nammatumakuru

    Subscribe to Updates

    Get the latest creative news from FooBar about art, design and business.

    What's Hot

    ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್

    October 15, 2026

    ಡೆಂಗೀ ಹಾಗೂ ಚಿಕೂನ್ ಗುನ್ಯ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಈ ಮಾಹಿತಿ ತಪ್ಪದೇ ಓದಿ!

    October 15, 2026

    ರುಡ್ ಸೆಟ್ ಸಂಸ್ಥೆ : ಫಾಸ್ಟ್ ಫುಡ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

    October 15, 2026
    Facebook Twitter Instagram
    ಟ್ರೆಂಡಿಂಗ್
    • ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್
    • ಡೆಂಗೀ ಹಾಗೂ ಚಿಕೂನ್ ಗುನ್ಯ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಈ ಮಾಹಿತಿ ತಪ್ಪದೇ ಓದಿ!
    • ರುಡ್ ಸೆಟ್ ಸಂಸ್ಥೆ : ಫಾಸ್ಟ್ ಫುಡ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ
    • ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು: ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಕುಟುಂಬ
    • ಅತಿಥಿ ಶಿಕ್ಷಕರ ನೇಮಕ: ಅರ್ಜಿ ಆಹ್ವಾನ
    • ಧಾರ್ಮಿಕ ಪರಂಪರೆಗೆ ಆಧುನಿಕ ಸ್ಪರ್ಶ: ತುಮಕೂರು ದಸರಾ ಉತ್ಸವದಲ್ಲಿ ಹೊಸ ಆಕರ್ಷಣೆಗಳು ಇವು 
    • ಸೊಳ್ಳೆಗಳ ಕಾಟಕ್ಕೆ ಮನೆಮದ್ದು ಪರಿಹಾರ!
    • WhatsApp ಬಳಕೆದಾರರೇ ಎಚ್ಚರ! ಈ 2 ಸೆಟ್ಟಿಂಗ್‌ ಆನ್ ಮಾಡಿ, ಸೈಬರ್ ವಂಚನೆಯ ಅಪಾಯ ತಗ್ಗಿಸಿ
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ವೈ.ಎನ್.ಹೊಸಕೋಟೆ : ಬುಕ್ಕರಾಯರ ಕಾಲದ ತಾಮ್ರ ಶಾಸನ ಪತ್ತೆ
    ರಾಜ್ಯ ಸುದ್ದಿ October 18, 2024

    ವೈ.ಎನ್.ಹೊಸಕೋಟೆ : ಬುಕ್ಕರಾಯರ ಕಾಲದ ತಾಮ್ರ ಶಾಸನ ಪತ್ತೆ

    By adminOctober 18, 2024No Comments2 Mins Read
    bukkaraya

    ವೈ.ಎನ್.ಹೊಸಕೋಟೆ : ಹೋಬಳಿಯ ಹನುಮಂತನಹಳ್ಳಿ ಗ್ರಾಮದ ಬಡಗಿ ತಿಮ್ಮರಾಯಪ್ಪರವರ ಮನೆಯಲ್ಲಿ ಬುಕ್ಕರಾಯರ ಕಾಲಕ್ಕೆ ಸಂಬಂದಿಸಿದ ತಾಮ್ರ ಶಾಸನ ಪತ್ತೆಯಾಗಿದೆ.

    ಈ ಭಾಗದ ಇತಿಹಾಸ ಸಂಶೋಧಕ ಹೊ.ಮ.ನಾಗರಾಜು ಸ್ಥಳೀಯ ಜಾನಪದ ಕಲಾವಿದರಾದ ಟಿ.ಎ.ಶಿವಣ್ಣರ ಸಹಕಾರದಿಂದ ಶಾಸನವನ್ನು ಪತ್ತೆಹಚ್ಚಿದ್ದಾರೆ. ಅಷ್ಟವಧಾನಿ ಗುರುವೇಪಲ್ಲಿ ನರಸಿಂಹುಲು ರವರ ಸಹಕಾರದಿಂದ ಶಾಸನವನ್ನು ಓದಲಾಗಿದ್ದು, ಗೌರಿಬಿದನೂರು ತಾಲ್ಲೂಕಿನಲ್ಲಿರುವ ನಗರಗೆರೆ ಗ್ರಾಮದ ರಚನೆಯ ವಿಷಯ ಒಳಗೊಂಡಿದೆ ಎಂದಿದ್ದಾರೆ.

    ಶಾಸನ ಫಲಕವು 12 ಇಂಚು ಎತ್ತರ 6 ಇಂಚು ಅಗಲ ಅಳತೆಯನ್ನು ಹೊಂದಿದೆ. ದಪ್ಪದ ತಾಮ್ರದ ಹಲಗೆಯ ಎರಡು ಮುಖಗಳ ಮೇಲೆ ಶಾಸನವನ್ನು ಕೆತ್ತಲಾಗಿದ್ದು, ಒಟ್ಟು 80 ಸಾಲುಗಳಿವೆ. ಅಕ್ಷರಗಳು ಕನ್ನಡ ಲಿಪಿಯಾಗಿದ್ದು, ತೆಲುಗು ಭಾಷೆಯನ್ನು ಒಳಗೊಂಡ ಶಾಸನ ಇದಾಗಿದೆ.

    ಗ್ರಾಮಕ್ಕೆ ರಾಮದೇವರುಗಳು ದಯಮಾಡಿದಾಗ ಬರೆದ ರುಜುವು ಎಂದು ಶಾಸನದ ಪ್ರಾರಂಭದ ಸಾಲುಗಳಲ್ಲಿ ತಿಳಿಸಲಾಗಿದೆ. ಆದರೆ ಶಾಸನದಲ್ಲಿ ಶಾಸನ ರಚನಾ ಕಾಲ ಲಭ್ಯವಿರುವುದಿಲ್ಲ. ನಿಡಗಲ್ಲು, ಹೊಸಕೋಟೆ ಹರತಿ ಪಾಳೇಗಾರರ ಮೂಲಪುರುಷನಾದ ಆನೆಗೊಂದಿಯ ತಿಪ್ಪನಾಯಕನು ಶಾಲಿ ಶಕ 1157 ರಲ್ಲಿ ಬಹದ್ದೂರ್ ಮಲ್ಲಿಕನ ಮೇಲೆ ಯುದ್ದ ಮಾಡಿ ಗೆದ್ದ ಎಂಬ ಉಲ್ಲೇಖವಿದೆ. ಇದರೊಟ್ಟಿಗೆ ಶಾಸನದಲ್ಲಿ ಬರುವ ಮಾನ್ಯಗಳ ಅಳತೆಯನ್ನು ವಿಜಯನಗರ ಕಾಲದ ನಾಣ್ಯಗಳಾದ ರಾಮ ಟಂಕಿಗಳು, ದುರ್ಗಿಗಳು ಮತ್ತು ಪುತಳಿಗಳಿಗಳಿಂದ ಗುರ್ತಿಸಲಾಗಿದೆ.

    ಆದಾಗಿ ಈ ಶಾಸನವು ವಿಜಯನಗರ ಕಾಲಘಟ್ಟದ ಶಾಸನವೆಂದು ತಿಳಿಯಬಹುದು. ಶಾಸನ ಪಾಠಾಂಶದಲ್ಲಿ ಅಕ್ಷರ ಮತ್ತು ಕಾಗುಣಿತ ದೋಷಗಳು ಬಹಳಷ್ಟಿದ್ದು ವಾಕ್ಯ ಜೋಡಣೆಯು ಅಲ್ಲಲ್ಲಿ ಅಸ್ಪಷ್ಟವಾಗಿದೆ. ಆದಾಗಿ ಮೇಲ್ಮೋಟಕ್ಕೆ ಇದೊಂದು ಕೂಟ ಶಾಸನವೆಂಬಂತೆ ಕಂಡುಬರುತ್ತಿದೆ ಎನ್ನುತ್ತಾರೆ ಸಂಶೋಧಕರು.

    ವೃಷಭ ಪತಿಗಾ ತೆಲಿಸಿತಿ ಎಂಬ ಬೀಜಾಕ್ಷರಗಳುಳ್ಳ ಮೂರು ಪಟ್ಟಿಯ ಚೌಕಟ್ಟಿನೊಂದಿಗೆ ಪ್ರಾರಂಭವಾಗುವ ಶಾಸನವು ನಗರಿಗೆರಿ ತಾಮ್ರ ಶಾಸನ ಎಂಬ ತಲೆಬರಹವನ್ನು ಹೊಂದಿದೆ.

    ವಿಜಯನಗರದ ಅರಸ ಬುಕ್ಕಭೂಪತಿರಾಯರ ಆಜ್ಞೆಯಂತೆ ಎಮ್ಮೇಲೋರು ಗೋತ್ರದ ಆನೆಗೊಂದಿ ತಿಪ್ಪನಾಯಕನು ಬಹದ್ದೂರ್ ಮಲ್ಲಿಕನನ್ನು ಸೋಲಿಸಿ ರಾಯರಿಂದ ಬಹುಮತಿ ಮತ್ತು ಬಳುವಳಿ ಪಡೆಯುತ್ತಾನೆ. ನಂತರದ ಕಾಲಘಟ್ಟದಲ್ಲಿ ಆತನ ಸಂತತಿಯವರು ಗೂಟೂರು ಎಂಬಲ್ಲಿ ನೆಲೆ ನಿಂತಿದ್ದಾಗ ಸಮೀಪದ ಪೆನಗೊಂಡಗು ಮತ್ತು ಸೋಮಪುರಿ ಪಟ್ಟಣಕ್ಕೂ ಯುದ್ದ ಸಂಭವಿಸಿ ಅಲ್ಲಿದ್ದ ತಿಪ್ಪನಾಯಕನ ವಂಶಜರು ಸೋಮಪುರಿ ಪಟ್ಟಣವನ್ನು ಪೆನಗೊಂಡೆ ರಾಯರಿಗೆ ಗೆದ್ದುಕೊಡುತ್ತಾರೆ. ಅದಕ್ಕೆ ಪ್ರತಿಫಲವಾಗಿ ರಾಯರು ಅವರಿಗೆ ನಾರಸೀಮೆಯಲ್ಲಿ ಊರುಗಳನ್ನು ಕಟ್ಟಲು ಅನುಮತಿ ನೀಡುತ್ತಾನೆ. ಅದರಂತೆ ಅವರು ನಾರಸೀಮೆಯ ಮಲೆಯನ್ನು ಕಡಿದು ಊರನ್ನು ಕಟ್ಟುತ್ತಾರೆ. ಅದನ್ನು ‘12 ಅರ್ರಕೂಟ 10’ ಎಂದು ಗುರ್ತಿಸುತ್ತಾರೆ. ಅಲ್ಲಿ ಕೆರೆ ಮತ್ತು ದೇವಾಲಯಗಳ ಕಟ್ಟುತ್ತಾರೆ. ನಂತರ ಪೆದ್ದತಿಮ್ಮಳನಾಯಕ ಮತ್ತು ತಿರುಮಲ ನಾಯಕರು ಪರಿವಾರ ಸಮೇತರಾಗಿ ತಿರುಮಲಕ್ಕೆ ಹೋಗಿ ಸ್ವಾಮಿಯನ್ನು ಕರೆತಂದು ಕರ್ಕಾಟಕ ಲಗ್ನದಲ್ಲಿ ಗ್ರಾಮಕ್ಕೆ ತಮ್ಮ ‘ಅಳ್ಳೂರು’ ಎಂತಲೂ ಪ್ರತಿನಾಮ ‘ನಗರಿಗೆರಿ’ ಎಂತಲೂ ನಾಮಕರಣ ಮಾಡಿಸುತ್ತಾರೆ. ಗ್ರಾಮಕ್ಕೆ ಸರಹದ್ದುಗಳನ್ನು ಗುರ್ತಿಸಿ ಆಯಗಾರರನ್ನು ನೇಮಿಸಿ ತಾಮ್ರ ಶಾಸನವನ್ನು ರಚಿಸಿ ನಗರಿಗೆರಿ ಹನುಮಂತರಾಯ ದೇವಾಲಯದಲ್ಲಿ ಅಂಕೆ ಕೊಂಡಪುನಾಯಕನಿಗೆ ನೀಡುತ್ತಾರೆ. ಇದಕ್ಕೆ ಹನ್ನೆರಡು ಜನ ಆಯಗಾರರು ಒಪ್ಪುತ್ತಾರೆ ಎಂದು ತಿಳಿಸುತ್ತಾ ಶಾಸನ ಕೊನೆಗೊಳ್ಳುತ್ತದೆ.

    ಶಾಸನವು ಬುಕ್ಕಭೂಪತಿರಾಯರ ಬಿರುದಾವಳಿಗಳು ಸೋಮಪುರಿ ಪಟ್ಟಣದ ಮೇಲೆ ಯುದ್ದ ಮಾಡಿದವರು, ಗ್ರಾಮದ 12 ಜನ ಆಯಗಾರರು, ಅವರಿಗೆ ಕೊಟ್ಟ ಮಾನ್ಯದ ಭಾಗಗಳು, ಗ್ರಾಮದಲ್ಲಿ ಕಟ್ಟಿದ ದೇವಾಲಯಗಳು, ತಿಪ್ಪನಾಯಕನ ಸಂತತಿ, ಶಾಸನಗಳನ್ನು ಹಾಕಿಸಿದ ಸ್ಥಳಗಳ ಮಾಹಿತಿಯನ್ನು ಒಳಗೊಂಡಿದೆ ಎಂದಿದ್ದಾರೆ ಸಂಶೋದಕರು.

    ಈ ಶಾಸನವು ನಮಗೆ ಪಿತ್ರಾರ್ಜಿತವಾಗಿ ಬಂದಿದೆ. ತಿರುಪತಿ ತಿಮ್ಮಪ್ಪನ ಪ್ರತಿರೂಪವೆಂದು ನಾವು ಭಾವಿಸಿದ್ದು, ತಲೆಮಾರುಗಳ ಕಾಲದಿಂದ ಶ್ರದ್ಧಾಭಕ್ತಿಗಳಿಂದ ಪೂಜೆ ಮಾಡುತ್ತಿದ್ದೇವೆ. ಆದಾಗಿ ಮತ್ತೊಬ್ಬರಿಗೆ ತೋರಿಸುವ ಅಥವಾ ಮುಟ್ಟುವ ಅವಕಾಶ ಕೊಡುವುದಿಲ್ಲ ಎಂದು ಅನಿಲ್, ಹನುಮಂತನಹಳ್ಳಿ ಹೇಳಿದ್ದಾರೆ.

    ವರದಿ: ನಂದೀಶ್ ನಾಯ್ಕ, ಪಾವಗಡ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q

    admin
    • Website

    Related Posts

    ರೈತರ ಬೇಡಿಕೆ ಈಡೇರುವವರೆಗೆ ಸಕ್ಕರೆ ಮುಟ್ಟಲ್ಲ! ಫಕೀರ ದಿಂಗಾಲೇಶ್ವರ ಸ್ವಾಮೀಜಿ ಪ್ರತಿಜ್ಞೆ

    October 14, 2026

    ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಹಿಂದೆ ಯಾರು? ಕೆ.ಎನ್.ರಾಜಣ್ಣ ಹೇಳಿದ್ದೇನು?

    October 14, 2026

    “ದಮ್ಮು, ತಾಕತ್ತು ಇದ್ದರೆ ಹೋರಾಟಕ್ಕೆ ಬನ್ನಿ”; ನಟ ಸುದೀಪ್‌ ಗೆ ಉಗ್ರಪ್ಪ ಸವಾಲು?

    October 14, 2026

    Comments are closed.

    Our Picks

    ಜಗನ್ನಾಥನ ರಥದ ಚಕ್ರ ಮನೆಗೆ ತರಬೇಕಾ? ಖರೀದಿಸಲು ಎಷ್ಟು ಹಣ ಕೊಡಬೇಕು?

    October 14, 2026

    ನಿಮ್ಮ ಮೊಬೈಲ್ ರೀಚಾರ್ಜ್‌ನಿಂದ ಟೆಲಿಕಾಂ ಕಂಪನಿಗಳಿಗೆ ಎಷ್ಟು ಲಾಭ?

    October 14, 2026

    ದೆಹಲಿಯ ಬೀದಿಯಲ್ಲಿ ಕಾರ್ಯಕರ್ತರೊಂದಿಗೆ ಸರಳತೆಯ ಸಹಭೋಜನ: ಜನರ ನಡುವಿನ ನಾಯಕ ಬಿ.ಕೆ. ಹರಿಪ್ರಸಾದ್

    October 13, 2026

    ‘We’re Sorry’: ಸಿಜೆಪಿ ನಾಯಕ ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಸುದ್ದಿ ಮುಟ್ಟಿಸಿದ ಪೊಲೀಸ್; ವೈರಲ್ ವೀಡಿಯೊ

    October 12, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕುಣಿಗಲ್

    ಸ್ವೀಟ್ ಅಂಗಡಿ, ರೆಸ್ಟೋರೆಂಟ್, ಹೋಟೆಲ್ ಗಳ ಮೇಲೆ ದಾಳಿ: ಸ್ವಚ್ಛತೆ ಇಲ್ಲ, ಹಳೆ ತರಕಾರಿ ಬಳಕೆ ಪತ್ತೆ: ನೋಟಿಸ್

    October 15, 2026

    ಕುಣಿಗಲ್: ತಾಲೂಕಿನ ವಿವಿಧೆಡೆ ಆಹಾರ ಸುರಕ್ಷತಾಧಿಕಾರಿ, ಆರೋಗ್ಯಾಧಿಕಾರಿ ಮತ್ತು ಅವರ ತಂಡ ಹೋಟೆಲ್, ರೆಸ್ಟೋರೆಂಟ್, ಹಾಟ್ ಚಿಪ್ಸ್, ಸ್ವೀಟ್ ಅಂಗಡಿ…

    ಡೆಂಗೀ ಹಾಗೂ ಚಿಕೂನ್ ಗುನ್ಯ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ವಹಿಸಿ: ಈ ಮಾಹಿತಿ ತಪ್ಪದೇ ಓದಿ!

    October 15, 2026

    ರುಡ್ ಸೆಟ್ ಸಂಸ್ಥೆ : ಫಾಸ್ಟ್ ಫುಡ್ ತಯಾರಿಕೆ ತರಬೇತಿಗೆ ಅರ್ಜಿ ಆಹ್ವಾನ

    October 15, 2026

    ಚಲಿಸುತ್ತಿರುವಾಗಲೇ ಹೊತ್ತಿ ಉರಿದ ಕಾರು: ಚಾಲಕನ ಸಮಯಪ್ರಜ್ಞೆಯಿಂದ ಬದುಕುಳಿದ ಕುಟುಂಬ

    October 15, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.