್ಯಾಣ ಇಲಾಖೆಯ ವೆಬ್‌ ಸೈಟ್ (www.sw.kar.nic.in) ನಲ್ಲಿ ಆನ್‌ ಲೈನ್ ಮೂಲಕ ಅರ್ಜಿ ಸಲ್ಲಿಸಲು 2024 ರ ಸೆಪ್ಟೆಂಬರ್– 20 ರಿಂದ ಪ್ರಾರಂಭವಾಗಿದ್ದು, 2024 ರ ಸೆಪ್ಟೆಂಬರ್– 30 ಕೊನೆಯ ದಿನಾಂಕವಾಗಿರುತ್ತದೆ.

    ಷರತ್ತುಗಳು:

    ಅಭ್ಯರ್ಥಿಗಳು 40 ವರ್ಷ ವಯೋಮಿತಿಯೊಳಗಿರಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ನೆಲಮಂಗಲ ತಾಲ್ಲೂಕುಗಳ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.

    ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಎರಡು ವರ್ಷದ ಒಳಗೆ ಕಾನೂನು ಪದವಿಯನ್ನು ಪಡೆದಿರಬೇಕು. ವಾರ್ಷಿಕ ಆದಾಯ ರೂ.2,00,000/-ಗಳ ಒಳಗೊಂಡಿರಬೇಕು. ತರಬೇತಿ ಅವಧಿ ಎರಡು ವರ್ಷಗಳಾಗಿದ್ದು, ಮಾಸಿಕ ರೂ.10,000/-ಗಳ ಶಿಷ್ಯ ವೇತನ ನೀಡಲಾಗುವುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಅಥವಾ 20 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಹಿರಿಯ ವಕೀಲರಲ್ಲಿ ತರಬೇತಿ ತರಬೇತಿ ನಿಯೋಜಿಸಲಾಗುವುದು.

    ಆಯ್ಕೆಯಾದ ಅಭ್ಯರ್ಥಿಗಳು ಯಾವುದೇ ಕಾರಣಕ್ಕೂ ತರಬೇತಿಯನ್ನು ಪೂರ್ಣಗೊಳಿಸದೆ ಮಧ್ಯಂತರದಲ್ಲಿ ಬಿಟ್ಟು ಹೋಗಬಾರದು ಹಾಗೆ ಬಿಟ್ಟು ಹೋದ ಪಕ್ಷದಲ್ಲಿ ತರಬೇತಿ ಅವಧಿಯಲ್ಲಿ ಪಾವತಿಸಿದ ಶಿಷ್ಯ ವೇತನ ವಾಪಸ್ಸು ಪಡೆಯಲಾಗುವುದು ಹಾಗೂ ಈ ನಿಯಮ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ದಿಮೆಯಲ್ಲಿ ನೇಮಕ ಹೊಂದಿರುವವರಿಗೆ ಅನ್ವಯಿಸುವುದಿಲ್ಲ. ಸುಳ್ಳು ದಾಖಲೆ ಮಾಹಿತಿಯನ್ನು ಒದಗಿಸಿ ಆಯ್ಕೆಯಾದ ಅಭ್ಯರ್ಥಿಗಳನ್ನು ಕಾನೂನಿನ ಅನ್ವಯ ಶಿಕ್ಷೆಗೆ ಗುರಿಪಡಿಸಲಾಗುವುದು ಹಾಗೂ ತರಬೇತಿ ಅವಧಿಯಲ್ಲಿ ಪಾವತಿಸಿದ ಶಿಷ್ಯವೇತನ ಶೇ.10 ರಂತೆ ಬಡ್ಡಿಯೊಂದಿಗೆ ವಸೂಲಿ ಮಾಡಲಾಗುವುದು. ಅರ್ಜಿಯಲ್ಲಿನ ಮಾಹಿತಿಯು ಅಪೂರ್ಣವಾಗಿದ್ದಲ್ಲಿ ಅಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆಯ್ಕೆ ಸಮಿತಿಯ ತಿರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.

    ಹೆಚ್ಚಿನ ಮಾಹಿತಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ, ನಂ–217, ಎರಡನೇ ಮಹಡಿ, ಜಿಲ್ಲಾಡಳಿತ ಭವನ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು–562110. ದೂರವಾಣಿ ಸಂಖ್ಯೆ 29787447, ದೇವನಹಳ್ಳಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು– 27681784, ದೊಡ್ಡಬಳ್ಳಾಪುರ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು– 27623681, ಹೊಸಕೋಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು- 27931528, ನೆಲಮಂಗಲ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು– 27723172 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ರೈತರ ಬೇಡಿಕೆ ಈಡೇರುವವರೆಗೆ ಸಕ್ಕರೆ ಮುಟ್ಟಲ್ಲ! ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಜ್ಞೆ

    October 14, 2026

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ ಯಾರು? ಕೆ.ಎನ್.ರಾಜಣ್ಣ ಹೇಳಿದ್ದೇನು?

    October 14, 2026

    “ದಮ್ಮು, ತಾಕತ್ತು ಇದ್ದರೆ ಹೋರಾಟಕ್ಕೆ ಬನ್ನಿ”; ನಟ ಸುದೀಪ್‌ ಗೆ ಉಗ್ರಪ್ಪ ಸವಾಲು?

    October 14, 2026

    Comments are closed.

    Our Picks

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಸ್ಪೆಷಲ್ ನ್ಯೂಸ್

    ನವರಾತ್ರಿಯಲ್ಲಿ ಗರ್ಬಾ ನೃತ್ಯವನ್ನೇಕೆ ಮಾಡುತ್ತಾರೆ? ಇದರ ವಿಶೇಷ ಅರ್ಥ ಇಲ್ಲಿದೆ!

    October 15, 2026

    ನವರಾತ್ರಿ ಬಂತೆಂದರೆ ದುರ್ಗಾದೇವಿಯ ಆರಾಧನೆಯ ಜೊತೆಗೆ ಬಣ್ಣಬಣ್ಣದ ಉಡುಪುಗಳು, ಸಂಗೀತದ ಲಯಕ್ಕೆ ಹೆಜ್ಜೆ ಹಾಕುವ ಗರ್ಬಾ ನೃತ್ಯವೂ ಗಮನ ಸೆಳೆಯುತ್ತದೆ.…

    ನವರಾತ್ರಿ ಸರಸ್ವತಿ ಪೂಜೆ ಯಾವಾಗ? ಆಯುಧ ಪೂಜೆ, ದಸರಾ ಶುಭ ಮುಹೂರ್ತದ ಸಂಪೂರ್ಣ ಮಾಹಿತಿ ಇಲ್ಲಿದೆ

    October 15, 2026

    ನವರಾತ್ರಿಯ ನವದುರ್ಗೆಯರ ಆರಾಧನೆ; ಪ್ರತಿದಿನದ ದೇವಿಯ ವಿಶೇಷತೆ ಏನು?

    October 15, 2026

    ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್

    October 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.