nammatumakuru

    Subscribe to Updates

    Get the latest creative news from FooBar about art, design and business.

    What's Hot

    ವಿದ್ಯಾರ್ಥಿದೆಸೆಯಲ್ಲಿ ನಾನು ಕಬಡ್ಡಿ ಪಟುವಾಗಿದ್ದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

    January 16, 2026

    ಹಳೆವೈಷಮ್ಯ: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

    January 16, 2026

    ನಾಯಿ ಮೇಲೆ ದಾಳಿ ಮಾಡಿದ್ದ ಚಿರತೆ ಕೊನೆಗೂ ಸೆರೆ: ಗ್ರಾಮಸ್ಥರು ನಿರಾಳ

    January 16, 2026
    Facebook Twitter Instagram
    ಟ್ರೆಂಡಿಂಗ್
    • ವಿದ್ಯಾರ್ಥಿದೆಸೆಯಲ್ಲಿ ನಾನು ಕಬಡ್ಡಿ ಪಟುವಾಗಿದ್ದೆ: ಮುಖ್ಯಮಂತ್ರಿ ಸಿದ್ದರಾಮಯ್ಯ
    • ಹಳೆವೈಷಮ್ಯ: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ
    • ನಾಯಿ ಮೇಲೆ ದಾಳಿ ಮಾಡಿದ್ದ ಚಿರತೆ ಕೊನೆಗೂ ಸೆರೆ: ಗ್ರಾಮಸ್ಥರು ನಿರಾಳ
    • ಸಚಿವ ರಾಜಣ್ಣಗೆ ಸಿಗುತ್ತಾ ಮತ್ತೆ ಮಂತ್ರಿಗಿರಿ? ಸಿಎಂ ಸಿದ್ದರಾಮಯ್ಯ ನೀಡಿದ ಸುಳಿವೇನು?
    • ಪ್ರಿಯಕರನ ಜೊತೆ ವಾಸಿಸುತ್ತಿದ್ದ ಮಹಿಳೆಯ ಬರ್ಬರ ಹತ್ಯೆ!
    • ಜನವರಿ 17: ವಿದ್ಯಾ ಚೌಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ
    • ತುಮಕೂರು: ಎರಡನೇ ಪತ್ನಿಯ ಮಗನಿಂದ ವ್ಯಕ್ತಿಯ ಬರ್ಬರ ಹತ್ಯೆ
    • ತುಮಕೂರು: ಜ.20ರಂದು ಸಾರ್ವಜನಿಕರ ಸಭೆ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವೈ.ಎನ್.ಹೊಸಕೋಟೆ : ಬುಕ್ಕರಾಯರ ಕಾಲದ ತಾಮ್ರ ಶಾಸನ ಪತ್ತೆ
    ರಾಜ್ಯ ಸುದ್ದಿ October 18, 2024

    ವೈ.ಎನ್.ಹೊಸಕೋಟೆ : ಬುಕ್ಕರಾಯರ ಕಾಲದ ತಾಮ್ರ ಶಾಸನ ಪತ್ತೆ

    By adminOctober 18, 2024No Comments2 Mins Read
    bukkaraya

    ವೈ.ಎನ್.ಹೊಸಕೋಟೆ : ಹೋಬಳಿಯ ಹನುಮಂತನಹಳ್ಳಿ ಗ್ರಾಮದ ಬಡಗಿ ತಿಮ್ಮರಾಯಪ್ಪರವರ ಮನೆಯಲ್ಲಿ ಬುಕ್ಕರಾಯರ ಕಾಲಕ್ಕೆ ಸಂಬಂದಿಸಿದ ತಾಮ್ರ ಶಾಸನ ಪತ್ತೆಯಾಗಿದೆ.

    ಈ ಭಾಗದ ಇತಿಹಾಸ ಸಂಶೋಧಕ ಹೊ.ಮ.ನಾಗರಾಜು ಸ್ಥಳೀಯ ಜಾನಪದ ಕಲಾವಿದರಾದ ಟಿ.ಎ.ಶಿವಣ್ಣರ ಸಹಕಾರದಿಂದ ಶಾಸನವನ್ನು ಪತ್ತೆಹಚ್ಚಿದ್ದಾರೆ. ಅಷ್ಟವಧಾನಿ ಗುರುವೇಪಲ್ಲಿ ನರಸಿಂಹುಲು ರವರ ಸಹಕಾರದಿಂದ ಶಾಸನವನ್ನು ಓದಲಾಗಿದ್ದು, ಗೌರಿಬಿದನೂರು ತಾಲ್ಲೂಕಿನಲ್ಲಿರುವ ನಗರಗೆರೆ ಗ್ರಾಮದ ರಚನೆಯ ವಿಷಯ ಒಳಗೊಂಡಿದೆ ಎಂದಿದ್ದಾರೆ.


    Provided by
    Provided by

    ಶಾಸನ ಫಲಕವು 12 ಇಂಚು ಎತ್ತರ 6 ಇಂಚು ಅಗಲ ಅಳತೆಯನ್ನು ಹೊಂದಿದೆ. ದಪ್ಪದ ತಾಮ್ರದ ಹಲಗೆಯ ಎರಡು ಮುಖಗಳ ಮೇಲೆ ಶಾಸನವನ್ನು ಕೆತ್ತಲಾಗಿದ್ದು, ಒಟ್ಟು 80 ಸಾಲುಗಳಿವೆ. ಅಕ್ಷರಗಳು ಕನ್ನಡ ಲಿಪಿಯಾಗಿದ್ದು, ತೆಲುಗು ಭಾಷೆಯನ್ನು ಒಳಗೊಂಡ ಶಾಸನ ಇದಾಗಿದೆ.

    ಗ್ರಾಮಕ್ಕೆ ರಾಮದೇವರುಗಳು ದಯಮಾಡಿದಾಗ ಬರೆದ ರುಜುವು ಎಂದು ಶಾಸನದ ಪ್ರಾರಂಭದ ಸಾಲುಗಳಲ್ಲಿ ತಿಳಿಸಲಾಗಿದೆ. ಆದರೆ ಶಾಸನದಲ್ಲಿ ಶಾಸನ ರಚನಾ ಕಾಲ ಲಭ್ಯವಿರುವುದಿಲ್ಲ. ನಿಡಗಲ್ಲು, ಹೊಸಕೋಟೆ ಹರತಿ ಪಾಳೇಗಾರರ ಮೂಲಪುರುಷನಾದ ಆನೆಗೊಂದಿಯ ತಿಪ್ಪನಾಯಕನು ಶಾಲಿ ಶಕ 1157 ರಲ್ಲಿ ಬಹದ್ದೂರ್ ಮಲ್ಲಿಕನ ಮೇಲೆ ಯುದ್ದ ಮಾಡಿ ಗೆದ್ದ ಎಂಬ ಉಲ್ಲೇಖವಿದೆ. ಇದರೊಟ್ಟಿಗೆ ಶಾಸನದಲ್ಲಿ ಬರುವ ಮಾನ್ಯಗಳ ಅಳತೆಯನ್ನು ವಿಜಯನಗರ ಕಾಲದ ನಾಣ್ಯಗಳಾದ ರಾಮ ಟಂಕಿಗಳು, ದುರ್ಗಿಗಳು ಮತ್ತು ಪುತಳಿಗಳಿಗಳಿಂದ ಗುರ್ತಿಸಲಾಗಿದೆ.

    ಆದಾಗಿ ಈ ಶಾಸನವು ವಿಜಯನಗರ ಕಾಲಘಟ್ಟದ ಶಾಸನವೆಂದು ತಿಳಿಯಬಹುದು. ಶಾಸನ ಪಾಠಾಂಶದಲ್ಲಿ ಅಕ್ಷರ ಮತ್ತು ಕಾಗುಣಿತ ದೋಷಗಳು ಬಹಳಷ್ಟಿದ್ದು ವಾಕ್ಯ ಜೋಡಣೆಯು ಅಲ್ಲಲ್ಲಿ ಅಸ್ಪಷ್ಟವಾಗಿದೆ. ಆದಾಗಿ ಮೇಲ್ಮೋಟಕ್ಕೆ ಇದೊಂದು ಕೂಟ ಶಾಸನವೆಂಬಂತೆ ಕಂಡುಬರುತ್ತಿದೆ ಎನ್ನುತ್ತಾರೆ ಸಂಶೋಧಕರು.

    ವೃಷಭ ಪತಿಗಾ ತೆಲಿಸಿತಿ ಎಂಬ ಬೀಜಾಕ್ಷರಗಳುಳ್ಳ ಮೂರು ಪಟ್ಟಿಯ ಚೌಕಟ್ಟಿನೊಂದಿಗೆ ಪ್ರಾರಂಭವಾಗುವ ಶಾಸನವು ನಗರಿಗೆರಿ ತಾಮ್ರ ಶಾಸನ ಎಂಬ ತಲೆಬರಹವನ್ನು ಹೊಂದಿದೆ.

    ವಿಜಯನಗರದ ಅರಸ ಬುಕ್ಕಭೂಪತಿರಾಯರ ಆಜ್ಞೆಯಂತೆ ಎಮ್ಮೇಲೋರು ಗೋತ್ರದ ಆನೆಗೊಂದಿ ತಿಪ್ಪನಾಯಕನು ಬಹದ್ದೂರ್ ಮಲ್ಲಿಕನನ್ನು ಸೋಲಿಸಿ ರಾಯರಿಂದ ಬಹುಮತಿ ಮತ್ತು ಬಳುವಳಿ ಪಡೆಯುತ್ತಾನೆ. ನಂತರದ ಕಾಲಘಟ್ಟದಲ್ಲಿ ಆತನ ಸಂತತಿಯವರು ಗೂಟೂರು ಎಂಬಲ್ಲಿ ನೆಲೆ ನಿಂತಿದ್ದಾಗ ಸಮೀಪದ ಪೆನಗೊಂಡಗು ಮತ್ತು ಸೋಮಪುರಿ ಪಟ್ಟಣಕ್ಕೂ ಯುದ್ದ ಸಂಭವಿಸಿ ಅಲ್ಲಿದ್ದ ತಿಪ್ಪನಾಯಕನ ವಂಶಜರು ಸೋಮಪುರಿ ಪಟ್ಟಣವನ್ನು ಪೆನಗೊಂಡೆ ರಾಯರಿಗೆ ಗೆದ್ದುಕೊಡುತ್ತಾರೆ. ಅದಕ್ಕೆ ಪ್ರತಿಫಲವಾಗಿ ರಾಯರು ಅವರಿಗೆ ನಾರಸೀಮೆಯಲ್ಲಿ ಊರುಗಳನ್ನು ಕಟ್ಟಲು ಅನುಮತಿ ನೀಡುತ್ತಾನೆ. ಅದರಂತೆ ಅವರು ನಾರಸೀಮೆಯ ಮಲೆಯನ್ನು ಕಡಿದು ಊರನ್ನು ಕಟ್ಟುತ್ತಾರೆ. ಅದನ್ನು ‘12 ಅರ್ರಕೂಟ 10’ ಎಂದು ಗುರ್ತಿಸುತ್ತಾರೆ. ಅಲ್ಲಿ ಕೆರೆ ಮತ್ತು ದೇವಾಲಯಗಳ ಕಟ್ಟುತ್ತಾರೆ. ನಂತರ ಪೆದ್ದತಿಮ್ಮಳನಾಯಕ ಮತ್ತು ತಿರುಮಲ ನಾಯಕರು ಪರಿವಾರ ಸಮೇತರಾಗಿ ತಿರುಮಲಕ್ಕೆ ಹೋಗಿ ಸ್ವಾಮಿಯನ್ನು ಕರೆತಂದು ಕರ್ಕಾಟಕ ಲಗ್ನದಲ್ಲಿ ಗ್ರಾಮಕ್ಕೆ ತಮ್ಮ ‘ಅಳ್ಳೂರು’ ಎಂತಲೂ ಪ್ರತಿನಾಮ ‘ನಗರಿಗೆರಿ’ ಎಂತಲೂ ನಾಮಕರಣ ಮಾಡಿಸುತ್ತಾರೆ. ಗ್ರಾಮಕ್ಕೆ ಸರಹದ್ದುಗಳನ್ನು ಗುರ್ತಿಸಿ ಆಯಗಾರರನ್ನು ನೇಮಿಸಿ ತಾಮ್ರ ಶಾಸನವನ್ನು ರಚಿಸಿ ನಗರಿಗೆರಿ ಹನುಮಂತರಾಯ ದೇವಾಲಯದಲ್ಲಿ ಅಂಕೆ ಕೊಂಡಪುನಾಯಕನಿಗೆ ನೀಡುತ್ತಾರೆ. ಇದಕ್ಕೆ ಹನ್ನೆರಡು ಜನ ಆಯಗಾರರು ಒಪ್ಪುತ್ತಾರೆ ಎಂದು ತಿಳಿಸುತ್ತಾ ಶಾಸನ ಕೊನೆಗೊಳ್ಳುತ್ತದೆ.

    ಶಾಸನವು ಬುಕ್ಕಭೂಪತಿರಾಯರ ಬಿರುದಾವಳಿಗಳು ಸೋಮಪುರಿ ಪಟ್ಟಣದ ಮೇಲೆ ಯುದ್ದ ಮಾಡಿದವರು, ಗ್ರಾಮದ 12 ಜನ ಆಯಗಾರರು, ಅವರಿಗೆ ಕೊಟ್ಟ ಮಾನ್ಯದ ಭಾಗಗಳು, ಗ್ರಾಮದಲ್ಲಿ ಕಟ್ಟಿದ ದೇವಾಲಯಗಳು, ತಿಪ್ಪನಾಯಕನ ಸಂತತಿ, ಶಾಸನಗಳನ್ನು ಹಾಕಿಸಿದ ಸ್ಥಳಗಳ ಮಾಹಿತಿಯನ್ನು ಒಳಗೊಂಡಿದೆ ಎಂದಿದ್ದಾರೆ ಸಂಶೋದಕರು.

    ಈ ಶಾಸನವು ನಮಗೆ ಪಿತ್ರಾರ್ಜಿತವಾಗಿ ಬಂದಿದೆ. ತಿರುಪತಿ ತಿಮ್ಮಪ್ಪನ ಪ್ರತಿರೂಪವೆಂದು ನಾವು ಭಾವಿಸಿದ್ದು, ತಲೆಮಾರುಗಳ ಕಾಲದಿಂದ ಶ್ರದ್ಧಾಭಕ್ತಿಗಳಿಂದ ಪೂಜೆ ಮಾಡುತ್ತಿದ್ದೇವೆ. ಆದಾಗಿ ಮತ್ತೊಬ್ಬರಿಗೆ ತೋರಿಸುವ ಅಥವಾ ಮುಟ್ಟುವ ಅವಕಾಶ ಕೊಡುವುದಿಲ್ಲ ಎಂದು ಅನಿಲ್, ಹನುಮಂತನಹಳ್ಳಿ ಹೇಳಿದ್ದಾರೆ.

    ವರದಿ: ನಂದೀಶ್ ನಾಯ್ಕ, ಪಾವಗಡ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ಬೆಂಗಳೂರು: ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ 55 ವರ್ಷದ ಮಹಿಳೆಯ ಭೀಕರ ಕೊಲೆ

    January 15, 2026

    ಧಾರವಾಡ: ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಆತ್ಮಹತ್ಯೆ

    January 15, 2026

    ರಾಹುಲ್ ಗಾಂಧಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಡಿ: ಡಿ.ಕೆ.ಶಿವಕುಮಾರ್ ಸ್ಪಷ್ಟನೆ

    January 15, 2026

    Comments are closed.

    Our Picks

    ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ: ಅಯ್ಯಪ್ಪನ ಕಣ್ತುಂಬಿಕೊಳ್ಳಲು ಭಕ್ತರ ಸಾಗರ, ಕ್ಷಣಗಣನೆ ಆರಂಭ

    January 14, 2026

    ಆರ್‌ ಸಿಬಿ ತಂಡದ ಆಟಗಾರನಿಗೆ ಪೋಕ್ಸೋ ಸಂಕಷ್ಟ: ನಿರೀಕ್ಷಣಾ ಜಾಮೀನು ಅರ್ಜಿ ವಜಾ, ಬಂಧನ ಭೀತಿ

    December 25, 2025

    ಇಸ್ರೊ ಮೈಲಿಗಲ್ಲು: ಅತ್ಯಂತ ಭಾರವಾದ ಎಲ್‌ ವಿಎಂ3 ರಾಕೆಟ್ ಮೂಲಕ ‘ಬ್ಲೂಬರ್ಡ್’ ಉಪಗ್ರಹ ಉಡಾವಣೆ

    December 24, 2025

    ವಿಶ್ವಕಪ್ ಗೆದ್ದ ಭಾರತದ ಮಹಿಳಾ ತಂಡಕ್ಕೆ ಟಾಟಾ ಮೋಟಾರ್ಸ್‌ನಿಂದ ‘ಸಿಯೆರಾ’ ಕಾರು ಉಡುಗೊರೆ!

    December 17, 2025
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    ವಿದ್ಯಾರ್ಥಿದೆಸೆಯಲ್ಲಿ ನಾನು ಕಬಡ್ಡಿ ಪಟುವಾಗಿದ್ದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

    January 16, 2026

    ತುಮಕೂರು: ಜಿಲ್ಲೆಯ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು. ತುಮಕೂರಿನ ಯುವಜನತೆ ಇದರ ಸದುಪಯೋಗ ಪಡೆದು ವಿಶ್ವಮಟ್ಟದ ಕ್ರೀಡಾಪಟುಗಳು ಹೊರಹೊಮ್ಮಲಿ ಎಂದು…

    ಹಳೆವೈಷಮ್ಯ: ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ

    January 16, 2026

    ನಾಯಿ ಮೇಲೆ ದಾಳಿ ಮಾಡಿದ್ದ ಚಿರತೆ ಕೊನೆಗೂ ಸೆರೆ: ಗ್ರಾಮಸ್ಥರು ನಿರಾಳ

    January 16, 2026

    ಸಚಿವ ರಾಜಣ್ಣಗೆ ಸಿಗುತ್ತಾ ಮತ್ತೆ ಮಂತ್ರಿಗಿರಿ? ಸಿಎಂ ಸಿದ್ದರಾಮಯ್ಯ ನೀಡಿದ ಸುಳಿವೇನು?

    January 16, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.