ತುಮಕೂರು: ನಗರದಲ್ಲಿ ಆರು ದಿನಗಳಿಂದ ನಡೆದ ಯೋನೆಕ್ಸ್–ಸನ್ ರೈಸ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್–11 ಮತ್ತು ಅಂಡರ್–13 ವಿಭಾಗಗಳ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಶನಿವಾರ ತೆರೆಬಿದ್ದಿತು.
ಬಾಲಕರ ಅಂಡರ್–11 ವಿಭಾಗದ ಸಿಂಗಲ್ಸ್ ನಲ್ಲಿ ರಿಯಾನ್ಸ್ ರಿಷಿಕ್ ಸಾಯಿ ಯುಗಂಟ್ ಪ್ರಥಮ, ಲಿಟಿನ್ ಪಿ ದ್ವಿತೀಯ ಸ್ಥಾನ ಪಡೆದರೆ, ಡಬಲ್ ನಲ್ಲಿ ಅಥರ್ವ್ ಸಾಹು ಹಾಗೂ ರಿಯಾನ್ಸ್ ರಿಷಿಕ್ ಪ್ರಥಮ ಸ್ಥಾನ ಗೆದ್ದರು. ಇದೇ ವಿಭಾಗದ ಬಾಲಕಿಯರ ಸಿಂಗಲ್ಸ್ ನಲ್ಲಿ ಜ್ಯೋತ್ಸ್ನಾ ವಿನೋದ್ ಪ್ರಥಮ, ಯುವಿಕ ತಿಮ್ಮಯ್ಯ ದ್ವಿತೀಯ ಸ್ಥಾನ ಪಡೆದರು. ಡಬಲ್ ನಲ್ಲಿ ಜ್ಯೋತ್ಸ್ನಾ ವಿನೋದ್, ಕೃಪಾ ಸಿಂಗ್ದೇವ್ ಪ್ರಥಮ, ಆರುಷಿ ವೈಷ್ಣವಿ, ಸ್ವರ ಎಸ್. ಭಾರಧ್ವಾಜ್ ಗೆಲುವು ಸಾಧಿಸಿದರು.
ಬಾಲಕಿಯರ ಅಂಡರ್ 13ರಲ್ಲ ವಿಭಾಗದ ಸಿಂಗಲ್ ನಲ್ಲಿ ಸಿಪಿ ಆದರ್ಶ್ ಮೊದಲ, ಶಾನ್ವಿ ಪಿ.ಎನ್ ದ್ವಿತೀಯ ಸ್ಥಾನ ಹಾಗೂ ಡಬಲ್ ನಲ್ಲಿ ಶಾನ್ವಿ ಪಿ.ಎನ್., ಶಾಂಭವಿ ಶರ್ಮಾ ಪ್ರಥಮ, ಹೇಮಾಶ್ರೀ, ಸಿಪಿ ಆದರ್ಶ್ ದ್ವಿತೀಯ ಸ್ಥಾನ ಪಡೆದರು. ಬಾಲಕರ ಅಂಡರ್ 13 ವಿಭಾಗದ ಸಿಂಗಲ್ ನಲ್ಲಿ ವೈಭವ್ ರಾವ್ ನಂದಿಕೊಳ್ಳ ಮೊದಲ ಹಾಗೂ ಜ್ಞಾನ್ ರಿಷಿಕ್ ಚೋಳಗುಡ್ಡ ಎರಡನೇ ಸ್ಥಾನ ಗಳಿಸಿದರು. ಡಬಲ್ ನಲ್ಲಿ ಮಾನ್ವಿತ ಮಾಟಿಬೆಟ್ಟು, ಆದರ್ಶ್ ವೈಭವ್ ರಾವ್ ಮೊದಲ ಹಾಗೂ ಜ್ಞಾನ್ ರಿಷಿಕ್ ಚೋಳಗುಡ್ಡ, ಕೌಶಿಕ್ ಹಳೇಬೀಡು ದ್ವಿತೀಯ ಸ್ಥಾನ ಪಡೆದರು.
ಕೇಂದ್ರ ಸಚಿವ ವಿ. ಸೋಮಣ್ಣ ಬ್ಯಾಡ್ಮಿಂಟನ್ ಪಂದ್ಯಾವಳಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ದೇಶದ ಪ್ರಗತಿಗೆ, ಹಿರಿಮೆಗೆ ಕ್ರೀಡೆಯೂ ಪೂರಕವಾಗಿರಬೇಕು. ವಿಕಸಿತ ಭಾರತ 2047ರ ವೇಳೆಗೆ ಭಾರತದ ಕ್ರೀಡೆಗಳು ಉನ್ನತಂಗದಲ್ಲಿರಬೇಕು. ಅದಕ್ಕಾಗಿ ಈಗಿನಿಂದಲೇ ಯುವಕ್ರೀಡಾಪಟುಗಳು ಸಜ್ಜಾಗಬೇಕು. ಕ್ರೀಡಾಪಟುಗಳನ್ನು ಬೆಳಕಿಗೆ ತರಲು ಇಂತಹ ಪಂದ್ಯಾವಳಿಗಳು ಸಹಕಾರಿಯಾಗಬೇಕು. ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ತುಮಕೂರಿನಲ್ಲಿ ಪಂದ್ಯಾವಳಿ ಆಯೋಜಿಸಿದ್ದಕ್ಕೆ ಅಭಿನಂದನೆಗಳು. ಕ್ರಿಕೆಟ್ ನಂತರ ಬ್ಯಾಡ್ಮಿಂಟನ್ ಹೆಚ್ಚು ಜನಪ್ರಿಯತೆಯಲ್ಲೆಯಾಗಿದೆ. ದೇಶವಿದೇಶಗಳಲ್ಲಿ ಬ್ಯಾಡ್ಮಿಂಟನ್ ಪ್ರತಿಭೆಗಳು ಅಭ್ಯಾಸ ಮಾಡುತ್ತಿದ್ದಾರೆ. ರಾಜ್ಯದಲ್ಲೂ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರನ್ನು ತಯಾರು ಮಾಡಿ ರಾಷ್ಟ್ರೀಯ ಪಂದ್ಯಾವಳಿಗೆ ಸಜ್ಜುಗೊಳಿಸಲು ಅಸೋಸಿಯೇಷನ್ ಪ್ರಯತ್ನ ಮಾಡಲಿ ಎಂದು ಸಚಿವರು ತಿಳಿಸಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಪಿ. ಮುರಳೀಧರ್, ತುಮಕೂರು ಬ್ಯಾಡ್ಮಿಂಟನ್ ಅಕಾಡೆಮಿ ಅಧ್ಯಕ್ಷ ಪಿ. ಪ್ರವೀಣ್, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಪಿ. ಮುರಳೀಧರ್, ಸದಸ್ಯ ಹರೀಶ್, ಸಂಯೋಜಕರಾದ ನಿಶಾಂತ್, ಗುರುಪ್ರಸಾದ್, ಅನುಷಾ ಮುಂತಾದವರಾದ ಅಜಯ್ಕುಮಾರ್, ಊರುಕೆರೆ ಪುರುಷೋತ್ತಮ್, ಮಲ್ಲಸಂದ್ರ ಶಿವಣ್ಣ, ಟ್ಯಾಕ್ಸಿಲಿಂಗರಾಜು, ಚಂದ್ರಶೇಖರಬಾಬು, ರುದ್ರೇಶ್, ಲಕ್ಷ್ಮೀನಾರಾಯಣ ಮೊದಲಾದವರು ಭಾಗವಹಿಸಿದ್ದರು.
ರಾಜ್ಯದೆಲ್ಲೆಡೆಯಿಂದ 639 ಬ್ಯಾಡ್ಮಿಂಟನ್ ಆಟಗಾರರು ಭಾಗಿ:
ಜು.27ರಿಂದ ಆ.1ರವರೆಗೆ 6 ದಿನಗಳ ಕಾಲ ತುಮಕೂರಿನಲ್ಲಿ ಜರುಗಿದ 11 ಹಾಗೂ 13 ವರ್ಷದೊಳಗಿನ ರಾಜ್ಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದಲ್ಲಿ ಒಟ್ಟು 639 ಬ್ಯಾಡ್ಮಿಂಟನ್ ಆಟಗಾರರು ಸ್ಪರ್ಧಾತ್ಮಕವಾಗಿ ಭಾಗಿಯಾಗಿದ್ದರು. ಮೊದಲ ಎರಡು ದಿನಗಳ ಕಾಲ ಆಯ್ಕೆ ಸುತ್ತಿನ ಪಂದ್ಯಾವಳಿ ಜರುಗಿದರೆ, ನಂತರ 2 ದಿನಗಳ ಕಾಲ ಮೈನ್ ಡ್ರಾ ಪಂದ್ಯಾವಳಿ ಅಂದರೆ ಈಗಾಗಲೇ ರ್ಯಾಂಕಿಂಗ್ ಪಟ್ಟಿಯಲ್ಲಿರುವ ಆಟಗಾರರೊಂದಿಗೆ ಆಯ್ಕೆ ಸುತ್ತಿನಲ್ಲಿ ಸೆಲೆಕ್ಟ್ ಆದ ಸ್ಪರ್ಧಿಗಳ ಸೆಣಸಾಟ ನಡೆಯಿತು. ಇಲಿ ವಿಜೇತರಾದವರು ಕ್ವಾರ್ಟರ್ ಫೈನಲ್, ಸೆಮಿಫೈನಲ್ ಪ್ರವೇಶಿಸುವುದರೊಂದಿಗೆ ಶನಿವಾರ ಅಂತಿಮ ಸುತ್ತಿನ ಪಂದ್ಯಾವಳಿ ಜರುಗಿ ರಾಜ್ಯಮಟ್ಟದ 6 ದಿನಗಳ ಪಂದ್ಯಾವಳಿಗೆ ಯಶಸ್ವಿ ತೆರೆಬಿದ್ದಿತು.
ತುಮಕೂರಿನ ಆರುಷಿ ವೈಷ್ಣವಿ ಸಿಂಗಲ್ಸ್ – ಡಬಲ್ಸ್ ನಲ್ಲಿ ಸಾಧನೆ:
ಕಳೆದ 6 ದಿನಗಳಿಂದ ನಡೆದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅತಿಥೇಯ ತುಮಕೂರಿನ ಸ್ಪರ್ಧಾಳುಗಳು ಸಿಂಗಲ್ಸ್, ಡಬಲ್ಸ್ ನಲ್ಲಿ ರಾಜ್ಯಮಟ್ಟಕ್ಕೆ ದ್ವಿತೀಯ, ತೃತೀಯ ಸ್ಥಾನ ಪಡೆದು ಸಾಧನೆಗೈದಿದ್ದಾರೆ. 11 ವರ್ಷದೊಳಗಿನ ಬಾಲಕಿಯರ ಡಬಲ್ ನಲ್ಲಿ ಆರುಷಿ ವೈಷ್ಣವಿ ಬೆಂಗಳೂರಿನ ಸ್ವರ ಎಸ್.ಭಾರಧ್ವಾಜ್ ಜೊತೆ ಸೇರಿ ಎರಡನೇ ಬಹುಮಾನ ಪಡೆದುಕೊಂಡರೆ, ಇದೇ ವಿಭಾಗದ ಸಿಂಗಲ್ ನಲ್ಲೂ 3ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಬ್ಯಾಡ್ಮಿಂಟನ್ ಸಿಂಗಲ್ಸ್ ನಲ್ಲಿ ರಿಯಾನ್ಸ್ ರಿಷಿಕ್ ಸಾಯಿ, ಜ್ಯೋತ್ಸ್ನಾ ವಿನೋದ್, ಸಿಪಿ ಆದರ್ಶ್, ವೈಭವರಾವ್ ನಂದಿಕೊಳ್ಳ ಹಾಗೂ ಡಬಲ್ಸ್ನಲ್ಲಿ ಅಥರ್ವ್ ಸಾಹು- ರಿಯಾನ್ಸ್ ರಿಷಿಕ್, ಶಾನ್ವಿ ಪಿ.ಎನ್, ಶಾಂಭವಿ ಶರ್ಮಾ- ಮಾನ್ವಿತ ಮಾಟಿಬೆಟ್ಟು ಪ್ರಥಮ ಸ್ಥಾನ ತನ್ನದಾಗಿಸಿಕೊಂಡು ಕೇಂದ್ರ ಸಚಿವ ವಿ.ಸೋಮಣ್ಣ, ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಕುಮಾರ್ ಬಂಗಾರಪ್ಪ, ಶಾಸಕ ಜ್ಯೋತಿಗಣೇಶ್ ಮತ್ತಿತರ ಗಣ್ಯರಿಂದ ಬಹುಮಾನ ಸ್ವೀಕರಿಸಿದರು.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC
