ತಿಪಟೂರು: ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಸಾರ್ಥವಳ್ಳಿ ಪ್ರಾಥಮಿಕ ಕೃಷಿ ಸಹಕಾರಿ ನಿಯಮಿತದಲ್ಲಿ ಕೋಟ್ಯಂತರ ರೂ.ಗಳ ದುರ್ಬಳಕೆಯಾಗಿದೆ ಎಂದು ನಿಯಮಿತದ ಸಿಇಒ ಮತ್ತು ಅಧ್ಯಕ್ಷರ ವಿರುದ್ಧ ನಿಯಮಿತದ ಆಡಳಿತ ಮಂಡಳಿ ನಿರ್ದೇಶಕ ನಾಗರಾಜ್ ಆರೋಪಿಸಿದರು.
ನಗರದ ಸಹಕಾರ ಇಲಾಖೆಯ ಕಚೇರಿ ಮುಂದೆ ಅವರು ಮಾತನಾಡಿದರು. ಇದೇ ವೇಳೆ ಮಾತನಾಡಿದ ಉಪಾಧ್ಯಕ್ಷ ವಿನಯ್ ಮತ್ತು ನಿರ್ದೇಶಕ ಪ್ರಕಾಶ್ ಯಾದವ್, ಸಾಮಾನ್ಯ ಸಭೆಯನ್ನು ಕೇಂದ್ರ ಸ್ಥಾನ ಬಿಟ್ಟು ಅಧ್ಯಕ್ಷರ ಊರಾದ ಕಲ್ಕೆರೆಯಲ್ಲಿ ಗ್ರಾಮ ಸಭೆಯನ್ನು ಆಯೋಜಿಸಿ, ನಿಯಮ ಉಲ್ಲಂಘಿಸಲಾಗಿದೆ. ಆರೋಪ ಸಾಬೀತಾದಲ್ಲಿ ನಿಯಮಿತವನ್ನು ಸೂಪರ್ ಸೀಡ್ ಮಾಡಬೇಕೆಂದು ಅವರು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಚಂದ್ರಶೇಖರ್ ಮತ್ತು ದೇವಿರಮ್ಮ, ಮಾಜಿ ನಿರ್ದೇಶಕ ನಾಗರಾಜ್ ಹಾಗೂ ಗ್ರಾಮಸ್ಥ ರಾಜಣ್ಣ ಸೇರಿದಂತೆ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy