ತುಮಕೂರು: ಮತದಾರರ ಪಟ್ಟಿಯನ್ನು ಅತ್ಯಂತ ನಿಖರವಾಗಿಡುವ ನಿಮಿತ್ತ ಎಸ್.ಐ.ಆರ್. ಪ್ರಕ್ರಿಯೆಗೆ ಅಧಿಕೃತವಾಗಿ ಚಾಲನೆ ನೀಡಿ 15 ದಿನಗಳು ಕಳೆದಿವೆ. ಬಿ.ಎಲ್.ಓ.ಗಳು ಅವರ ಪರಿಮಿತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
ವಿದ್ಯಾನಗರ ಬಡಾವಣೆಯ ಪ್ರತಿ ರಸ್ತೆಯ ನಿವಾಸಿಗಳಲ್ಲಿ ಸರಿಯಾದ ಮಾಹಿತಿ ಇಲ್ಲದೆ ಅರ್ಜಿಗಳನ್ನು ನಿಖರವಾಗಿ ತುಂಬಲು ಹೆಣಗಾಡುತ್ತಿದ್ದಾರೆ. 2002ರ ಮತದಾನ ಮಾಡಿರುವ ಮಾಹಿತಿ ದೊರೆತಿಲ್ಲ. ಭಾಗ-1, 2 ಮತ್ತು 3ರಲ್ಲಿ ತುಂಬುವ ವಿಧಾನ ಹೇಗೆ ನೂರಕ್ಕೆ ನೂರು ನಿಖರ ಮಾಹಿತಿ ತುಂಬಿಕೊಡಲು ಸಾಧ್ಯವಾಗದೆ ಸರ್ಕಾರ ತೆರೆದಿರುವ ವಿವಿಧ ಸೇವಾ ಕೇಂದ್ರಗಳಿಗೆ ಭೇಟಿ ನೀಡಿದಾಗ ಸೂಕ್ತ ತಿಳುವಳಿಕೆ ಸಿಗದೆ, ಕೆಲವರು ಭರ್ತಿ ಮಾಡುವುದೇ ಬೇಡ ಎನ್ನುವ ಅಸಹಾಯಕತೆ ತೋರ್ಪಡಿಸಿದ್ದಾರೆ.
ಕುಟುಂಬದ ಸದಸ್ಯರು ಆಯಾ ಬಡಾವಣೆಯ ಮತಗಟ್ಟೆಯಲ್ಲಿ ಮತ ಚಲಾಯಿಸಲು ವ್ಯವಸ್ಥೆ ಆಗಬೇಕು. ಒಂದು ಕುಟುಂಬದ ಎಲ್ಲ ಸದಸ್ಯರ ಹೆಸರು ಒಂದೇ ಮತ ಕೇಂದ್ರದಲ್ಲಿ ಇರದೆ, ದಿಕ್ಕಾಪಾಲಾಗಿರುವುದನ್ನು ಸರಿಪಡಿಸಿ, ಹತ್ತಿರದ ಒಂದೇ ಮತ ಕೇಂದ್ರದಲ್ಲಿ ಸೇರ್ಪಡೆಯಾಗಿರಲಿ.
2002ರ ಮಾಹಿತಿ ಸಿಗದಿದ್ದರೆ ಕ್ರಮ ಏನು ಎನ್ನುವ ಮಾಹಿತಿಯನ್ನು ಮಾನ್ಯ ಆಯುಕ್ತರು, ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು. ಅಕ್ರಮ ವಲಸಿಗರಿಗೆ ಮತದಾನದ ಹಕ್ಕು ನಿರ್ಬಂಧಿಸಲು, ಮೂಲ ನಿವಾಸಿಗಳಿಗೆ ಹಕ್ಕು ಚಲಾಯಿಸಲು, ಭವಿಷ್ಯದಲ್ಲಿ ಕುಟುಂಬದ ಸೌಲಭ್ಯ ಪಡೆಯಲು ನಿಖರವಾಗಿ ಮಾಹಿತಿ ತುಂಬುವುದು ಅತ್ಯವಶ್ಯಕ ಎಂದು ವಿದ್ಯಾನಗರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎಸ್. ಕುಮಾರಸ್ವಾಮಿ ತಿಳಿಸಿದ್ದಾರೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC


