ತಿಪಟೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಿಪಟೂರು ತಾಲೂಕಿನ ಕಸಬಾ ವಲಯದ ಸಿ ಬಡಾವಣೆ ಕಾರ್ಯಕ್ಷೇತ್ರದ ಗಾಂಧಿನಗರ 4ನೇ ಕ್ರಾಸ್ ನಲ್ಲಿ ವಾಸವಾಗಿರುವ ಕವಿತ ರವರ ಮನೆ ರಿಪೇರಿ ಮಾಡಿ ಹಸ್ತಾಂತರ ಕಾರ್ಯಕ್ರಮವನ್ನು ಸ್ಥಳೀಯ ನಗರ ಸಭೆಯ ಸದಸ್ಯರಾದ ಮುನ್ನಾಫ್ H ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಧರ್ಮಸ್ಥಳ ಯೋಜನೆಯ ಕಾರ್ಯಕ್ರಮದಿಂದ ಸಮಾಜದಲ್ಲಿ ಇರುವ ಬ್ಯಾಂಕ್ ಸೌಲಭ್ಯದಿಂದ ವಂಚಿತರಾದ ಕುಟುಂಬದವರಿಗೆ ಯಾವುದೇ ದಾಖಲಾತಿ ಇಲ್ಲದೆ ಬ್ಯಾಂಕ್ ಸೌಲಭ್ಯ ಒದಗಿಸುತ್ತಿರುವ ಸಂಸ್ಥೆ ಧರ್ಮಸ್ಥಳ ಆಗಿದೆ. ಈ ಸಂಸ್ಥೆಯಿಂದಾಗಿ ಜನರು ಸ್ವ– ಉದ್ಯೋಗ, ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸದೃಢರಾಗಲು ಸಹಕಾರಿಯಾಗಿದೆ. ಹಾಗೆ ತಿಂಗಳ ಮಾಶಾಸನ, ಮನೆರಚನೆ, ಮನೆ ರಿಪೇರಿ, ಶೌಚಾಲಯ, ಸುಜ್ಞಾನ ನಿಧಿ, ನೆಲ್ಲಿನೀರು ವಾತ್ಸಲ್ಯ ಕಿಟ್ ಇತ್ಯಾದಿ ಸೌಲಭ್ಯ ಒದಗಿಸಿ ನಿರ್ಗತಿಕರ ಕುಟುಂಬಗಳಿಗೆ ಆಶ್ರಯ ಆಗಿರುವುದು ನಿಜಕ್ಕೂ ಹೆಮ್ಮೆ ಆಗಿದೆ. ಇಂತಹ ಸಂಸ್ಥೆಯನ್ನು ಬೆಳಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು ಶುಭ ನುಡಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಮಾಜಿ ನಗರ ಸಭಾ ಸದಸ್ಯರು ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ತರಕಾರಿ ಗಂಗಣ್ಣ, ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಯೋಜನೆ ಮಾಡದೇ ಇರುವ ಕೆಲಸಗಳಿಲ್ಲ, ತಿಪಟೂರು ಮತ್ತು ತಿಪಟೂರು ಗ್ರಾಮಾಂತರ ತಾಲೂಕಿನಲ್ಲಿ ಓಟ್ಟು 160 ಜನರಿಗೆ ಪ್ರತಿ ತಿಂಗಳು 160000/-ರೂ ಹಾಗೆ ಮಾಶಾಸನ ನೀಡಲಾಗುತ್ತಿದೆ. ತಾಲೂಕಲ್ಲಿ ಒಟ್ಟು 6 ವಾತ್ಸಲ್ಯ ಮನೆ ರಚನೆ ಆಗಿದೆ ಎಂದರು.
ತುಮಕೂರು 1 ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ಮಾತನಾಡುತ್ತಾ, ಧರ್ಮಸ್ಥಳ ಯೋಜನೆಯು ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಿಕಲ ಚೇತನರಿಗೆ ವೀಲ್ ಚೇರ್, ವಾಕ್ ಸ್ಟಿಕ್, ವಾಟರ್ ಬೆಡ್, ಕಮಾರ್ಡ್ ಚೇರ್ ಒದಗಿಸಲಾಗುತ್ತಿದೆ ಹಾಗೂ ಯೋಜನೆಯಲ್ಲಿ ಕೆರೆ ಹೊಳೆತ್ತುವ ಕಾರ್ಯಕ್ರಮ, ದೇವಸ್ಥಾನ, ಹಾಲಿನ ಡೈರಿಗೆ ಅನುದಾನ, ಆರೋಗ್ಯ ತಪಾಸಣಾ ಶಿಬಿರ ಹಾಗೆ ನಿರಂತರ ಮಾಸ ಪತ್ರಿಕೆ ಬಗ್ಗೆ ಮಾಹಿತಿ ನೀಡಿ, ಕವಿತರವರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಯೋಜನಾಧಿಕಾರಿಯವರಾದ ಉದಯ್, ಜನಜಾಗೃತಿ ವೇದಿಕೆ ಸದಸ್ಯರು ವಲಯ ಒಕ್ಕೂಟದ ಅಧ್ಯಕ್ಷರು ಮಹಾದೇವಮ್ಮ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಪದ್ಮಾವತಿ ಎಂ.ಡಿ., ಮೇಲ್ವಿಚಾರಕರು ಜಯಪ್ರಸಾದ್, ಕವಿತರವರ ತಾಯಿ ಕಮಲಮ್ಮ ಹಾಗೂ ರೂಪ ವಲಯದ ಸೇವಾಪ್ರತಿನಿಧಿ ಮತ್ತು VLE ಹಾಗೂ ಸ್ಥಳೀಯ ಸ್ವ ಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ವರದಿ: ಆನಂದ್ ತಿಪಟೂರು
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296