nammatumakuru

    Subscribe to Updates

    Get the latest creative news from FooBar about art, design and business.

    What's Hot

    560 ಭೂಮಾಪಕರ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಒರಿಯಂಟೇಶನ್ ತರಬೇತಿ

    August 4, 2026

    ತಿಪಟೂರು: ನೀರು, ವಿದ್ಯುತ್ ಅಭಾವ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸುದ್ದಿಗೋಷ್ಠಿ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

    August 4, 2026

    ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಸಚಿವ ಸ್ಥಾನ ಮಿಸ್: ಹಿರೇಬಾಗೇವಾಡಿ ಟೋಲ್ ಬಂದ್ ಮಾಡಿ ಅಭಿಮಾನಿಗಳಿಂದ ಪ್ರತಿಭಟನೆ

    August 3, 2026
    Facebook Twitter Instagram
    ಟ್ರೆಂಡಿಂಗ್
    • 560 ಭೂಮಾಪಕರ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಒರಿಯಂಟೇಶನ್ ತರಬೇತಿ
    • ತಿಪಟೂರು: ನೀರು, ವಿದ್ಯುತ್ ಅಭಾವ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸುದ್ದಿಗೋಷ್ಠಿ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
    • ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಸಚಿವ ಸ್ಥಾನ ಮಿಸ್: ಹಿರೇಬಾಗೇವಾಡಿ ಟೋಲ್ ಬಂದ್ ಮಾಡಿ ಅಭಿಮಾನಿಗಳಿಂದ ಪ್ರತಿಭಟನೆ
    • ಮಂತ್ರಿಗಿರಿ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಶಾಸಕರಿಗೆ  ಕೈ ಹೈಕಮಾಂಡ್ ಶಾಕ್!
    • ಬೀದರ್‌ ನಲ್ಲಿ ಸುಸೂತ್ರವಾಗಿ ನಡೆದ ಸಿವಿಲ್ ಪೊಲೀಸ್ ಕಾನ್‌ ಸ್ಟೇಬಲ್ ನೇಮಕಾತಿ ಪರೀಕ್ಷೆ: 663 ಅಭ್ಯರ್ಥಿಗಳು ಗೈರು
    • ಕೂಡ್ಲಿಗಿ: ಸಭೆ–ಉತ್ಸವ ಕಾಟಾಚಾರಕ್ಕಾಗದಿರಲಿ, ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಸಂಘಟನೆಗಳ ಆಗ್ರಹ
    • ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: 20 ಹೊಸ ಸಚಿವರ ಸೇರ್ಪಡೆ, ಪ್ರಮುಖ ಹುದ್ದೆಗಳಿಗೆ ಎಐಸಿಸಿ ಅಂತಿಮ ಅನುಮೋದನೆ
    • ಕಾವೇರಿ ಕಿಚ್ಚು: ‘ಭೂಮಿ, ನೀರು, ಭಾಷೆ ವಿಚಾರ ಬಂದಾಗ ಕರ್ನಾಟಕ ಒಂದಾಗಬೇಕು’ : ಸರ್ವಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಕರೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ತುಮಕೂರು ಜಿಲ್ಲೆಗೆ ಸಿಎಂ ಸ್ಥಾನ ಸಿಗಲಿ: ದಸರಾ ಕಾರ್ಯಕ್ರಮದ ವೇಳೆ ಹನುಮಂತನಾಥ ಸ್ವಾಮೀಜಿ ಹೇಳಿಕೆ
    ತುಮಕೂರು October 3, 2024

    ತುಮಕೂರು ಜಿಲ್ಲೆಗೆ ಸಿಎಂ ಸ್ಥಾನ ಸಿಗಲಿ: ದಸರಾ ಕಾರ್ಯಕ್ರಮದ ವೇಳೆ ಹನುಮಂತನಾಥ ಸ್ವಾಮೀಜಿ ಹೇಳಿಕೆ

    By adminOctober 3, 2024No Comments2 Mins Read
    Hanuman Nath Swamiji

    ತುಮಕೂರು: ತುಮಕೂರು ಜಿಲ್ಲೆಗೆ ಸಿಎಂ ಸ್ಥಾನ ಸಿಗಲಿ ಎಂದ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀಗಳು ಹೇಳಿಕೆ ನೀಡಿದ್ದಾರೆ.

    ದಸರಾ ಕಾರ್ಯಕ್ರಮದ ಬಳಿಕ ಮಾತನಾಡಿದ ಎಲೆರಾಂಪುರ ಮಠದ ಹನುಮಂತನಾಥ ಸ್ವಾಮೀಜಿ, ನಾನು ವೇದಿಕೆಯಲ್ಲಿ ಮಾತನಾಡಿದ ಹಾಗೆ ನಮ್ಮ ಜಿಲ್ಲೆಯಿಂದ ಒಬ್ಬರು ಮುಖ್ಯಮಂತ್ರಿಗಳು ಆಗ್ಬೇಕು. ಅವಕಾಶ ಸಿಗಬೇಕು ಅಂತ ಹೇಳಿ ಪ್ರತಿಸಾರಿ ನಾವು ಅಂದುಕೊಳ್ತಿದ್ವಿ. ಕಳೆದ ಬಾರಿ ಪರಮೇಶ್ವರ್ ಅವರು ಕೊರಟಗೆರೆ ಕ್ಷೇತ್ರದಲ್ಲಿ ಸೋಲಾಯ್ತು. ಕಳೆದ ಬಾರಿ ಅವರು ಮುಖ್ಯಮಂತ್ರಿ ಅಂತ ಬಿಂಬಿಸಿದಾಗ ಆ ಹುದ್ದೆ ಅವರಿಂದ ಕೈತಪ್ಪಿ ಹೋಯ್ತು, ಈ ಸಂದರ್ಭದಲ್ಲಾದ್ರೂ ನಮ್ಮ ಜಿಲ್ಲೆಯಿಂದ ಒಬ್ರು ಮುಖ್ಯಮಂತ್ರಿಗಳಾಗಲಿ ಅನ್ನೋದು ನಮ್ಮ ಆಶಯ ಎಂದರು.

    ಇದು ಯಾವುದೇ ರಾಜಕೀಯ ಪ್ರೇರಿತವಲ್ಲ, ಇದು ಧಾರ್ಮಿಕ ಕಾರ್ಯಕ್ರಮ ಅಂತ ನಾನು ಹೆಚ್ಚಿಗೆ ಮಾತನಾಡೋಕೆ ಹೋಗಿಲ್ಲ, ನಮ್ಮ ಒಂದು ಕನಸು ನಮ್ಮ ಜಿಲ್ಲೆಯಿಂದ ಮುಖ್ಯಮಂತ್ರಿ ಆದ್ರೆ ಎಲ್ಲಾ ತಾಲ್ಲೂಕುಗಳು ಅಭಿವೃದ್ಧಿ ಆಗುತ್ತೆ, ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಆಗುತ್ತೆ ಶಿರಾ, ಮಧುಗಿರಿ, ಪಾವಗಡ ಹೀಗೆ ತುಂಬಾ ಹಿಂದುಳಿದ ತಾಲೂಕುಗಳನ್ನ ಹೊಂದಿರುವ ಜಿಲ್ಲೆ ಇದು. ಈ ಜಿಲ್ಲೆಗೆ ವಿಶೇಷ ಅನುದಾನ ನೀಡುವ ಮೂಲಕ ರಾಜ್ಯದ ಮೊದಲ ಸ್ಥಾನದಲ್ಲಿ ನಿಲ್ಲಬೇಕು ಎಂದು ಅವರು ಹೇಳಿದರು.
    ಎಲ್ಲಾ ವರ್ಗದವರಿಗೆ ಸಾಮಾಜಿಕ ಶೈಕ್ಷಣಿಕ ನ್ಯಾಯ ಸಿಗಬೇಕು ಅನ್ನೋ ದೃಷ್ಟಿಯಿಂದ ಮಾತನಾಡಿದ್ದೇನೆ. ಹೀಗಾಗಿ ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಭಾಗ್ಯ ಒಲಿದು ಬರಲಿ ಅಂತ ಪ್ರಾರ್ಥನೆ ಮಾಡಿಕೊಳ್ತೀನಿ ಎಂದು ಅವರು ಹೇಳಿದರು.

    ರಾಜಕೀಯವಾಗಿ ನಾನು ಮಾತನಾಡಿಲ್ಲ, ಭವಿಷ್ಯ ಎರಡೂವರೆ ವರ್ಷ ಸಿದ್ದರಾಮಯ್ಯ, ಎರಡೂವರೆ ವರ್ಷ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಅಂತ ಅವರ ಪಕ್ಷ ತೀರ್ಮಾನ ಮಾಡಿದೆ, ಒಂದು ವೇಳೆ ಅಂತಹ ಅವಕಾಶ ಸಿಕ್ಕಿದ್ರೆ ನಮ್ಮ ಜಿಲ್ಲೆಗೆ ಮುಖ್ಯಮಂತ್ರಿ ಅವಕಾಶ ಲಭಿಸಲಿ ಅಂತ ಮಾತನಾಡಿದ್ದೇನೆ. ಎರಡೂವರೆ ವರ್ಷ ಅಂತ ಬಹಿರಂಗವಾಗಿ ಯಾರು ಹೇಳಿಲ್ಲ ಅಂದ್ರು.

    ಪಕ್ಷದಲ್ಲಿ ಆಂತರಿಕವಾಗಿ ಚರ್ಚೆ ನಡೆದಿದೆ ಅಂತ ನಮ್ಮಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ನಾನು ಧರ್ಮದಲ್ಲಿ ರಾಜಕೀಯ ಇರಬಾರದು, ರಾಜಕೀಯದಲ್ಲಿ ಧರ್ಮ ಇರಬೇಕು ಅಂತ ಹೇಳಿಕೊಂಡು ಬಂದವನು. ನಾನು ಯಾವತ್ತೂ ಯಾವುದೇ ಪಕ್ಷಕ್ಕೆ, ಮತಕ್ಕೆ ಸೀಮಿತವಾಗಿಲ್ಲ. ನಮಗಿರುವ ಆಸೆ ಏನು ಅಂದ್ರೆ ನಮ್ಮ ಜಿಲ್ಲೆ ಅಭಿವೃದ್ಧಿ ಆಗಲಿ, ಕುಡಿಯುವ ನೀರು, ಮೆಟ್ರೋ, ಎತ್ತಿ‌ನಹೊಳೆ, ವಿಮಾನ ನಿಲ್ದಾಣ ಹೀಗೆ ಬೇರೆ ಬೇರೆ ಅಭಿವೃದ್ಧಿಗಳಾಗಬೇಕು. ಇವತ್ತು ಕೂಡಾ ನಮ್ಮ ಜಿಲ್ಲೆಯಲ್ಲಿ ಎಷ್ಟು ಜನ ಗುಡಿಸಲಿನಲ್ಲಿ ವಾಸ ಮಾಡ್ತಿದ್ದಾರೆ. ಹೀಗಾಗಿ ನಮ್ಮ ಜಿಲ್ಲೆಗೆ ಒಂದು ಅವಕಾಶ ಸಿಕ್ಕಿದ್ರೆ 10 ತಾಲೂಕುಗಳು ಅಭಿವೃದ್ಧಿ ಕಾಣಬಹುದು ಅನ್ನೋ ಉದ್ದೇಶ ಇಟ್ಟುಕೊಂಡು ಮಾತನಾಡಿದ್ದೇನೆ ಎಂದು ಅವರು ಹೇಳಿದರು.

    ನಾನು ಯಾವುದೇ ಹೆಸರು ಬಲದ ಮೇಲೆ ಮಾತನಾಡಿಲ್ಲ, ಜಿಲ್ಲೆಯ ಉಸ್ತುವಾರಿಗಳು ಹಾಗೂ ಪ್ರಭಾವಿ ಸಚಿವರು ಇರೋದ್ರಿಂದ ಹೇಳಿದ್ದೀನಿ, ಈ ಅವಧಿ ಮುಂದಿನ ಅವಧಿ ಅಂತ ಏನಿಲ್ಲ, ಒಟ್ಟಿನಲ್ಲಿ ನಮ್ಮ ಜಿಲ್ಲೆಗೆ ಒಂದು ಅವಕಾಶ ಸಿಗಲಿ ಎಂದು ಅವರು ಹೇಳಿದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296

    admin
    • Website

    Related Posts

    560 ಭೂಮಾಪಕರ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಒರಿಯಂಟೇಶನ್ ತರಬೇತಿ

    August 4, 2026

    ತುಮಕೂರಲ್ಲಿ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಯಶಸ್ವಿ ತೆರೆ

    August 2, 2026

    ತುಮಕೂರು: 30ನೇ ವಾರ್ಡಿನ ಗಾರೇನರಸಯ್ಯ ನಕಟ್ಟೆ ಸ್ವಚ್ಛತಾ ಕಾರ್ಯ: ಪಾಲಿಕೆ ಸಿಬ್ಬಂದಿ, ನಾಗರಿಕ ಹಿತರಕ್ಷಣಾ ಸಮಿತಿ ಭಾಗಿ

    August 2, 2026

    Comments are closed.

    Our Picks

    NEET ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ

    July 25, 2026

    ನೀಟ್ ಅಕ್ರಮ: ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ: ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ

    July 21, 2026

    ಕೇಂದ್ರ ಸರ್ಕಾರವು ತಕ್ಷಣವೇ ಸೋನಮ್ ವಾಂಗ್ಚುಕ್ ಜೊತೆ ಚರ್ಚಿಸಲು ಆಗ್ರಹಿಸಿ ರಾಷ್ಟ್ರಪತಿಯವರಿಗೆ ಮನವಿ: ತುಮಕೂರಿನಲ್ಲಿ ಆನ್‌ ಲೈನ್ ಸಹಿ ಸಂಗ್ರಹ

    July 18, 2026

    ಪಿಎಂ–ವಿಕಸಿತ್ ಭಾರತ್ ರೋಜ್‌ ಗಾರ್ ಯೋಜನೆಯಡಿ ₹2,400 ಕೋಟಿ ಪ್ರೋತ್ಸಾಹಧನ ವಿತರಣೆ: 15 ಲಕ್ಷ ಉದ್ಯೋಗಾವಕಾಶಗಳ ಸೃಷ್ಟಿ

    June 20, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    560 ಭೂಮಾಪಕರ ಹುದ್ದೆ: ಸ್ಪರ್ಧಾತ್ಮಕ ಪರೀಕ್ಷೆಗೆ ಒರಿಯಂಟೇಶನ್ ತರಬೇತಿ

    August 4, 2026

    ತುಮಕೂರು: ಕಂದಾಯ ಇಲಾಖೆಯಲ್ಲಿ ಖಾಲಿ ಇರುವ 560 ಭೂಮಾಪಕರ ಹುದ್ದೆಗಳಿಗೆ, ಅರ್ಜಿಹಾಕಲು ಆ.7 ಅಂತಿಮ ದಿನಾಂಕ ನಿಗದಿಪಡಿಸಿದೆ, ಕರ್ನಾಟಕ ವಿಶೇಷ…

    ತಿಪಟೂರು: ನೀರು, ವಿದ್ಯುತ್ ಅಭಾವ ಹಾಗೂ ಅಕ್ರಮ ಮದ್ಯ ಮಾರಾಟ ತಡೆಗೆ ಆಗ್ರಹಿಸಿ ಸುದ್ದಿಗೋಷ್ಠಿ | ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ

    August 4, 2026

    ಲಕ್ಷ್ಮೀ ಹೆಬ್ಬಾಳ್ಕರ್​​ಗೆ ಸಚಿವ ಸ್ಥಾನ ಮಿಸ್: ಹಿರೇಬಾಗೇವಾಡಿ ಟೋಲ್ ಬಂದ್ ಮಾಡಿ ಅಭಿಮಾನಿಗಳಿಂದ ಪ್ರತಿಭಟನೆ

    August 3, 2026

    ಮಂತ್ರಿಗಿರಿ ಸಿಗದಿದ್ದಕ್ಕೆ ಮುನಿಸಿಕೊಂಡಿರುವ ಶಾಸಕರಿಗೆ  ಕೈ ಹೈಕಮಾಂಡ್ ಶಾಕ್!

    August 3, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.