nammatumakuru

    Subscribe to Updates

    Get the latest creative news from FooBar about art, design and business.

    What's Hot

    2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

    September 6, 2026

    ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ

    September 6, 2026

    ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ

    September 6, 2026
    Facebook Twitter Instagram
    ಟ್ರೆಂಡಿಂಗ್
    • 2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ
    • ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ
    • ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ
    • ಪ್ರಜಾಸೇವಾ ಆಂದೋಲನದಲ್ಲಿ ಸಮಸ್ಯೆಗೆ ಪ್ರಾಮಾಣಿಕ ಸ್ಪಂದನೆ ಇಲ್ಲದಿದ್ದರೆ ಕ್ರಮ: ಅಧಿಕಾರಿಗಳಿಗೆ ಟಿ.ಬಿ.ಜಯಚಂದ್ರ ಎಚ್ಚರಿಕೆ
    • ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಹೊಸದಾಗಿ ಪ್ರಜಾ ಸೇವಾ ಇಲಾಖೆ ಸೃಜನೆ: ಡಿಸಿಎಂ ಡಾ.ಜಿ. ಪರಮೇಶ್ವರ
    • ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ 2026: ತುಮಕೂರು ನಗರದಲ್ಲಿ ಎಸ್ ಐಆರ್ ನೋಟೀಸ್ ವಿಚಾರಣೆ ಆರಂಭ
    • ಸೋಮಾರಿ ಅಧಿಕಾರಿಗಳನ್ನು ಬದಲಿಸದಿದ್ದರೆ ಸರ್ಕಾರದ ಯಾವ ಅಭಿಯಾನ ಬಂದು ಏನು ಪ್ರಯೋಜನ?
    • ಶೀಘ್ರದಲ್ಲೇ ಹಳೆಯ ಪಿಂಚಣಿ ಯೋಜನೆ (OPS) ಮರುಜಾರಿ: ಡಿಸಿಎಂ ಡಾ.ಜಿ. ಪರಮೇಶ್ವರ್
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಬಳ್ಳಾರಿ: ಎಸ್‌ ಐಆರ್ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ: ಗಣತಿ ನಮೂನೆ ಸಲ್ಲಿಕೆ ಕಡ್ಡಾಯ: ಜಿಪಂ ಸಿಇಒ
    ಜಿಲ್ಲಾ ಸುದ್ದಿ July 17, 2026

    ಬಳ್ಳಾರಿ: ಎಸ್‌ ಐಆರ್ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ: ಗಣತಿ ನಮೂನೆ ಸಲ್ಲಿಕೆ ಕಡ್ಡಾಯ: ಜಿಪಂ ಸಿಇಒ

    By adminJuly 17, 2026No Comments2 Mins Read
    sir

    ಬಳ್ಳಾರಿ: ಎಸ್‌ ಐಆರ್ ಅಂಗವಾಗಿ ಮನೆ ಮನೆಗೆ ವಿತರಿಸಲಾಗಿರುವ ಪ್ರಿ–ಪ್ರಿಂಟೆಡ್ ಭಾವಚಿತ್ರ ಹೊಂದಿರುವ ‘ಗಣತಿ ನಮೂನೆ’ ಅನ್ನು ಭರ್ತಿ ಮಾಡಿ ಸಲ್ಲಿಸುವುದು ಅತ್ಯಂತ ಕಡ್ಡಾಯವಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್ ಅವರ್ಕು ಹೇಳಿದರು.

    ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ಸಹಯೋಗದೊಂದಿಗೆ ನಗರದ ಮೊಹಮ್ಮದಿಯಾ ಹೈಸ್ಕೂಲ್ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ಗುರುವಾರ ಹಮ್ಮಿಕೊಂಡಿದ್ದ ‘ವಿಶೇಷ ತೀವ್ರ ಪರಿಷ್ಕರಣೆ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

    ಬಳ್ಳಾರಿಯಲ್ಲಿ ಸದ್ಯ ಶೇ. 30 ರಿಂದ 40 ರಷ್ಟು ಮಾತ್ರ ಫಾರ್ಮ್ ಗಳು ಸಲ್ಲಿಕೆಯಾಗಿದ್ದು, ಉಳಿದ ಶೇ. 60 ರಷ್ಟು ಜನರು ಇನ್ನೂ ಫಾರ್ಮ್ ಗಳನ್ನು ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಒಂದು ವೇಳೆ ಈ ಫಾರ್ಮ್ ಅನ್ನು ಸಲ್ಲಿಸದಿದ್ದರೆ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾಗುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು.

    ಕಾಲಾವಕಾಶ ವಿಸ್ತರಣೆ:

    ಕರ್ನಾಟಕದಲ್ಲಿ ಈ ಗಣತಿ ನಮೂನೆಗಳನ್ನು ಸಲ್ಲಿಸಲು ಈ ಹಿಂದೆ ಜುಲೈ ಅಂತ್ಯದವರೆಗೆ ಇದ್ದ ಗಡುವನ್ನು ಈಗ ಆಗಸ್ಟ್ 10 ರವರೆಗೆ ವಿಸ್ತರಿಸಲಾಗಿದೆ. ಸಾರ್ವಜನಿಕರು ತಮ್ಮ ಭಾಗದ ಬ್ಲಾಕ್ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣವೇ ಫಾರ್ಮ್ ಗಳನ್ನು ಸಲ್ಲಿಸುವಂತೆ ಕೋರಿದರು.

    ಪ್ರತಿ ಗಣತಿ ನಮೂನೆಯ ಮೇಲ್ಭಾಗದಲ್ಲಿಯೇ ಸಂಬಂಧಪಟ್ಟ ಬ್ಲಾಕ್ ಮಟ್ಟದ ಅಧಿಕಾರಿಯ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಲಾಗಿರುತ್ತದೆ. ಯಾವುದೇ ಗೊಂದಲಗಳಿದ್ದಲ್ಲಿ ಅವರನ್ನು ನೇರವಾಗಿ ಸಂಪರ್ಕಿಸಬಹುದು. ನಗರಗಳಿಗೆ ಕಾಯಂ ಆಗಿ ವಲಸೆ ಹೋದವರ ಹೆಸರನ್ನು ಸ್ಥಳೀಯ ಮತದಾರರ ಪಟ್ಟಿಯಿಂದ ತೆಗೆದುಹಾಕಿ, ಅವರು ಪ್ರಸ್ತುತ ಇರುವ ನಗರದ ಪಟ್ಟಿಗೆ ಸೇರಿಸಬೇಕಾಗುತ್ತದೆ. ಹಾಗೆಯೇ, ಮೃತಪಟ್ಟ ವ್ಯಕ್ತಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಅತ್ಯಗತ್ಯ. ಇಲ್ಲದಿದ್ದರೆ ಬೋಗಸ್ ಮತದಾನಕ್ಕೆ ದಾರಿಯಾಗಲಿದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

    ಹಾಗಾಗಿ ವಿದ್ಯಾರ್ಥಿಗಳು ತಮ್ಮ ಪೋಷಕರಿಗೆ, ನೆರೆಹೊರೆಯವರಿಗೆ ಹಾಗೂ ಸಂಬAಧಿಕರಿಗೆ ಎಸ್‌ಐಆರ್ ಫಾರ್ಮ್ ಅನ್ನು ನಿಖರವಾಗಿ ಭರ್ತಿ ಮಾಡಿ ಸಕಾಲದಲ್ಲಿ ಸಲ್ಲಿಸುವಂತೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡದ ಅವರು, ಮತದಾರರ ಪಟ್ಟಿಯಲ್ಲಿ ಯಾವುದೇ ತಪ್ಪುಗಳಿಲ್ಲದಂತೆ ದೋಷಮುಕ್ತ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದರು.

    ಜಿಪಂ ಉಪಕಾರ್ಯದರ್ಶಿ ಶಶಿಕಾಂತ್ ಶಿವಪುರೆ ಅವರು ಮಾತನಾಡಿ, 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕನಿಗೂ ಮತದಾನದ ಹಕ್ಕನ್ನು ಖಾತರಿಪಡಿಸುವ ಉದ್ದೇಶದಿಂದ ವಿಶೇಷ ತೀವ್ರ ಪರಿಷ್ಕರಣೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಿಮ್ಮ ಮನೆಗಳಲ್ಲಿ ಅಥವಾ ಸುತ್ತಮುತ್ತಲಿನ ಪರಿಸರದಲ್ಲಿ 18 ವರ್ಷ ಪೂರೈಸಿದರೂ, ಇನ್ನು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇರುವವರಿದ್ದರೆ, ತಕ್ಷಣವೇ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

    ಬರುವ ಜುಲೈ 29ರ ನಂತರ, ಸಾರ್ವಜನಿಕರು ಆನ್‌ ಲೈನ್ ಮೂಲಕ ಫಾರ್ಮ್ ನಂಬರ್ 6 ಅನ್ನು ಭರ್ತಿ ಮಾಡಿ ತಾವಾಗಿಯೇ ಸುಲಭವಾಗಿ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

    ಈ ವೇಳೆ ಜಿಪಂ ಸಹಾಯಕ ನಿರ್ದೇಶಕ ಬಸವರಾಜ್ ಹಿರೇಮಠ್, ಬಳ್ಳಾರಿ ತಾಲ್ಲೂಕು ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ ಬಾರೆಕರ, ಮೊಹಮ್ಮದಿಯ ಶಾಲಾ–ಕಾಲೇಜು ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮುಜಾಮಿಲ್ ಸೇರಿದಂತೆ ಬೋಧಕ– ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/ISmeQjik4LbG9KvWhKlbCC

    admin
    • Website

    Related Posts

    ಸಂತಪೂರ ಗ್ರಾಮದಲ್ಲಿ ‘ಪ್ರಜಾ ಸೇವಾ’ ಕಾರ್ಯಕ್ರಮ: ಕಾಲೇಜು ಸ್ಥಾಪನೆ ಹಾಗೂ ಸ್ತ್ರೀರೋಗ ತಜ್ಞರ ನೇಮಕಕ್ಕೆ ಮನವಿ

    September 5, 2026

    ಸ್ಪೋಟಕ ವರದಿ: ಹೊಳೆನರಸೀಪುರದಲ್ಲಿ ‘ರಸ್ತೆ ಬಂದ್’ ರಾಜಕೀಯ — ಜೆಡಿಎಸ್ ಸಾಮ್ರಾಜ್ಯಕ್ಕೆ ಸ್ವಯಂಕೃತ ಕಂಠಕ!

    September 5, 2026

    ಬೀದರ್: 40 ವರ್ಷಗಳ ಬಳಿಕ ಬೆಳಕುಣಿ (ಚೌದ್ರಿ) ಗ್ರಾಮದಲ್ಲಿ ಆರಂಭವಾಯಿತು ಅಭಿವೃದ್ಧಿ ಕಾಮಗಾರಿ; ಪಿಡಿಒ ಕಾರ್ಯಕ್ಕೆ ಶ್ಲಾಘನೆ

    September 5, 2026

    Leave A Reply Cancel Reply

    Our Picks

    ನೇಪಾಳ ಪ್ರವಾಹ: ತುಮಕೂರು ಮೂಲದ ಇಬ್ಬರು ನಾಪತ್ತೆ

    September 1, 2026

    ನೇಪಾಳದಲ್ಲಿ ಭೀಕರ ಪ್ರವಾಹದ ಅಬ್ಬರ: ಮತ್ತೊಂದು ಜಲಪ್ರಳಯದ ಭೀತಿ ಸೃಷ್ಟಿ

    August 28, 2026

    ಕಾವೇರಿ ನೀರು ವಿವಾದ: ಸುಪ್ರೀಂ ಕೋರ್ಟ್ ವಿಚಾರಣೆ ಬಳಿಕ ಮುಂದಿನ ನಡೆ ಕುರಿತು ನಿರ್ಧಾರ — ಸಚಿವ ರಾಮಲಿಂಗಾರೆಡ್ಡಿ

    August 13, 2026

    ಇತಿಹಾಸದಲ್ಲೇ ಪ್ರಥಮ: 80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯ ಮೇಲೆ ಮೊಳಗಲಿದೆ ‘ವಂದೇ ಮಾತರಂ’

    August 11, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ತುಮಕೂರು

    2 ತಿಂಗಳ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಪತಿಗೆ ಜೀವಾವಧಿ ಶಿಕ್ಷೆ

    September 6, 2026

    ತುಮಕೂರು: ಪತ್ನಿಯನ್ನು ಮಾಡಿದ ಗಂಡನಿಗೆ ನಗರದ 1ನೇ ಅಧಿಕ ಮತ್ತು ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿ ತೀರ್ಪು…

    ವಿದ್ಯೆಯ ಜೊತೆ ನೈತಿಕ ಮೌಲ್ಯ ಬೋಧಿಸಿ: ಸಿದ್ಧಗಂಗಾಮರ ಸನಿವಾಸ ಶಾಲೆಯ ಶಿಕ್ಷಕರ ದಿನಾಚರಣೆಯಲ್ಲಿ ಸಚಿವ ಈಶ್ವರ ಖಂಡ್ರೆ

    September 6, 2026

    ಮಧುಗಿರಿ: ತಿಂಗಳಲ್ಲಿ ಎರಡು ದಿನ ಪ್ರಜಾ ಸೇವೆ ಅಭಿಯಾನ

    September 6, 2026

    ಪ್ರಜಾಸೇವಾ ಆಂದೋಲನದಲ್ಲಿ ಸಮಸ್ಯೆಗೆ ಪ್ರಾಮಾಣಿಕ ಸ್ಪಂದನೆ ಇಲ್ಲದಿದ್ದರೆ ಕ್ರಮ: ಅಧಿಕಾರಿಗಳಿಗೆ ಟಿ.ಬಿ.ಜಯಚಂದ್ರ ಎಚ್ಚರಿಕೆ

    September 6, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.