ತಿಪಟೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಸಭೆ ತಿಪಟೂರು , ಸಮಗ್ರ ಶಿಶು ಅಭಿವೃದ್ಧಿ ಯೋಜನೆ ತಿಪಟೂರು ಹಾಗೂ ಗ್ರಾಮ ಪಂಚಾಯಿತಿ ಈಚನೂರು ವತಿಯಿಂದ ಆಯೋಜಿಸಲಾಗಿದ್ದ ಅಂಗನವಾಡಿ ಕಟ್ಟಡಗಳನ್ನು ಸಚಿವ ಬಿ.ಸಿ.ನಾಗೇಶ್ ಉದ್ಘಾಟಿಸಿದರು.
ಆರ್. ಐ. ಡಿ. ಎಫ್. -22 ರ ಯೋಜನೆಯಡಿಯಲ್ಲಿ ರೂ 9.17 ಲಕ್ಷ ಅಂದಾಜು ಮೊತ್ತ ಅನುದಾನದಲ್ಲಿ ತಿಪಟೂರು ನಗರಸಭಾ ವ್ಯಾಪ್ತಿಯ ತಮಿಳು ಕಾಲನಿ-ಬಿ, ಚಿಕ್ಕಲಕ್ಕಿಪಾಳ್ಯ ಹಾಗೂ ಈಚನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಡಿಹಳ್ಳಿ ಕಾವಲು ಅಂಗನವಾಡಿ ಕೇಂದ್ರಗಳ ಕಟ್ಟಡವನ್ನು ನೂತನವಾಗಿ ನಿರ್ಮಿಸಲಾಗಿತ್ತು.
ನಗರಸಭೆ ಅಧ್ಯಕ್ಷ ಪಿ. ಜೆ. ರಾಮ್ ಮೋಹನ್, ಉಪಾಧ್ಯಕ್ಷ ಗಣೇಶ್ , ನಗರಸಭಾ ಸದಸ್ಯರಾದ ಲತಾ ಲೋಕೇಶ್ , ಜೈರಾಜು, ಮೋಹನ್ ರಾಜು, ಈಚನೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಎಸ್., ಗ್ರಾಮ ಪಂಚಾಯಿತಿ ಸದಸ್ಯರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪಿ. ಓಂಕಾರಪ್ಪ, ಹಾಗೂ ಸಿದ್ದೇಶ್ ಇಂಜಿನಿಯರ್ ನಿರ್ಮಿತಿ ಕೇಂದ್ರ ತುಮಕೂರು ಮೊದಲಾದವರು ಇದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy