nammatumakuru

    Subscribe to Updates

    Get the latest creative news from FooBar about art, design and business.

    What's Hot

    ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ

    November 12, 2026

    ಮದ್ಯದ ಅಮಲಿನಲ್ಲಿ ಹೇಳುವ ಮಾತೆಲ್ಲ ಸತ್ಯವೇ? ಮನೋವಿಜ್ಞಾನ ಹೇಳುವುದೇನು?

    November 12, 2026

    ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ

    November 12, 2026
    Facebook Twitter Instagram
    ಟ್ರೆಂಡಿಂಗ್
    • ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ
    • ಮದ್ಯದ ಅಮಲಿನಲ್ಲಿ ಹೇಳುವ ಮಾತೆಲ್ಲ ಸತ್ಯವೇ? ಮನೋವಿಜ್ಞಾನ ಹೇಳುವುದೇನು?
    • ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ
    • ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಕೊಡುತ್ತಿದ್ದೀರಾ? ಸುಪ್ರೀಂ ಕೋರ್ಟ್ ತೀರ್ಪು ತಿಳಿಯಿರಿ, ಈ ತಪ್ಪು ಮಾಡಬೇಡಿ!
    • ಮುದುಡಿ ಕೋಟೆ ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ₹1.5 ಲಕ್ಷ ಅನುದಾನ ಹಸ್ತಾಂತರ
    • ನವೆಂಬರ್ 15: ಮಧುಗಿರಿಯ ಸಿದ್ದಾಪುರದಲ್ಲಿ ಮಹಿಳೆಯರಿಂದ ‘ಸಂಕ್ಷಿಪ್ತ ಮಹಾಭಾರತ’ ಪೌರಾಣಿಕ ನಾಟಕ ಪ್ರದರ್ಶನ
    • ಅದ್ದೂರಿ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ: ಈ ಬಾರಿ ಬಾಗಿಲು ಮುಚ್ಚುವಾಗ ತಡವಾಗಿದ್ದೇಕೆ?
    • ದೀಪಾವಳಿಯ ಆಕಾಶ ಬುಟ್ಟಿ ಬಿದ್ದು 7 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ: ರೈತನ ಬಾಳಲ್ಲಿ ಕತ್ತಲು!
    Facebook Twitter Instagram YouTube
    nammatumakuru nammatumakuru
    Demo
    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕು ಸುದ್ದಿ
      • ಚಿಕ್ಕನಾಯಕನಹಳ್ಳಿ
      • ಗುಬ್ಬಿ
      • ಕೊರಟಗೆರೆ
      • ಕುಣಿಗಲ್
      • ಮಧುಗಿರಿ
      • ಪಾವಗಡ
      • ಸಿರಾ
      • ತಿಪಟೂರು
      • ತುಮಕೂರು
      • ತುರುವೇಕೆರೆ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ
    Demo
    nammatumakuru
    Home » ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ
    ಕೊರಟಗೆರೆ November 12, 2026

    ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ

    By adminNovember 12, 2026No Comments2 Mins Read
    lambani

    ವರದಿ: ಮಂಜುಸ್ವಾಮಿ ಎಂ.ಎನ್.

    ಕೊರಟಗೆರೆ: ದೀಪಾವಳಿ ಎಂದರೆ ಕೇವಲ ದೀಪಗಳ ಹಬ್ಬವಲ್ಲ. ಅದು ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಮಾನವೀಯ ಸಂಬಂಧಗಳನ್ನು ಬೆಸೆಯುವ ಸಂಭ್ರಮ. ಅದರಲ್ಲೂ ಲಂಬಾಣಿ ಸಮುದಾಯದ ಮೇರಾ– ದವಾಳಿ ಆಚರಣೆಯೇ ವಿಶಿಷ್ಟ ಸಾಂಸ್ಕೃತಿಕ ವೈಭವ. ಮನೆಮನೆಗೆ ದೀಪ ಬೆಳಗಿಸುವ ಮೂಲಕ ಹಿರಿಯರನ್ನು ಸ್ಮರಿಸುವುದು, ಪ್ರಕೃತಿಗೆ ಪೂಜೆ ಸಲ್ಲಿಸುವುದು ಹಾಗೂ ಸಾಮೂಹಿಕವಾಗಿ ಜಾನಪದ ನೃತ್ಯ ಮಾಡುವ ಮೂಲಕ ಸಮುದಾಯದ ಒಗ್ಗಟ್ಟನ್ನು ಸಾರುವುದು ಈ ಹಬ್ಬದ ವಿಶೇಷತೆ.

    ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಅರಸಾಪುರ ಹಾಗೂ ಬಿ.ಡಿ.ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾದೇನಹಳ್ಳಿ, ಅರಸಾಪುರ ಮತ್ತು ಔದಾರನಹಳ್ಳಿ ಲಂಬಾಣಿ ತಾಂಡಗಳಲ್ಲಿ ಮೂರು ದಿನಗಳ ಕಾಲ ಮೇರಾ–ದವಾಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.

    ಮನೆ ಮನೆಗೆ ಮೇರಾ ಹಿರಿಯರಿಗೆ ಗೌರವ!

    ಅಮಾವಾಸ್ಯೆಯಂದು ಲಂಬಾಣಿ ಸಮುದಾಯದ ಮಹಿಳೆಯರು ಸಾಂಪ್ರದಾಯಿಕ ವರ್ಣರಂಜಿತ ಉಡುಗೆ ತೊಟ್ಟು, ಕೈಯಲ್ಲಿ ಹಣತೆ ಹಿಡಿದು ತಾಂಡದ ಪ್ರತಿಯೊಂದು ಮನೆಗೂ ಭೇಟಿ ನೀಡುತ್ತಾರೆ. ಹಿರಿಯರನ್ನು ಸ್ಮರಿಸಿ ಗೌರವ ಸಲ್ಲಿಸುವ ಈ ಆಚರಣೆಗೆ ಮೇರಾ ಎಂದು ಕರೆಯಲಾಗುತ್ತದೆ. ದೇವಾಲಯದ ಮುಂದೆ ಮಹಿಳೆಯರು ಸಾಮೂಹಿಕವಾಗಿ ಲಂಬಾಣಿ ಜಾನಪದ ಹಾಡುಗಳನ್ನು ಹಾಡಿ ನೃತ್ಯ ಮಾಡುವ ದೃಶ್ಯ ತಾಂಡದ ಸಾಂಸ್ಕೃತಿಕ ಸೊಬಗನ್ನು ಹೆಚ್ಚಿಸುತ್ತದೆ. ದೀಪಾವಳಿ ಪಾಡ್ಯದಂದು ಹಿರಿಯರು, ಜಾನುವಾರುಗಳು ಹಾಗೂ ಪ್ರಕೃತಿಯ ವಿವಿಧ ಶಕ್ತಿಗಳನ್ನು ಸ್ಮರಿಸಿ ಪೂಜೆ ಸಲ್ಲಿಸುವ ಸಂಪ್ರದಾಯವೂ ಲಂಬಾಣಿ ಸಮುದಾಯದಲ್ಲಿದೆ. ಗಾಳಿ, ಬೆಳಕು, ಚಂದ್ರ, ಸೂರ್ಯ ಸೇರಿದಂತೆ ಪ್ರಕೃತಿಯ ಮಹತ್ವವನ್ನು ಸಾರುವ ಈ ಆಚರಣೆ ಪರಂಪರೆಯ ಮೇಲಿನ ಸಮುದಾಯದ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.

    ಜನರೊಂದಿಗೆ ಬೆರೆತ ಎಂಎನ್‌ ಜೆ ಮಂಜುನಾಥ್

    ಮೇರಾ–ದವಾಳಿ ಸಂಭ್ರಮದಲ್ಲಿ ಭಾಗವಹಿಸಿದ ಸಮಾಜಸೇವಕ ಎಂಎನ್‌ ಜೆ ಮಂಜುನಾಥ್ ಮಾತನಾಡಿ, ಲಂಬಾಣಿ ಸಮುದಾಯದ ದೀಪಾವಳಿ ಆಚರಣೆಯಲ್ಲಿ ಹಿರಿಯರಿಗೆ ನೀಡುವ ಗೌರವ ಮತ್ತು ಮಹಿಳೆಯರು ಮನೆಮನೆಗೆ ತೆರಳಿ ದೀಪ ಬೆಳಗಿಸುವ ಸಂಪ್ರದಾಯ ನನಗೆ ಅತ್ಯಂತ ಮೆಚ್ಚುಗೆಯಾಗಿದೆ. ಇಂತಹ ಆಚರಣೆಗಳು ಸಮುದಾಯದ ಒಗ್ಗಟ್ಟು, ಸಂಸ್ಕೃತಿ ಮತ್ತು ಪರಂಪರೆಯನ್ನು ಜೀವಂತವಾಗಿರಿಸುತ್ತವೆ. ಬಂಜಾರ ಸಮುದಾಯದ ಈ ಮಹತ್ವದ ಹಬ್ಬವು ಮುಂದಿನ ಪೀಳಿಗೆಗೂ ಮಾದರಿಯಾಗುವಂತೆ ಇನ್ನಷ್ಟು ವೈಭವದಿಂದ ನಡೆಯಲಿ ಎಂದು ಹಾರೈಸಿದರು.

    ಕೊರಟಗೆರೆ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಮುಂದೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸುವುದು, ಬಡವರ ಪರವಾಗಿ ನಿಲ್ಲುವುದು ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿಗೆ ಶ್ರಮಿಸುವುದೇ ತಮ್ಮ ಆಶಯವಾಗಿದೆ ಎಂದು ತಿಳಿಸಿದರು.

    ಹಬ್ಬದ ಸಂಭ್ರಮಕ್ಕೆ ಮೂರು ದಿನಗಳ ಸಾಂಸ್ಕೃತಿಕ ಮೆರುಗು

    ಮಾದೇನಹಳ್ಳಿ ತಾಂಡದ ಮುಖಂಡ ಹಾಗೂ ಗುತ್ತಿಗೆದಾರ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲಾ ಪಂಚಾಯಿತಿ ಕ್ಷೇತ್ರದ ಆಕಾಂಕ್ಷಿಯಾಗಿರುವ ಎಂಎನ್‌ ಜೆ ಮಂಜುನಾಥ್ ಅವರು ಕಳೆದ ಹತ್ತು ವರ್ಷಗಳಿಂದ ಕೊರಟಗೆರೆ ಕ್ಷೇತ್ರದಲ್ಲಿ ಸಮಾಜಸೇವೆಯ ಮೂಲಕ ಜನರೊಂದಿಗೆ ಗುರುತಿಸಿಕೊಂಡಿದ್ದಾರೆ. ಬಡವರು ಮತ್ತು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಅವರ ಸೇವಾ ಮನೋಭಾವ ಮುಂದಿನ ದಿನಗಳಲ್ಲಿಯೂ ಜನರ ವಿಶ್ವಾಸಕ್ಕೆ ಪಾತ್ರವಾಗಲಿದೆ ಎಂದರು.

    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಗಂಗಾಧರಯ್ಯ, ವೆಂಕಟರೆಡ್ಡಿ, ಮಂಜುನಾಥ್, ಕೃಷ್ಣಮೂರ್ತಿ, ರಾಮಕೃಷ್ಣನಾಯ್ಕ, ಜಯಣ್ಣ, ಸಿದ್ದಪ್ಪ, ರಾಯವಾರ ರಾಮಕೃಷ್ಣ, ವಿಜಯ್‌ಶಂಕರ್, ರಾಮಸ್ವಾಮಿ, ಗಂಗಾಧರ, ಚಂದ್ರುನಾಯ್ಕ, ಗೋಪಾಲನಾಯ್ಕ, ಜಯರಾಮ, ಗಂಗಾನಾಯ್ಕ, ಸುರೇಶನಾಯ್ಕ, ವೆಂಕಟೇಶನಾಯ್ಕ, ವಸಂತನಾಯ್ಕ ಸೇರಿದಂತೆ ಹಲವು ಮುಖಂಡರು ಹಾಗೂ ತಾಂಡದ ನಿವಾಸಿಗಳು ಭಾಗವಹಿಸಿದ್ದರು.

    ಲಂಬಾಣಿ ಸಮುದಾಯದ ದೀಪಾವಳಿ ಹಬ್ಬಕ್ಕೆ ಎಂಟು ದಿನಗಳ ಮುಂಚಿತವಾಗಿ ತಾಂಡದ ನಾಯಕ, ಕಾರಭಾರಿ, ಡಾವ್, ಸಾಣ್ ಹಾಗೂ ಪ್ರಮುಖರು ಸಭೆ ಸೇರಿ ಹಬ್ಬದ ಸಿದ್ಧತೆಗಳ ಕುರಿತು ಚರ್ಚಿಸುತ್ತಾರೆ. ಮೂರು ದಿನಗಳ ಆಚರಣೆಯಲ್ಲಿ ಕಾಳಿಮಾಸ್, ಮೇರಾ ಸಂಭ್ರಮ ಹಾಗೂ ಧಬುಕಾರ್ ಕಾರ್ಯಕ್ರಮಗಳು ನಡೆಯುತ್ತವೆ. ಅಮಾವಾಸ್ಯೆಯಂದು ಮಹಿಳೆಯರು ಹಣತೆ ಹಿಡಿದು ಮನೆಮನೆಗೆ ತೆರಳಿ ಹಿರಿಯರನ್ನು ಸ್ಮರಿಸುತ್ತಾರೆ. ಪ್ರಕೃತಿಗೆ ಪೂಜೆ ಸಲ್ಲಿಸುವುದು ಈ ಹಬ್ಬದ ಪ್ರಮುಖ ವಿಶೇಷತೆ.

    — ತಾವರನಾಯ್ಕ, ಹಿರಿಯ ನಾಯಕ, ಮಾದೇನಹಳ್ಳಿ ತಾಂಡ

    ಜಿಲ್ಲಾ ಪಂಚಾಯಿತಿ ಕ್ಷೇತ್ರದ ಆಕಾಂಕ್ಷಿಯಾಗಿರುವ ಎಂಎನ್‌ಜೆ ಮಂಜುನಾಥ್ ಅವರು ಕಳೆದ ಹತ್ತು ವರ್ಷಗಳಿಂದ ಕೊರಟಗೆರೆ ಕ್ಷೇತ್ರದಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಡವರು ಮತ್ತು ಸಾಮಾನ್ಯ ಜನರ ಪರವಾಗಿ ನಡೆಸುತ್ತಿರುವ ಸೇವಾ ಕಾರ್ಯಗಳು ಅವರಿಗೆ ಜನರ ಬೆಂಬಲ ತಂದುಕೊಡಲಿವೆ.

    — ಕೃಷ್ಣಮೂರ್ತಿ, ಮುಖಂಡರು, ಮಾದೇನಹಳ್ಳಿ ತಾಂಡ


    ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.

    ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/CtZPUt7bwkaJkX2T6hAwZI

    admin
    • Website

    Related Posts

    ಅರಸಪುರದಲ್ಲಿ ಪ್ರಜಾಸೇವಾ ಅಭಿಯಾನ: 101 ಅರ್ಜಿ ಸಲ್ಲಿಕೆ | 20 ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ; ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿದ ತಾಲೂಕು ಆಡಳಿತ

    November 8, 2026

    ಜೆಜೆಎಂನಲ್ಲಿ ತುಮಕೂರು ಕ್ಷೇತ್ರಕ್ಕೆ 5ನೇ ಸ್ಥಾನ:  20ನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಪ್ರಗತಿ; ತುಮಕೂರು–ಬೆಂಗಳೂರು ರೈಲು ಮಾರ್ಗಕ್ಕೂ ಡಿಪಿಆರ್ ಸಿದ್ಧ

    November 8, 2026

    ಕೆ.ಎನ್.ರಾಜಣ್ಣನ ವಿರುದ್ಧ ಅವಹೇಳನಕಾರಿ ಹೇಳಿಕೆ ನಿಲ್ಲಿಸಿ: ಸಚಿವ ಬಾಲಕೃಷ್ಣಗೆ ಸಿದ್ದಗಂಗಪ್ಪ ಎಚ್ಚರಿಕೆ

    November 6, 2026

    Leave A Reply Cancel Reply

    Our Picks

    ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ

    November 12, 2026

    Gmail ಸ್ಟೋರೇಜ್ ಫುಲ್ ಆಗಿದೆಯೇ? ಉಚಿತ 15 GB ಜಾಗ ಖಾಲಿ ಮಾಡಲು ಇಲ್ಲಿವೆ 4 ಸರಳ ವಿಧಾನಗಳು!

    November 11, 2026

    ಅನ್ನಾ  ಜೊತೆಗಿನ ವೈವಾಹಿಕ ಸಂಬಂಧಕ್ಕೆ ಅಂತ್ಯ ಹಾಡಿದ ಪವನ್ ಕಲ್ಯಾಣ್ : 4ನೇ ಮದುವೆ ಆಗ್ತಾರಾ? ಜ್ಯೋತಿಷಿಗಳ ಭವಿಷ್ಯ ಏನು?

    November 11, 2026

    ರೈಲು ಬೋಗಿಗಳ ಆಯಸ್ಸು ಮುಗಿದ ಬಳಿಕ ಏನಾಗುತ್ತೆ? ರೈಲ್ವೆಯ ಈ ಮರುಬಳಕೆ ತಂತ್ರ ಗೊತ್ತೇ?

    November 10, 2026
    Stay In Touch
    • Facebook
    • Twitter
    • Pinterest
    • Instagram
    • YouTube
    • Vimeo
    Don't Miss
    ಕೊರಟಗೆರೆ

    ಮನೆಮನೆಗೆ ಮೇರಾ ದೀಪ.. ತಾಂಡಗಳಲ್ಲಿ ಸಂಸ್ಕೃತಿಯ ಸಡಗರ | ಲಂಬಾಣಿ ಸಮುದಾಯದ ಮೂರು ದಿನಗಳ ದವಾಳಿ ಸಂಭ್ರಮ

    November 12, 2026

    ವರದಿ: ಮಂಜುಸ್ವಾಮಿ ಎಂ.ಎನ್. ಕೊರಟಗೆರೆ: ದೀಪಾವಳಿ ಎಂದರೆ ಕೇವಲ ದೀಪಗಳ ಹಬ್ಬವಲ್ಲ. ಅದು ಸಂಸ್ಕೃತಿ, ಸಂಪ್ರದಾಯ, ಪರಂಪರೆ ಮತ್ತು ಮಾನವೀಯ…

    ಮದ್ಯದ ಅಮಲಿನಲ್ಲಿ ಹೇಳುವ ಮಾತೆಲ್ಲ ಸತ್ಯವೇ? ಮನೋವಿಜ್ಞಾನ ಹೇಳುವುದೇನು?

    November 12, 2026

    ಶಬರಿಮಲೆ ಯಾತ್ರಿಕರಿಗೆ ಮಹತ್ವದ ಮಾಹಿತಿ; ಕೊಠಡಿ ಬುಕ್ಕಿಂಗ್‌ ಗೆ ದಿನಾಂಕ ನಿಗದಿ; ಬುಕ್ಕಿಂಗ್ ವಿಧಾನ ಇಲ್ಲಿದೆ

    November 12, 2026

    ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ಜೆರಾಕ್ಸ್ ಕೊಡುತ್ತಿದ್ದೀರಾ? ಸುಪ್ರೀಂ ಕೋರ್ಟ್ ತೀರ್ಪು ತಿಳಿಯಿರಿ, ಈ ತಪ್ಪು ಮಾಡಬೇಡಿ!

    November 12, 2026

    Subscribe to Updates

    Get the latest creative news from SmartMag about art & design.

    ನಮ್ಮ ಬಗ್ಗೆ
    ನಮ್ಮ ಬಗ್ಗೆ

    Golana Enterprises
    Siddagirinagara, Madhugiri Road
    Yellapura, Tumakuru - 572 106

    ಉಪಯುಕ್ತ ಲಿಂಕ್ಸ್

    • ಮುಖಪುಟ
    • ರಾಜ್ಯ ಸುದ್ದಿ
    • ಜಿಲ್ಲಾ ಸುದ್ದಿ
    • ತಾಲೂಕುಸುದ್ದಿ
    • ಉದ್ಯೋಗ
    • ಸ್ಪೆಷಲ್ ನ್ಯೂಸ್
    • ಆರೋಗ್ಯ
    • ಲೇಖನ

    ನಮ್ಮನ್ನು ಸಂಪರ್ಕಿಸಿ

    nammatumakuru9@gmail.com
    +91 97417 17700
    Facebook Twitter Instagram Pinterest
    • Home
    • Lifestyle
    • Arts & Culture
    • Travel
    • Buy Now
    • Privacy Policy
    Copyright © 2026 | All Right Reserved nammatumakuru.com.
    Powerd By Eappsi.com

    Type above and press Enter to search. Press Esc to cancel.