ದೆಹಲಿ: ಅಧಿಕಾರ ಹಾಗೂ ಹುದ್ದೆಗಳ ಆಡಂಬರವನ್ನೇ ಮೈಮೇಲೆ ಹೊತ್ತು ತಿರುಗುವ ಇಂದಿನ ರಾಜಕಾರಣದ ನಡುವೆ, ಸರಳತೆ ಮತ್ತು ಕಾರ್ಯಕರ್ತರ ಮೇಲಿನ ನೈಜ ಕಾಳಜಿಗೆ ಹಿರಿಯ ರಾಜಕಾರಣಿ ಬಿ.ಕೆ. ಹರಿಪ್ರಸಾದ್ ಮತ್ತೊಮ್ಮೆ ಜೀವಂತ ಸಾಕ್ಷಿಯಾಗಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ ಬೀದಿಯಲ್ಲಿ, ತಮ್ಮ ನೆಚ್ಚಿನ ಕಾರ್ಯಕರ್ತರೊಂದಿಗೆ ಕುಳಿತು ಯಾವುದೇ ಮುಜುಗರ ಅಥವಾ ಆಡಂಬರವಿಲ್ಲದೆ ಊಟ ಸವಿಯುತ್ತಿರುವ ದೃಶ್ಯ ಅವರ ಸರಳ ಸಜ್ಜನ್ನಿಕೆಗೆ ಹಿಡಿದ ಕನ್ನಡಿಯಾಗಿದೆ ಎಂದು ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿ.ಕೆ. ಹರಿಪ್ರಸಾದ್ ಎಂದರೆ ಕೇವಲ ಹಿರಿಯ ರಾಜಕಾರಣಿಯಲ್ಲ, ದಶಕಗಳಿಂದ ಕಾಂಗ್ರೆಸ್ ಪಕ್ಷದ ತತ್ವ–ಸಿದ್ಧಾಂತಗಳನ್ನು ಗಟ್ಟಿಯಾಗಿ ನಂಬಿ ಬೆಳೆದ ಹಿರಿಜೀವ. ಉನ್ನತ ಮಟ್ಟದ ಅಧಿಕಾರ ಹಾಗೂ ಜವಾಬ್ದಾರಿಗಳನ್ನು ನಿರ್ವಹಿಸಿದ್ದರೂ, ಸಾಮಾನ್ಯ ಕಾರ್ಯಕರ್ತರನ್ನು ತಳಮಟ್ಟದಲ್ಲಿ ಗುರುತಿಸಿ, ಅವರೊಂದಿಗೆ ಬೆರೆತು, ನೋವು–ನಲಿವುಗಳನ್ನು ಹಂಚಿಕೊಳ್ಳುವ ಅವರ ಗುಣವೇ ಅವರನ್ನು ನಿಜವಾದ ‘ಜನರ ನಾಯಕ’ನನ್ನಾಗಿ ರೂಪಿಸಿದೆ ಎಂದು ಕಾರ್ಯಕರ್ತರು ಹೇಳಿದ್ದಾರೆ.
“ಜನರ ಧ್ವನಿಯಾಗಿ, ಕಾರ್ಯಕರ್ತರ ನೆರಳಾಗಿ ಸದಾ ಅವರ ನಡುವೆಯೇ ಇರುವ ಬಿ.ಕೆ. ಹರಿಪ್ರಸಾದ್ ಅವರ ಈ ಸರಳ ಜೀವನಶೈಲಿ ಪ್ರತಿಯೊಬ್ಬ ರಾಜಕಾರಣಿಗೂ ಮಾದರಿಯಾಗಿದೆ.”
— ಕುರುಬರ ರಾಮಣ್ಣ, ರಾಷ್ಟ್ರೀಯ ಅಧ್ಯಕ್ಷರು, ರಾಷ್ಟ್ರೀಯ ಆಹಿಂದ ಸಂಘಟನೆ
ಅದ್ದೂರಿ ವೇದಿಕೆಗಳು ಹಾಗೂ ವಿಐಪಿ ಶೋಕಿಗಳಿಗಿಂತ ಕಾರ್ಯಕರ್ತರೊಂದಿಗಿನ ಬಾಂಧವ್ಯವೇ ಮುಖ್ಯ ಎಂಬುದನ್ನು ಈ ಅಪರೂಪದ ಕ್ಷಣ ಸಾಬೀತುಪಡಿಸಿದೆ. ತಮ್ಮ ನಾಯಕ ತಮ್ಮಂತೆಯೇ ಸಾಮಾನ್ಯರಂತೆ ಬೀದಿಯಲ್ಲಿ ಕುಳಿತು ಊಟ ಮಾಡುತ್ತಿರುವುದನ್ನು ಕಣ್ಣಾರೆ ಕಂಡ ಕಾರ್ಯಕರ್ತರ ಮುಖದಲ್ಲಿ ಅಚ್ಚರಿ, ಹರ್ಷ ಮತ್ತು ಅಪಾರ ಅಭಿಮಾನ ಎದ್ದು ಕಾಣುತ್ತಿತ್ತು ಎಂದಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು.
ವರದಿ: ಮಂಜು ಶ್ರವಣೂರು, ಹೊಳೆನರಸೀಪುರ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI
