ತುಮಕೂರು: ವಿದ್ಯಾರ್ಥಿಗಳಿಗೆ ಉದ್ಯೋಗ ಆಯ್ಕೆಯ ಕುರಿತು ಸ್ಪಷ್ಟ ಚಿತ್ರಣವಿರಬೇಕು. ಉದ್ಯೋಗ ಸಂಸ್ಥೆಗಳು ಬಯಸುವಂತಹ ಕೌಶಲ್ಯಗಳಲ್ಲಿ ನೈಪುಣ್ಯತೆ ಹೊಂದಿರಬೇಕು ಎಂದು ತುಮಕೂರು ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಹೇಳಿದರು.
ತುಮಕೂರು ವಿವಿಯು ಸಮರ್ಥನಂ ಅಂಗವಿಕಲರ ಸಂಸ್ಥೆ (ರಿ.)ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನುಉದ್ಘಾಟಿಸಿ ಅವರು ಮಾತನಾಡಿದರು.
ಸಂದರ್ಶನಕ್ಕೆ ತೆರಳುವ ಮುನ್ನ ಸಂಸ್ಥೆಯ ಕುರಿತು ಸಾಮಾನ್ಯ ಜ್ಞಾನವಿರಬೇಕು. ಸಂಸ್ಥೆಗಳಿಗೆ ಅನುಗುಣವಾಗಿ ಬಯೋಡೇಟಾ ಸಿದ್ಧಪಡಿಸಿಕೊಳ್ಳಬೇಕು. ಎಲ್ಲರಿಗೂ ಒಂದೇ ತೆರನಾದ ಬಯೋಡೇಟಾ ಕೊಡಬಾರದು. ಉದ್ಯೋಗಾನುಭವ ಪಡೆಯುವ ಮನಸ್ಸಿನಿಂದ ಸಂದರ್ಶನಗಳಿಗೆ ಹಾಜರಾಗಿ ಉದ್ಯೋಗ ಪಡೆದುಕೊಳ್ಳಿ ಎಂದರು.
ಸಮರ್ಥನಂ ಅಂಗವಿಕಲರ ಸಂಸ್ಥೆ (ರಿ.) ಮುಖ್ಯಉದ್ಯೋಗ ನಿಯೋಜಕ ಸತೀಶ್ ಕೆ. ಮಾತನಾಡಿ, ದೇಶದ ಅಭಿವೃದ್ಧಿಗೆ ಗುಣಮಟ್ಟದ ಪದವೀಧರರ ಅಗತ್ಯವಿದೆ. ಮಹಿಳಾ ಶಿಕ್ಷಣಕ್ಕೆ ಒತ್ತುಕೊಟ್ಟು, ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಸಲುವಾಗಿ ಆರಂಭವಾದ ಸಂಸ್ಥೆ ಇದು ಎಂದು ತಿಳಿಸಿದರು.
ಉದ್ಯೋಗ ಮೇಳದಲ್ಲಿ 17 ಪ್ರತಿಷ್ಠಿತಕಂಪನಿಗಳು ಭಾಗಿಯಾಗಿದ್ದವು. 500ಕ್ಕೂ ಹೆಚ್ಚು ಪದವೀಧರರು ನೋಂದಾಯಿಸಿಕೊಂಡಿದ್ದರು. ಮೊದಲನೆ ಹಂತದ ಸಂದರ್ಶನಕ್ಕೆ 400 ಮಂದಿ ಹಾಜರಿದ್ದರು. ಇದರಲ್ಲಿ, 250 ಅಭ್ಯರ್ಥಿಗಳು ಎರಡನೇ ಹಂತದ ಸಂದರ್ಶನಕ್ಕೆ ಆಯ್ಕೆಯಾದರು. ಎರಡು ಹಾಗೂ ಮೂರನೆಯ ಹಂತದ ಸಂದರ್ಶನ ನೇರವಾಗಿ ಕಂಪನಿಗಳಲ್ಲೇ ನಡೆಯಲಿದೆ.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್ ಕೆ., ಉದ್ಯೋಗಕೋಶದ ನಿರ್ದೇಶಕ ಪ್ರೊ.ಪರಶುರಾಮ ಕೆ.ಜಿ., ಸಮರ್ಥನಂ ಅಂಗವಿಕಲರ ಸಂಸ್ಥೆ (ರಿ.)ಬೆಂಗಳೂರು ಶಾಖೆಯ ಮುಖ್ಯಸ್ಥಸುಭಾಷ್ ಚಂದ್ರ ಎಸ್., ಉಪನ್ಯಾಸಕ ವಿನಾಯಕ್ ಪಿ.ಎಲ್. ಉಪಸ್ಥಿತರಿದ್ದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296