ತುಮಕೂರು: ಜಿಲ್ಲೆಯ 9 ತಾಲ್ಲೂಕಿನ 27 ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ 30 ಸದಸ್ಯ ಸ್ಥಾನಗಳಿಗೆ ನವೆಂಬರ್ 23ರಂದು ಚುನಾವಣೆ ನಡೆಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರು ನವೆಂಬರ್ 6ರಂದು ಅಧಿಸೂಚನೆ ಹೊರಡಿಸಲಿದ್ದಾರೆ.
ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗವು ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ವೇಳಾಪಟ್ಟಿಯನ್ವಯ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು ನವೆಂಬರ್ 12ರೊಳಗಾಗಿ ನಾಮಪತ್ರ ಸಲ್ಲಿಸತಕ್ಕದ್ದು. ನಾಮಪತ್ರಗಳ ಪರಿಶೀಲನೆಯನ್ನು ನವೆಂಬರ್ 13ರಂದು ನಡೆಸಲಾಗುವುದು. ಅಭ್ಯರ್ಥಿಗಳು ನಾಮಪತ್ರ ಹಿಂತೆಗೆದುಕೊಳ್ಳಲು ನವೆಂಬರ್ 15ರವರೆಗೂ ಅವಕಾಶವಿದ್ದು, ನವೆಂಬರ್ 23ರಂದು(ಮತದಾನದ ಅವಶ್ಯವಿದ್ದರೆ) ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದರೆ ನವೆಂಬರ್ 25ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ನಂತರ ನವೆಂಬರ್ 26ರಂದು ಬೆಳಿಗ್ಗೆ 8 ಗಂಟೆಯಿAದ ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಜಿಲ್ಲೆಯ ಚಿಕ್ಕನಾಯಕಹಳ್ಳಿ ತಾಲ್ಲೂಕು ದೊಡ್ಡ ಎಣ್ಣೇಗೆರೆ ಹಾಗೂ ಚೌಳಕಟ್ಟೆ; ತಿಪಟೂರು ತಾಲ್ಲೂಕು ಹುಚ್ಚಗೊಂಡನಹಳ್ಳಿ ಹಾಗೂ ಮಸವನಘಟ್ಟ; ತುರುವೇಕೆರೆ ತಾಲ್ಲೂಕು ಆನೆಕೆರೆ(3 ಸದಸ್ಯ ಸ್ಥಾನ), ಕೊಂಡಜ್ಜಿ, ಶೆಟ್ಟಿಗೊಂಡನಹಳ್ಳಿ; ಕುಣಿಗಲ್ ತಾಲ್ಲೂಕು ಉಜ್ಜನಿ ಹಾಗೂ ಅಮೃತೂರು; ತುಮಕೂರು ತಾಲ್ಲೂಕು ಸ್ವಾಂದೇನಹಳ್ಳಿ ಹಾಗೂ ಹಿರೇಹಳ್ಳಿ(2 ಸದಸ್ಯ ಸ್ಥಾನ); ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹಾಗೂ ರಂಗಾಪುರ; ಗುಬ್ಬಿ ತಾಲ್ಲೂಕು ಮೂಗನಾಯಕನಕೋಟೆ, ಎಸ್.ಕೊಡಗೀಹಳ್ಳಿ, ಪೆದ್ದನಹಳ್ಳಿ, ಶಿವಪುರ, ಅಡಗೂರು ಹಾಗೂ ಜಿ.ಹೊಸಹಳ್ಳಿ; ಶಿರಾ ತಾಲ್ಲೂಕು ಲಕ್ಷ್ಮೀಸಾಗರ ಹಾಗೂ ದೊಡ್ಡ ಅಗ್ರಹಾರ; ಪಾವಗಡ ತಾಲ್ಲೂಕು ತಿರುಮಣಿ, ಬ್ಯಾಡನೂರು, ಕಾಮನದುರ್ಗ(ನೀಲಮ್ಮನಹಳ್ಳಿ), ವದನಕಲ್ಲು, ರಂಗಸಮುದ್ರ ಹಾಗೂ ಕೊಡಮಡಗು ಗ್ರಾಮ ಪಂಚಾಯತಿಗಳಲ್ಲಿ ನವೆಂಬರ್ 23ರಂದು ಚುನಾವಣೆ ನಡೆಯಲಿದೆ.
ಚುನಾವಣೆಯನ್ನು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಸುವ ನಿಟ್ಟಿನಲ್ಲಿ ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನವೆಂಬರ್ 6 ರಿಂದ 26ರವರೆಗೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ಈ ನೀತಿ ಸಂಹಿತೆಯು ಬರ ಕಾಮಗಾರಿ, ಪ್ರವಾಹ ಇತ್ಯಾದಿ ಪ್ರಕೃತಿ ವಿಕೋಪ ಕಾರ್ಯಕ್ರಮಗಳಿಗೆ ಅನ್ವಯಿಸುವುದಿಲ್ಲ. ಗ್ರಾಮ ಪಂಚಾಯತಿ ಚುನಾವಣೆಗೆ ‘NOTA’ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Gp0Feftn1c40sYuKY8HX2Q