ತುರುವೇಕೆರೆ: ತಾಲ್ಲೂಕು ದಂಡಿನಶಿವರ ಹೋಬಳಿಯ ಚಿಮ್ಮನಹಳ್ಳಿ ಶ್ರೀಮುನೇಶ್ವರ ದಾಸೋಹಮಠಕ್ಕೆ ಮಠದ ಆವರಣದಲ್ಲಿ ನಡೆಯುತ್ತಿರುವ ವಿವಿಧ ದೇವರುಗಳ ದೇವಾಲಯಗಳ ಅಭಿವೃದ್ಧಿ ವೀಕ್ಷಣೆಗಾಗಿ ಮಾಜಿ ವಿಧಾನ ಪರಿಷತ್ತಿನ ಸದಸ್ಯ ಬೆಮೇಲ್ ಕಾಂತರಾಜು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದಾಸೋಹ ಮಠದ ಉಸ್ತುವಾರಿ ಹಾಗೂ ಕಾರ್ಯದರ್ಶಿಗಳಾದ ಸಿ.ಆರ್.ಶಿವಪ್ಪ ಅವರು ಕಾಂತರಾಜು ಅವರನ್ನು ಸನ್ಮಾನಿಸಿ, ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬೆಮೆಲ್ ಕಾಂತರಾಜು, ಈ ಕುಗ್ರಾಮದಲ್ಲಿ ಶಿವಪ್ಪರವರು ಶಿಕ್ಷಣಕ್ಕೆ ಅಕ್ಕ ಪಕ್ಕದ ಹಳ್ಳಿಗಳ ಬಡ ಮಕ್ಕಳ ಹಿತ ದೃಷ್ಟಿಯಿಂದ ಮಠವನ್ನು ಸ್ಥಾಪಿಸಿ ಕೈಲಾದಷ್ಟು ಸೇವೆ ನೀಡುತ್ತಿದ್ದಾರೆ. ಈ ಮಠದ ವಠಾರದಲ್ಲಿ ಹಲವಾರು ದೇವಾಲಯವನ್ನು ಸ್ಥಾಪಿಸುವ ಮೂಲಕ ಜನರಿಗೆ ದೇವರ ದರ್ಶನ ಇಲ್ಲೇ ಸಿಗುವಂತೆ ಮಾಡಬಹುದಾಗಿದೆ ಎಂದರು.
ಕೊರೊನಾ ಮಹಾಮಾರಿಯಿಂದ ಶಾಲೆಯಲ್ಲಿ ಮಕ್ಕಳ ಹಾಜರಿ ಕಡಿಮೆಯಾಗಿದ್ದು, ಮುಂದಿನ ದಿನದಲ್ಲಿ ದಾಖಲಾತಿ ಹೆಚ್ಚಾಗಲಿ, ಮಠವು ಉನ್ನತಿಯನ್ನು ಕಾಣಲಿ, ಭಕ್ತರ ಸಂಖ್ಯೆ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಠದ ಅಧಿಕಾರಿ ಸಿ.ಆರ್.ಶಿವಪ್ಪ, ತುರುವೇಕೆರೆ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಶಿಶೇಖರ್, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಗೋಣಿ ತುಮಕೂರು ಕಾಂತರಾಜು, ತಾವರೇಕೆರೆ ದಾನಿಗೌಡ್ರು, ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷರಾದ ಅಂಜನಪ್ಪ , ಪ್ರಕಾಶ್ , ಕುಂದುರು ತಿಮ್ಮಯ್ಯ, ರಾಮು ಹೆಗ್ಗೆರೆ, ಮುನಿಯಪ್ಪ, ಬಡಾವಣೆ ಶಿವಣ್ಣ ,ಚಿಮ್ಮನಹಳ್ಳಿ ರಾಮಣ್ಣ, ಮಠದ ಅಭಿವೃದ್ಧಿ ಅಧಿಕಾರಿ ಪ್ರಜ್ವಲ್ ಶಿವಯ್ಯ ಹಾಗೂ ಮಠದ ಸಿಬ್ಬಂದಿ ಹಾಜರಿದ್ದರು.
ವರದಿ: ಸುರೇಶ್ ಬಾಬು. ಎಂ.ತುರುವೇಕೆರೆ
ನಮ್ಮತುಮಕೂರು.ಕಾಂನ ಕ್ಷಣ ಕ್ಷಣದ ಸುದ್ದಿಗಳನ್ನು ಪಡೆದುಕೊಳ್ಳಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 9686399493 ನಂಬರ್ ಸೇರಿಸಿಕೊಳ್ಳಿ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/L4EDpegaxhmLTkOnd50sAy