ತುಮಕೂರು: ಜಿಲ್ಲೆಯ ಕುಣಿಗಲ್ ತಾಲ್ಲೂಕು ಹೊಡಾಘಟ್ಯ ಗ್ರಾಮದಲ್ಲಿ ಸ್ಥಾಪಿಸಲಿರುವ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಮುಖ್ಯ ಪ್ರವರ್ತಕ ಹಾಗೂ ಪ್ರವರ್ತಕರನ್ನು ಆಯ್ಕೆ ಮಾಡಲು ಸೆಪ್ಟೆಂಬರ್ 27ರಂದು ಮಧ್ಯಾಹ್ನ 12 ಗಂಟೆಗೆ ಹೊಡಾಘಟ್ಯ ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಸಭೆಯನ್ನು ಕರೆಯಲಾಗಿದೆ.
ರೈತರು ಮತ್ತು ರಾಸು ಸಾಕಾಣಿಕೆದಾರರರುಗಳ ಹಿತದೃಷ್ಠಿಯಿಂದ ಕಲ್ಲಯ್ಯನಪಾಳ್ಯ ಮತ್ತು ಲಿಂಗದೇವರಪಾಳ್ಯ ಗ್ರಾಮಗಳನ್ನೊಳಗೊಂಡಂತೆ ಹೊಡಾಘಟ್ಯ ಗ್ರಾಮವನ್ನು ಕೇಂದ್ರ ಸ್ಥಳವಾಗಿರಿಸಿಕೊಂಡು ಹಾಲು ಉತ್ಪದಾಕರ ಸಹಕಾರಿ ಸಂಘ ಸ್ಥಾಪನೆ ಮಾಡಲು ಪ್ರಾಥಮಿಕ ಸರ್ವೆ ನಡೆಸಲಾಗಿದೆ.
ಗ್ರಾಮಸ್ಥರು ಸಭೆಗೆ ಹಾಜರಾಗಿ ಸಂಘ ಸ್ಥಾಪನೆ ಕುರಿತು ಸೂಕ್ತ ಸಲಹೆಗಳನ್ನು ನೀಡಬೇಕೆಂದು ಕುಣಿಗಲ್ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q